ಧಾರವಾಡ

ಧಾರವಾಡ: ಬಾಕಿ ಹಣಕ್ಕಾಗಿ ವಾಲ್ಮಿಯಲ್ಲಿ ಮತ್ತೆ ಪ್ರತಿಭಟನೆ

Published On :

ಧಾರವಾಡ: ಗುತ್ತಿಗೆದಾರರ ಬಾಕಿ ಹಣ ಪಾವತಿಸದೇ ಸತಾಯಿಸುತ್ತಿರುವ ಕರ್ನಾಟಕ ನೀರಾವರಿ ನಿಗಮದ (ವಾಲ್ಮಿ) ಕ್ರಮ ಖಂಡಿಸಿ ಕಾಮಗಾರಿ ಪಡೆದ ನೂರಾರು ಗುತ್ತಿಗೆದಾರರು ಇಲ್ಲಿನ ಹೈಕೋರ್ಟ್ ಸಂಚಾರಿ ಪೀಠದ ಬಳಿ ಇರುವ ನಿಗಮದ ಕಚೇರಿ ಎದುರು ಪ್ರತಿಭಟಿಸಿದರು. ಜುಲೈ 24ರಂದು ಈ ಕುರಿತು ಪ್ರತಿಭಟನೆ ನಡೆಸಿದಾಗ ಆ. 12ರೊಳಗೆ ಬಾಕಿ ರು. 800 ಕೋಟಿ ಪಾವತಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಭರವಸೆ ಈಡೇರದ ಕಾರಣ ಗುತ್ತಿಗೆದಾರರು ಸೋಮವಾರ ಪ್ರತಿಭಟನೆಗೆ ಮುಂದಾದರು. ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರರ ಬಿಲ್‌ಗಳು ಪಾಸ್ ಆಗಿದ್ದರೂ ಸಹ ಕಳೆದ ಫೆಬ್ರವರಿಯಿಂದ ಗುತ್ತಿಗೆದಾರರಿಗೆ ನಿಗಮ ಹಣ ನೀಡಿಲ್ಲ. ಅಲ್ಲದೇ, ಬಾಕಿ ಹಣ ನೀಡದ ಕಾರಣ ಪ್ರಗತಿಯಲ್ಲಿರುವ ಮಲಪ್ರಭಾ, ಘಟಪ್ರಭಾ ಹಾಗೂ ಹಾರಂಗಿ ಕಾಲುವೆ ಕಾಮಗಾರಿ ಸೇರಿದಂತೆ ಅನೇಕ ಯೋಜನೆಗಳು ಸ್ಥಗಿತಗೊಂಡಿವೆ. ಗುತ್ತಿಗೆದಾರರು ಸಾಲ ಮಾಡಿ ಕಾಮಗಾರಿಯನ್ನು ಕೈಗೆತ್ತಿಕೊಂಡು ಕಾಮಗಾರಿ ಪೂರೈಸಿದರೂ ನಿಗಮ ಹಣ ನೀಡಿಲ್ಲ ಎಂದು ನಿಗಮದ ಮುಖ್ಯಾಧಿಕಾರಿ ಎ.ಜಿ. ಹೊಸಮನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಅಲ್ಲದೇ, ರಾಷ್ಟ್ರೀಯ ಹೆದ್ದಾರಿ 4ನ್ನು ಬಂದ್ ಮಾಡುವ ಸಿದ್ಧತೆಯಲ್ಲಿದ್ದ ಗುತ್ತಿಗೆದಾರರಿಗೆ, ಆ. 31ರೊಳಗೆ ಹಣ ಪಾವತಿಸಲಾಗುತ್ತದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಲೋಕೇಶಕುಮಾರ ಮನವಿ ಮಾಡಿ ಪ್ರತಿಭಟನೆ ನಿಲ್ಲಿಸುವಲ್ಲಿ ಯಶಸ್ವಿಯಾದರು. ಬೆಳಗಾವಿ, ಗೋಕಾಕ, ರಾಮದುರ್ಗ, ಮಹಾಲಿಂಗಪುರ, ನವಲಗುಂದ, ರಾಯಭಾಗ, ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಗುತ್ತಿಗೆದಾರರಾದ ಎಂ.ಎಸ್. ರೊಟ್ಟಿ, ಜೆ.ಬಿ. ನರಗುಂದ, ಎಸ್.ಆರ್. ಗೂಳಪ್ಪನವರ, ಎಂ.ಎಸ್. ಧನಶೆಟ್ಟಿ, ಎಸ್.ಎಸ್. ವಾಲಿ, ಎ.ಎಸ್. ಕಿರಗಿ, ಎ.ವೈ. ತಟಗಾರ, ಬಿ.ಬಿ. ಕುಂಗಾಲಿ, ಎಸ್.ಎಸ್. ದಢೇದ, ಆರ್.ಬಿ. ಗಾಡಿ, ಎಸ್.ಬಿ. ಘೋರ್ಪಡೆ, ಎಸ್.ವಿ. ನಾಯಕ, ಬಿ.ಬಿ. ಜಾಧವ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.