ಧಾರವಾಡ

ಇಂದು ಜೀವನ ಚರಿತ್ರೆ ಬಿಡುಗಡೆ

Published On :

ಧಾರವಾಡ: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸಂಸ್ಥಾಪಕ ಪ್ರೊ.ಎಂ.ಎಸ್. ನಂಜುಂಡರಾವ್ ಅವರ ಜೀವನ ಚರಿತ್ರೆ ಹೊಂದಿದ 'ಅನನ್ಯ ಕಲಾಸಾರಥಿ ನಂಜುಂಡರಾವ್‌' ಪುಸ್ತಕ ಬಿಡುಗಡೆಯನ್ನು ಆ. 24ರಂದು ಹಮ್ಮಿಕೊಳ್ಳಲಾಗಿದೆ.
ಶುಕ್ರವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಂಜುಂಡರಾವ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಅವರ ಸಹೋದರ ಎಂ.ಎಸ್. ಲಕ್ಷ್ಮೀಶ, ನಂಜುಂಡರಾವ್ ಅವರು ನಾಲ್ಕು ದಶಕಗಳ ಕಾಲ ಶಿಕ್ಷಣ ಹಾಗೂ ಚಿತ್ರಕಲಾ ಪರಿಷತ್ತಿಗೆ ಸೇವೆ ಸಲ್ಲಿಸಿದರು. ಕಲಾವಿದರೇ ಚಿತ್ರಕಲಾ ಪರಿಷತ್ತನ್ನು ಒಂದು ಉತ್ತಮ ವೇದಿಕೆಯಾಗಿ ರೂಪಿಸಿಕೊಟ್ಟರು.
ಈ ಹಿನ್ನೆಲೆಯಲ್ಲಿ ಅವರ ಕುರಿತಾದ ಈ ಪುಸ್ತಕವನ್ನು ಸತತ ಎರಡು ವರ್ಷಗಳ ಕಾಲ 15 ಲಕ್ಷ ವೆಚ್ಚದಲ್ಲಿ ಪ್ರಕಟಿಸಲಾಗಿದೆ.
ಈಗಾಗಲೇ ಬೆಂಗಳೂರಿನಲ್ಲಿ ಈ ಕೃತಿ ಬಿಡುಗಡೆಗೊಂಡಿದ್ದು, ಶನಿವಾರ ಸಂಜೆ 5.30ಕ್ಕೆ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಧಾರವಾಡದ ಕಲಾಮಂಡಳದ ಆಶ್ರಯದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.
ನಂಜುಂಡರಾವ್ ಅವರ ಮಗ ಹಾಗೂ ಟ್ರಸ್ಟ್ ಕಾರ್ಯದರ್ಶಿ ಎಸ್.ಎನ್. ರವಿಶಂಕರ ಮಾತನಾಡಿ, ಸಮಾರಂಭದಲ್ಲಿ ಖ್ಯಾತ ವಿಮರ್ಶಕ ಪ್ರೊ.ಗಿರಡ್ಡಿ ಗೋವಿಂದರಾಜ, ಹಿರಿಯ ಕಲಾವಿದ ಗುಲ್ಬರ್ಗಾದ ಡಾ.ವಿ.ಜಿ. ಅಂದಾನಿ, ಕಲಾ ಇತಿಹಾಸಕಾರ ಬೆಂಗಳೂರಿನ ಡಾ.ಆರ್.ಎಚ್. ಕುಲಕರ್ಣಿ ಭಾಗವಹಿಸುತ್ತಾರೆ ಎಂದರು.
ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪ್ರೇರಣೆಯಿಂದ ಖಾದಿ ಭಂಡಾರದ ಸೇವೆಗೆ ರಾಜೀನಾಮೆ ಸಲ್ಲಿಸಿ 1960ರಲ್ಲಿ ಚಿತ್ರಕಲಾ ಪರಿಷತ್ ಆರಂಭಿಸಿದರು. ಪ್ರೊ೤ ನಂಜುಂಡ್ ರಾವ್ ಸಾಧನೆ ಅರಿತು ಪ್ರಸಿದ್ಧ ಲೇಖಕಿ ನಂ. ನಾಗಲಕ್ಷ್ಮಿ ಈ ಕೃತಿ ಬರೆದಿದ್ದು, ಗುಣಮಟ್ಟದ ಮುದ್ರಣ, ಸೃಜನಾತ್ಮಕ ಮುಖಪುಟ ವಿನ್ಯಾಸ ಹೊಂದಿ ರಾವ್ ಅವರ ಹಳ್ಳಿಯ ಜೀವನದಿಂದ ಹಿಡಿದು ಪರಿಷತ್ತಿನ ದಿನಗಳು ಪುಸ್ತಕದಲ್ಲಿ ಲಭ್ಯ. ಪುಸ್ತಕವನ್ನು ಎರಡು ರೀತಿ ಹೊರ ತರಲಾಗಿದ್ದು, ಪ್ರೀಮಿಯರ್ ಪುಸ್ತಕದ ಬೆಲೆ 750 ಹಾಗೂ ಪಾಪ್ಯುಲರ್ ಪುಸ್ತಕದ ಬೆಲೆ 475 ಇರುತ್ತದೆ. ಸಮಾರಂಭದ ದಿನ ತಲಾ ಶೇ. 25ರಷ್ಟು ರಿಯಾಯ್ತಿ ನೀಡಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಲಾ ಮಂಡಳದ ಕಲಾವಿದರಾದ ಮಧು ದೇಸಾಯಿ, ಗಾಯತ್ರಿ ದೇಸಾಯಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.