ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ಪ್ರಚಾರ ಜೋರು
ಹುಬ್ಬಳ್ಳಿ: ಧಾರವಾಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಪ್ರದೀಪ ಶೆಟ್ಟರರವರು ಹಾವೇರಿ ಜಿಲ್ಲೆಯ ವಿವಿಧ ಗ್ರಾಪಂ ಮತ್ತು ಪಟ್ಟಣ ಪಂಚಾಯಿತಿ ಸದಸ್ಯರಲ್ಲಿ ಮತ ಯಾಚಿಸಿದರು.
ಹಾವೇರಿ ಜಿಲ್ಲೆಯ ಕರ್ಜಗಿ, ಕನವಳ್ಳಿ, ಬಸಾಪುರ, ಮೇವುಂಡಿ, ಬೆಳಗಲಿ, ಹಾಲಗಿ, ಹೊಸರಿತ್ತಿ, ಯಲಗಚ್ಚ, ಕನಕಾಪುರ, ನಿಲುಗಲ್ಲ ಗ್ರಾಪಗಳಿಗೆ ಭೇಟಿ ನೀಡಿ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕೆಂದು ಗ್ರಾಪಂ ಸದಸ್ಯರಲ್ಲಿ ಕೇಳಿಕೊಂಡರು.
ಈ ಸಂದರ್ಭ ಪ್ರದೀಪ ಶೆಟ್ಟರ ಮಾತನಾಡಿ, ಸ್ಥಳೀಯಾಡಳಿತದ ವಿಕೇಂದ್ರೀಕರಣಕ್ಕೆ ಧಕ್ಕೆ ತರಲು ಮುಂದಾಗಿರುವ ಹಾಗೂ ಬಿಜೆಪಿ ಜಾರಿಗೆ ತಂದಿದ್ದ ಜನಪರ ಯೋಜನೆಗಳನ್ನು ಕೈ ಬಿಟ್ಟು ದುರಾಡಳಿತ ನಡೆಸಲು ಹೊರಟಿರುವ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಹಾಗೂ ವಿಧಾನಪರಿಷತ್ನಲ್ಲಿ ಗ್ರಾಪಂ ಸದಸ್ಯರ ಧ್ವನಿಯಾಗಲು ನನಗೆ ಅವಕಾಶ ಕೊಡಬೇಕೆಂದರು.
ಮಾಜಿ ಶಾಸಕ ನೆಹರು ಓಲೇಕಾರ, ಸೋಮಶೇಖರ ತಿಪ್ಪಶೆಟ್ಟಿ, ಪ್ರಭು ಹಿಟ್ನಳ್ಳಿ, ಮಲ್ಲಿಕಾರ್ಜುನ ಸಾತೇನಹಳ್ಳಿ, ಮಂಜುನಾಥ ಪುತಳೇಕರ, ಪ್ರದೀಪ ಮುಳ್ಳೂರ, ರಮೇಶ ಪಾಲನಕರ, ಗಿರೀಶ ತುಪ್ಪದ, ನಿರಂಜನ ಹೇರೂರ, ಕೆ.ಸಿ.ಕೋರಿ, ಬಸವರಾಜ ಡೊಂಕಣ್ಣವರ, ಗುರುಬಸಪ್ಪ ನವಲಿ, ನಾಗರಾಜ ಬಸೇಗಣ್ಣಿ, ತಾಪಂ ಸದಸ್ಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

