ನಾಳೆ 10 ಸಾಧಕರಿಗೆ ಅವ್ವ ಪ್ರಶಸ್ತಿ ಪ್ರದಾನ
ಹುಬ್ಬಳ್ಳಿ: ಅವ್ವ ಸೇವಾ ಟ್ರಸ್ಟ್ ವತಿಯಿಂದ ಪ್ರಸಕ್ತ ಸಾಲಿನ 'ಅವ್ವ' ಪ್ರಶಸ್ತಿ ವಿತರಣಾ ಸಮಾರಂಭವನ್ನು ಡಿ. 14ರಂದು ಬೆಳಗ್ಗೆ 10.45ಕ್ಕೆ ನಗರದ ಗುಜರಾತ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಜನರಿಗೆ ಅವ್ವ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ರಾಷ್ಟ್ರಮಟ್ಟದ ಪ್ರತಿಭಾವಂತ ಬಡ ಸೈಕ್ಲಿಂಗ್ ಕ್ರೀಡಾಪಟು ಬಿಜಾಪುರದ ಶೈಲಾ ಮಟ್ಟ್ಯಾಳಗೆ ಅಂತಾರಾಷ್ಟ್ರೀಯ ಗುಣಮಟ್ಟದ ಸೈಕಲ್ ವಿತರಿಸಲಾಗುವುದು ಎಂದು ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೊಸನಗರ ಶ್ರೀರಾಮಚಂದ್ರಪುರಮಠದ ಜಗದ್ಗುರು ಶಂಕಾರಾಚಾರ್ಯ ಶ್ರೀಮದ್ ರಾಘವೇಶ್ವರ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ವಿ. ಗೋಪಾಲಗೌಡ ಪ್ರಶಸ್ತಿ ಪ್ರದಾನ ಮಾಡುವರು. ಕಿರುತೆರೆ ಕಲಾವಿದೆ ಜಯಲಕ್ಷ್ಮೀ ಪಾಟೀಲ ಅತಿಥಿಯಾಗಿ ಪಾಲ್ಗೊಳ್ಳುವರು.
ಸಕ್ಕರೆ ಉದ್ಯಮಿ ವಿದ್ಯಾ ಮುರಕುಂಬಿ, ಹಿರಿಯ ಪೊಲೀಸ್ ಅಧಿಕಾರಿ ಯಶೋದಾ ಒಂಟಗೋಡಿ, ಉದ್ಯಮಿ ಕಾಡಪ್ಪ ಮೈಸೂರು, ಕನ್ನಡಪ್ರಭ ಅಂಕಣಕಾರ ಎ. ಆರ್. ಮಣಿಕಾಂತ, ವಿಕಲಚೇತನ ಕ್ರೀಡಾಪಟು ಗಿರೀಶ ನಾಗರಾಜಗೌಡ, ಕಂಪ್ಯೂಟರ್ ಮಾಂತ್ರಿಕ ಹಳ್ಳಿ ಹೈದ ರಮೇಶ ಬಲ್ಲಿದ್, ವಿಶ್ವಸಂಸ್ಥೆಯ ಗಮನ ಸೆಳೆದ ಕನ್ನಡತಿ ಸುಜಾತಾ ಆನಿಶೆಟ್ಟರ್, ಎಂಎನಲ್ಲಿ 8 ಚಿನ್ನದ ಪದಕ ಪಡೆದ ಚುರುಮರಿ ಮಾರುವವರ ಮಗಳಾದ ಎಂ. ಅಕ್ಷತಾ, ವಿಶ್ವಸಂಸ್ಥೆಯ ಮೆಚ್ಚುಗೆಗೆ ಪಾತ್ರಳಾದ ಗ್ರಾಮೀಣ ಪ್ರತಿಭೆ ಮಂಜುಳಾ ಮುನವಳ್ಳಿ ಹಾಗೂ ಏಷಿಯನ್ ಕಿರಿಯರ ಕ್ರೀಡಾಕೂಟಕ್ಕೆ ಆಯ್ಕೆಯಾದ ನಿವೇದಿತಾ ಸಾವಂತ ಅವರಿಗೆ ಪ್ರಸಕ್ತ ಸಾಲಿನ ಅವ್ವ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಇದೇ ಸಂದರ್ಭದಲ್ಲಿ 11 ಪ್ರತಿಭಾವಂತ ಅಂಧ ವಿದ್ಯಾರ್ಥಿಗಳಿಗೆ ಆಸರೆ ನೀಡುವ ಮೂಲಕ ರೋಣ ತಾಲೂಕು ಹೊಳೆಆಲೂರಿನ ಜ್ಞಾನಸಿಂಧು ಅಂಧ ಮಕ್ಕಳ ಶಾಲೆಗೆ ಆಯ್ಕೆ ಮಾಡಲಾಗುವುದು. ರಾಮಣ್ಣ ಮುಳ್ಳೂರ ಅವರು ರಚಿಸಿರುವ 'ಅವ್ವ ಕವನ ಸಂಕಲನ' ಬಿಡುಗಡೆ ಮಾಡಲಾಗುವುದು. ಅವ್ವನ ಮಹತ್ವ ಕುರಿತು ಗಣ್ಯರಿಂದ ಚಿಂತನ-ಮಂಥನ ಹಾಗೂ 2014ರ ದಿನದರ್ಶಿಕೆ ಬಿಡುಗಡೆ ಮಾಡಲಾಗುವುದು ಎಂದು ಹೊರಟ್ಟಿ ತಿಳಿಸಿದರು.
ನೊಂದಿರುವ ಬಡವರಿಗೂ ಅವ್ವ ಸೇವಾ ಟ್ರಸ್ಟ್ ವತಿಯಿಂದ ಸಹಾಯ ನೀಡಲಾಗುವುದು. ಕುಟುಂಬದಿಂದ ಹೊರಬಿದ್ದಿರುವ ಪಾಲಕರನ್ನು ಮರಳಿ ಅವರ ಕುಟುಂಬಕ್ಕೆ ಸೇರಿಸುವಲ್ಲಿ ಟ್ರಸ್ಟ್ ಉತ್ತಮ ಕಾರ್ಯ ಮಾಡುತ್ತಿದೆ. ನಿರ್ಗತಿಕ ತಾಯಂದಿರಿಗೆ ಉದ್ಯೋಗ ಒದಗಿಸುವ ಪ್ರಯತ್ನವನ್ನೂ ಟ್ರಸ್ಟ್‌ನಿಂದ ಮಾಡಲಾಗುತ್ತಿದೆ ಎಂದು ಹೊರಟ್ಟಿ ಹೇಳಿದರು. ಶಾಸಕ ಎನ್.ಎಚ್. ಕೋನರಡ್ಡಿ, ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ವಸಂತ ಹೊರಟ್ಟಿ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

