ಬೆಳೆ ಪರಿಹಾರಕ್ಕೆ ಅರ್ಜಿ: ಅವಧಿ ವಿಸ್ತರಿಸಿ
ನರಗುಂದ: ರಾಜ್ಯ ಸರ್ಕಾರ ಬೆಳೆ ನಷ್ಟ ಹೊಂದಿರುವ ರೈತರು ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಡಿ. 5 ಕೊನೆಯ ದಿನವನ್ನಾಗಿ ಘೋಷಿಸಿದೆ. ಈ ಭಾಗದಲ್ಲಿ ಕನಕ ಬಿಟಿ ಹತ್ತಿಯಿಂದ ತೀವ್ರ ತರದ ಸಂಕಷ್ಟ ಎದುರಿಸಿದ್ದು, ಅಲ್ಪ ದಿನಗಳಲ್ಲಿ ಈ ಅರ್ಜಿ ಸಲ್ಲಿಸಲು ಈ ಭಾಗದ ಜನರಿಂದ ಸಾಧ್ಯವಾಗುತ್ತಿಲ್ಲ. ಕೂಡಲೇ ರಾಜ್ಯ ಸರ್ಕಾರ ಡಿ. 20ರ ವರೆಗೆ ಅವಧಿ ವಿಸ್ತರಿಸುವಂತೆ ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದ ಹಲವು ಕಡೆಗಳಲ್ಲಿ ಸತತವಾಗಿ 2 ವರ್ಷದಿಂದ ಬರಗಾಲವಿದೆ. ಆವರಿಸಿದೆ. ನರಗುಂದ ತಾಲೂಕಿನಲ್ಲಿ ಈ ವರ್ಷವೂ ಬರದ ಛಾಯೆಯಿದೆ. ಮುಂಗಾರು ಮಳೆ ಸಂಪೂರ್ಣವಾಗಿ ಕೈ ಕೊಟ್ಟಿದ್ದರಿಂದ ರೈತರು ಈ ಬಾರಿ ಹಿಂಗಾರು ಮಳೆ, ಕಾಲುವೆ ನೀರನ್ನು ನೆಚ್ಚಿಕೊಂಡು ಬಿ.ಟಿ. ಹತ್ತಿ ಬಿತ್ತನೆ ಮಾಡಿದ್ದಾರೆ. ಆದರೆ ಬೀಜಗಳು ಕಳಪೆಯಾಗಿದ್ದರಿಂದ ತಾಲೂಕಿನ ಬಹುತೇಕ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿ ಇರುವಾಗ ರೈತರಿಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಕಾಲಾವಕಾಶ ಅಗತ್ಯ. ಅಲ್ಪ ಅವಧಿಯಲ್ಲಿ ತಾಲೂಕಿನ ರೈತ ಸಮುದಾಯಕ್ಕೆ ಮೂಲ ದಾಖಲೆಗಳನ್ನು ತರಿಸಿಕೊಂಡು ಅರ್ಜಿ ಸಲ್ಲಿಸಲು ಕಷ್ಟ. ಹೀಗಾಗಿ ಜಿಲ್ಲಾಧಿಕಾರಿಯವರು ಈ ತಿಂಗಳು 20ರ ವರೆಗೆ ಅರ್ಜಿ ಸ್ವೀಕರಿಸುವ ಅವಧಿ ಮುಂದುವರಿಸಬೇಕು. ಕನಕ ಬಿಟಿಹತ್ತಿ ಬೆಳೆದು ಕೈಸುಟ್ಟಿಕೊಂಡ ರೈತನಿಗೆ ಪ್ರತಿ ಕುಟುಂಬಕ್ಕೆ ರು. 25 ಸಾವಿರ ಪರಿಹಾರ ನೀಡಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಕಾಲುವೆಗೆ 15ರ ವರೆಗೆ ನೀರು ಹರಿಸಿ
ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಬಲದಂಡೆ ಕಾಲುವೆಗಳಿಗೆ ಈ ತಿಂಗಳ 30ರ ವರೆಗೆ ಮಾತ್ರ ನೀರು ಬಿಡಲಾಗುವುದು ಎಂದು ಅಧಿಕಾರಿಗಳು ಪ್ರಕಟಣೆ ನೀಡಿದ್ದು ಖಂಡನೀಯ. ಈ ವರ್ಷ ರೈತರು ಹಿಂಗಾರು ಬೆಳೆ ಮಾತ್ರ ಬಿತ್ತನೆ ಮಾಡಿದ್ದಾರೆ. ಹಾಗಾಗಿ ಈ ತಿಂಗಳ 30ರ ಬಳಿಕ ಕಾಲುವೆ ನೀರು ಸ್ಥಗಿತಗೊಳಿಸಿದರೆ ಹಿಂಗಾರು ಬೆಳೆಗಳು ಬರಲು ಸಾಧ್ಯವಿಲ್ಲ. ಹಾಗಾಗಿ ಕಾಲುವೆ ನೀರನ್ನು ಜನವರಿ 15ರ ವರೆಗೆ ಹರಿಸಲು ಸಂಬಂಧಪಟ್ಟ ಅಧಿಕಾರಿಗಳು ನಿರ್ಣಯ ತೆಗೆದುಕೊಳ್ಳಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಈ ಭಾಗದ ರೈತರೆಲ್ಲ ಸೇರಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

