ಇಸ್ಕಾನ್ನಲ್ಲಿ ಕೃಷ್ಣಾಷ್ಟಮಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 28
ಅವಳಿ ನಗರ ಮಧ್ಯದಲ್ಲಿರುವ ಇಸ್ಕಾನ್ನಲ್ಲಿ ಬುಧವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವವನ್ನು ವೈಭವದಿಂದ ಆಚರಿಸಲಾಯಿತು.
ದೇವಾಲಯ ಸಮುಚ್ಚಯಕ್ಕೆ ಬಣ್ಣ ಬಳಿದು ವರ್ಣಮಯ ವಿದ್ಯುತ್ ದೀಪಗಳಿಂದ ಜಗಮಗಿಸುವಂತೆ ಅಲಂಕರಿಸಲಾಗಿತ್ತು. ಆರ್ಕೇಡ್ಸ್, ಜರ್ಬರಾ, ಡೈಸಿ, ಟೂಬರೋಜ, ಗುಲಾಬಿ ಮತ್ತಿತರ ಅನೇಕ ವರ್ಣಮಯ ಪುಷ್ಪಗಳಿಂದ ಅಲಂಕೃತವಾದ ದೇವಾಲಯ ಸಮುಚ್ಚಯವು ಹೂ ತೋಟದಂತೆ ಕಂಗೊಳಿಸುತ್ತಿತ್ತು.
ಬೆಳಗಿನಜಾವ ಶ್ರೀಕೃಷ್ಣ ಬಲರಾಮರ ಮಂಗಳಾರತಿಯೊಂದಿಗೆ ಉತ್ಸವ ಆರಂಭಗೊಂಡಿತು. ಬೆಳಗಿನ ಜಾವದಲ್ಲಿಯೂ ಹಲವಾರು ಭಕ್ತರು ಶ್ರೀ ಕೃಷ್ಣಬಲರಾಮರ ದರ್ಶನ ಪಡೆಯಲು ದೇವಾಲಯಕ್ಕೆ ಬಂದದ್ದು ವಿಶೇಷ. ನಂತರ ವಿಗ್ರಹಗಳನ್ನು ಬಂಗಾರದ ಕುಸುರಿಯುಳ್ಳ ಕಿತ್ತಳೆ ಬಣ್ಣದ ರೇಷ್ಮೆಯ ವಸ್ತ್ರಗಳಿಂದ ಹಾಗೂ ವಿವಿಧ ಬಗೆಯ ಆಭರಣಗಳಿಂದ ಅಲಂಕರಿಸಲಾಗಿತ್ತು. ಇದೇ ಸಂದರ್ಭ ಶೃಂಗಾರ ಆರತಿ ಜರುಗಿತು.
ಜನರ ಮೆಚ್ಚುಗೆ: ವಾತ್ಸಲ್ಯ ಸತ್ಸಂಗ ತಂಡದವರಿಂದ ಭಜನೆಗಳೊಂದಿಗೆ ಸಂಗೀತ ಕಾರ್ಯಕ್ರಮ ಹಾಗೂ ವಿಶೇಷ ಪಂಚಾಮೃತ ಅಭಿಷೇಕ ನೆರವೇರಿತು. ನಂತರ ವೈಭವ ಮತ್ತು ವಿಹಾರ ಇವರ ಜುಗಲ್ಬಂದಿ ಕಾರ್ಯಕ್ರಮ, ಮನುಕುಮಾರ ಹಾಗೂ ತಂಡದವರು ಪ್ರಸ್ತುತ ಪಡಿಸಿದ ತಬಲಾವಾದನ, ಮಾಯಾ ಚಿಕ್ಕೆರೂರ ಇವರ ಹಿಂದೂಸ್ತಾನಿ ಗಾಯನವು ಜನರ ಮನಸೂರೆಗೊಂಡಿತು. ಕೃಷ್ಣ ಪ್ರಿಯಾರವರು ಸತತವಾಗಿ 1 ತಾಸಿನಯವರೆಗಿನ ತಮ್ಮ ವೀಣಾವಾದನದಿಂದ ಜನರು ತಲೆದೂಗುವಂತೆ ಮಾಡಿದರು.
ವಿದುಷಿ ಸಹನಾ ಭಟ್ ಮತ್ತು ತಂಡದಿಂದ ಶ್ರೀಕೃಷ್ಣನ ಜನ್ಮ ಹಾಗೂ ಅವನ ಲೀಲೆಗಳ ಬಗ್ಗೆ ಪ್ರಸ್ತುತಗೊಂಡ ವಿಶ್ವಗೋಪಾಲ ಎಂಬ ನೃತ್ಯನಾಟಕ ಜನರ ಮೆಚ್ಚುಗೆ ಪಡೆಯಿತು. ಮೋಹನ ಗುರುಸ್ವಾಮಿಯವರ ಸುಶ್ರಾವ್ಯ ಭಕ್ತಿಗೀತ್ನೆ ಪ್ರಸ್ತುತ ಪಡಿಸಿದರು. ನಂತರ, ವಿಶೇಷವಾಗಿ ಅಲಂಕರಿಸಲಾದ ವನಮಾಲಿ ಗಾರ್ಡನ್ನಲ್ಲಿ ದರ್ಶನಕ್ಕೆಂದು ವಿಗ್ರಹಗಳನ್ನ್ನು ಇಡಲಾಯಿತು.
ಶ್ರೀಕೃಷ್ಣ ಬಲರಾಮರ ಮಹಾಭಿಷೇಕ ನಡೆಯಿತು. ವಿಗ್ರಹಗಳಿಗೆ ಮೊದಲು ತೀಲ-ಉದಕ-ಸ್ನಾನ ಎಂದು ಕರೆಯುವ ಎಳ್ಳಿನ ಲೇಪ ಲೇಪಿಸಿ ಪೂಜಿಸಲಾಯಿತು. ಅರ್ಚಕರು ಮಂತ್ರ ಹೇಳುತ್ತಿದ್ದಂತೆ ಭಕ್ತರು ಪಂಚಗವ್ಯ, ಸುಗಂಧಿತ ನೀರು, ಹಾಲು, ಮೊಸರು, ತುಪ್ಪ, ಜೇನು, ಬೆಲ್ಲದ ನೀರು, ಎಳೆನೀರು ಮತ್ತು ಹಣ್ಣಿನ ರಸಗಳಿಂದ ಅಭೀಷೇಕ ಮಾಡಿದರು. ಈ ಮಧ್ಯೆ ಜನ್ಮಾಷ್ಟಮಿಯ ಆಚರಣೆ ಮಹತ್ವದ ಬಗ್ಗೆ ಹು-ಧಾ ಇಸ್ಕಾನ್ ಅಧ್ಯಕ್ಷ ರಾಜೀವ ಲೋಚನ ದಾಸ ಅವರಿಂದ ಉಪನ್ಯಾಸ ಜರುಗಿತು.
ಮಂಗಳಾರತಿ: ಮಧ್ಯರಾತ್ರಿ ಸುಮಾರು 12 ಗಂಟೆಗೆ ಮಹಾಮಂಗಳಾರತಿ ಪ್ರಾರಂಭಗೊಂಡಿತು. ವೈಭವದ ವಸ್ತ್ರ ಹಾಗೂ ಆಭರಣಗಳಿಂದ ಅಲಂಕೃತವಾದ ಶ್ರೀ ಕೃಷ್ಣ ಬಲರಾಮರ ಮೂರ್ತಿಗಳಿಗೆ ಮಂಗಳಾರತಿ ನಂತರ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

