ಧಾರವಾಡ

9ರಿಂದ ಭಾರತ-ವಿಂಡೀಸ್ 'ಎ' ತಂಡದ ಮಧ್ಯೆ ಟೆಸ್ಟ್ ಪಂದ್ಯ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 31
ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಟೆಸ್ಟ್ ಪಂದ್ಯ ನಡೆಯುತ್ತಿರುವ ಹುಬ್ಬಳ್ಳಿಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಎರಡು ತಂಡಗಳಿಂದ ಉತ್ತಮ ಪೈಪೋಟಿ ನಿರೀಕ್ಷಿಸಬಹುದು ಎಂದು ಬಿಸಿಸಿಐ ಕ್ಯೂರೆಟರ್ ಪಿ. ವಿಶ್ವನಾಥ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 9 ರಿಂದ 13ರವರೆಗೆ ಇಲ್ಲಿಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ 'ಎ' ತಂಡಗಳ ನಡುವೆ ಪ್ರಥಮ ಟೆಸ್ಟ್ ಪಂದ್ಯ ನಡೆಯಲಿದೆ. ಹುಬ್ಬಳ್ಳಿಯ ಕ್ರಿಕೆಟ್ ಮೈದಾನದ ಔಟ್ ಫೀಲ್ಡ್ ಮತ್ತು ವಿಕೆಟ್‌ನಲ್ಲಿ ಕೆಲವು ಸಣ್ಣ ಪುಟ್ಟ ಮಾರ್ಪಾಡುಗಳನ್ನು ಮಾಡಬೇಕಿದ್ದು, ಸುಧಾರಣೆಯಾಗಬೇಕಿರುವ ಸಂಗತಿಗಳ ಕುರಿತು ಕ್ಯೂರೇಟರ್‌ಗೆ ಮಾಹಿತಿ ನೀಡಲಾಗಿದೆ. ವೆಸ್ಟ್ ಇಂಡೀಸ್ ತಂಡ ಈಗಾಗಲೇ ಭಾರತ ಪ್ರವಾಸ ಕೈಗೊಳ್ಳುವ ತಂಡವನ್ನು ಪ್ರಕಟಿಸಿದ್ದು, ಭಾರತೀಯ ತಂಡದಲ್ಲಿ ಸುರೇಶ ರೈನಾ, ಶಿಖರ ಧವನ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಕನಿಷ್ಠ 5-6 ಕ್ರಿಕೆಟಿಗರು ತಂಡದಲ್ಲಿರುವ ಸಾಧ್ಯತೆ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಚಿಂತನೆ: ಹುಬ್ಬಳ್ಳಿ ಕೆಎಸ್‌ಸಿಎ ಕ್ರಿಕೆಟ್ ಮೈದಾನದ ಪಿಚ್‌ನ್ನು ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ರೂಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಡಿಸೆಂಬರ್‌ನಲ್ಲಿ ರಣಜಿ ಪಂದ್ಯಾವಳಿ ಆರಂಭವಾಗಲಿದ್ದು, ಈ ಮೈದಾನದಲ್ಲಿ ಮುಂಬೈ ಮತ್ತು ಉತ್ತರಪ್ರದೇಶ ತಂಡಗಳ ಮಧ್ಯೆ ಪಂದ್ಯ ಆಯೋಜಿಸುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ.
ಸೆ.6 ರಂದು ಸಂಜೆ ಭಾರತ ಮತ್ತು ವೆಸ್ಟ್‌ಇಂಡಿಸ್ ತಂಡಗಳು ಹುಬ್ಬಳ್ಳಿಗೆ ಆಗಮಿಸಲಿದ್ದು, ಸೆ. 7ರಂದು ಅಭ್ಯಾಸ ಪಂದ್ಯವನ್ನು ಆಡಲಿವೆ. ಹುಬ್ಬಳ್ಳಿಯಿಂದ ಆರಂಭವಾಗುವ ವೆಸ್ಟ್ ಇಂಡೀಸ್ 'ಎ' ತಂಡದ ಪ್ರವಾಸ ಬೆಂಗಳೂರಿನಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡುವ ಮೂಲಕ ಮುಕ್ತಾಯಗೊಳ್ಳಲಿದೆ. ಏತನ್ಮಧ್ಯೆ ಶಿವಮೊಗ್ಗದಲ್ಲಿ ಒಂದು ಟೆಸ್ಟ್ ಮತ್ತು ಟ್ವೆಂಟಿ-20, ಮೈಸೂರಿನಲ್ಲಿ ಒಂದು ಟೆಸ್ಟ್ ಪಂದ್ಯವನ್ನು ಭಾರತದ ವಿರುದ್ಧ ಆಡಲಿದೆ ಎಂದು ತಿಳಿಸಿದರು. ಬಿಸಿಸಿಐ ಕ್ಯೂರೇಟರ್ ನಾರಾಯಣರಾಜು, ಕೆಎಸ್‌ಸಿಎ ಕ್ರಿಕೆಟ್ ಆಪರೇಷನ್ ಜನರಲ್ ಮ್ಯಾನೇಜರ್ ಸತೀಶ ವಿಶ್ವನಾಥನ್, ಧಾರವಾಡ ವಲಯ ಕೆಎಸ್‌ಸಿಎ ಸಂಯೋಜಕ ಬಾಬಾ ಬುಸದ, ಧಾರವಾಡ ವಲಯ ಕೆಎಸ್‌ಸಿಎ ಚೇರ್‌ಮನ್ ವೀರಣ್ಣ ಸವಡಿ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.