ಧಾರವಾಡ

ವಾರ್ಡ್‌ಗಳ ಅಭಿವೃದ್ಧಿಗೆ ಬದ್ಧ: ಶಾಸಕ ಕುಲಕರ್ಣಿ

Published On :

ಧಾರವಾಡ: ರಸ್ತೆ ಅಭಿವೃದ್ದಿಗಾಗಿ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ವಾರ್ಡ್‌ಗಳ ಸಮಗ್ರ ಅಭಿವೃದ್ಧಿ ಮಾಡಲು ಸಿದ್ದ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು. ನಗರದ ಸಿದ್ದಾರ್ಥ ಕಾಲೊನಿ ಹಾಗೂ ಸೈನಿಕ ಕಾಲೊನಿಗೆ ಇತ್ತೀಚೆಗೆ ಭೇಟಿ ನೀಡಿ ವಾರ್ಡ್ ಪರಿಶೀಲನೆ ನಡೆಸಿದ ನಂತರ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಸ್ತೆ ದುರಸ್ತಿ ಹಾಗೂ ಅಭಿವೃದ್ದಿ ಕಾರ್ಯ ಎಲ್ಲ ವಾರ್ಡ್‌ಗಳಲ್ಲಿ ಆರಂಭವಾಗಲಿದೆ. ಟೆಂಡರ್ ಕರೆದು ತೆರೆದ ಒಳಚರಂಡಿ, ರಸ್ತೆ ಮತ್ತಿತರ ಕಾಮಗಾರಿ ಆರಂಭಿಸಲಾಗುವುದು. ಬಡಾವಣೆಗಳಲ್ಲಿರುವ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ ಪರಿಹರಿಸಲಾಗುವುದು ಎಂದು ತಿಳಿಸಿದರು. ಪಾಲಿಕೆ ಸದಸ್ಯ ಶ್ರೀಕಾಂತ ಜಮನಾಳ, ಸುರೇಶ ಎಲಿಗಾರ, ಸಲೀಂಖಾನ ಪಠಾಣ, ನಜೀರಹ್ಮದ, ನದಾಫ, ನವೀನ, ಮೋಹನ ಅರ್ಕಸಾಲಿ, ಪ್ರಶಾಂತ ಕೇಕರೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವರದಕ್ಷಿಣೆ ಕಿರುಕುಳ: ಮಹಿಳೆ ಆತ್ಮಹತ್ಯೆ
ಹುಬ್ಬಳ್ಳಿ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದಿವಟೆ ಓಣಿಯಲ್ಲಿ ಸಂಭವಿಸಿದೆ. ಸರಸ್ವತಿ ಮಂಜುನಾಥ ಸುಂಕದ ಎಂಬುವಳೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ರಾಯಚೂರ ಜಿಲ್ಲೆಯ ಹೊನ್ನಳ್ಳಿಯ ಸರಸ್ವತಿಯ ವಿವಾಹವು ಏಳು ತಿಂಗಳುಗಳ ಹಿಂದೆ ಮಂಜುನಾಥನೊಂದಿಗೆ ನೆರವೇರಿತ್ತು. ಮದುವೆ ಕಾಲಕ್ಕೆ ಮೃತಳ ತಂದೆ ಸಿದ್ದಪ್ಪ ವರದಕ್ಷಿಣೆ ರೂಪದಲ್ಲಿ ರು. 1 ಲಕ್ಷ ಹಾಗೂ 2 ತೊಲೆ ಬಂಗಾರ ಕೊಟ್ಟಿದ್ದರೆನ್ನಲಾಗಿದೆ. ಆದಾಗ್ಯೂ, ಮದುವೆ ನಂತರ ಪತಿ ಹಾಗೂ ಆಕೆಯ ಕುಟುಂಬದ ಸದಸ್ಯೆರಲ್ಲರೂ ಕೂಡಿಕೊಂಡು ಹಣ ಹಾಗೂ ಬಂಗಾರ ತರುವಂತೆ ನಿತ್ಯವೂ ಪೀಡುತ್ತಿದ್ದರೆನ್ನಲಾಗಿದೆ. ಇದರಿಂದಲೇ ಬೇಸತ್ತು ಸರಸ್ವತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಂದೆ ಸಿದ್ದಪ್ಪ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೈಕ್ ಕಳ್ಳತನ: ಪ್ರಕರಣ ದಾಖಲು
ಹುಬ್ಬಳ್ಳಿ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ರಸ್ತೆ ಕಾಂಪೌಂಡ್‌ದಲ್ಲಿದ್ದ ಹಾಗೂ ರೆಸಿಡೆನ್ಸಿ ಎದುರು ನಿಲ್ಲಿಸಿದ್ದ ಬೈಕ್‌ಗಳು ಕಳ್ಳತನವಾಗಿರುವುದು ಪ್ರಕರಣ ದಾಖಲಾಗಿವೆ. ವಿದ್ಯಾನಗರ ಮಾರಡಗಿ ರಸ್ತೆ ಕಾಂಪೌಂಡ್‌ದಲ್ಲಿದ್ದ ಗುರುದತ್ತ ಕಾಲನಿಯ ನಾಗರಾಜ ಪಟ್ಟಣ ಹಾಗೂ ಶೀಲವಂತ ಓಣಿಯ ಕೆಎಂ ರೆಸಿಡೆನ್ಸಿ ಎದುರು ನಿಲ್ಲಿಸಿದ್ದ ವೀರಚಂದ್ರ ಜೈನ ಎಂಬುವರಿಗೆ ಸೇರಿದ ಬೈಕ್‌ಗಳು ಕಳ್ಳತನವಾಗಿವೆ. ಈ ಕುರಿತಂತೆ ವಿದ್ಯಾನಗರ ಹಾಗೂ ಘಂಟಿಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.