ಕಲಬೆರಕೆ ಹಾಲಿಗೆ ಕನ್ನಡಿ ಹಿಡಿದ ಕನ್ನಡಪ್ರಭ
ಕಲಬೆರಕೆ ಹಾಲಿನ ವಿಷಯ ಸರ್ಕಾರಕ್ಕೆ ಗೊತ್ತಿಲ್ಲವೆಂದೇನಿಲ್ಲ. ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಕಲಬೆರಕೆ ಹಾಲಿನ ವಿಷಯ ಗೊತ್ತಿದ್ದರೂ ಜಾಣ ಮೌನ ತಾಳುತ್ತಿದ್ದಾರೆ. ಸರ್ಕಾರ ಇಂಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜನರ ಆರೋಗ್ಯ ದೃಷ್ಟಿಯಿಂದ ಸರ್ಕಾರ ಸಂಬಂಧಿಸಿದ ಇಲಾಖೆಯ ಭ್ರಷ್ಟ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ, ಆ ಜಾಗದಲ್ಲಿ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಿ ಕಲಬೆರಕೆ ಹಾಲು ತಡೆಗೆ ಮುಂದಾಗಬೇಕು. ಇದರೊಂದಿಗೆ ಕಲಬೆರಕೆ ಹಾಲಿನ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಬೇಕು. ಈ ಕಾರ್ಯಕ್ಕೆ ಸರ್ಕಾರೇತರ ಸಂಸ್ಥೆಗಳು, ಇತರ ಸಂಘ-ಸಂಸ್ಥೆಗಳೂ ಕೈಗೂಡಿಸಬೇಕು. ಕಲಬೆರಕೆ ಹಾಲು ತಡೆಯುವ ನಿಟ್ಟಿನಲ್ಲಿ ಒಂದು ಕ್ರಾಂತಿ ಸೃಷ್ಟಿಯಾಗಬೇಕು.
- ಡಿ. ಗೋವಿಂದರಾವ್, ಅಧ್ಯಕ್ಷರು, ಗಜಾನನ ಮಹಾಮಂಡಳ, ಹುಬ್ಬಳ್ಳಿ
ಸಂಶಿ ಗ್ರಾಪಂ ಅಧ್ಯಕ್ಷೆಯಾಗಿ ಅಕ್ಕಮ್ಮ ಆಯ್ಕೆ
ಕುಂದಗೋಳ: ತಾಲೂಕಿನ ಸಂಶಿಯಲ್ಲಿ ಗೊಂದಲದೊಂದಿಗೆ ಅಧ್ಯಕ್ಷರನ್ನ್ನು ಚುನಾವಣಾಧಿಕಾರಿ ಆಯ್ಕೆ ಮಾಡಿದರೆ, ಇನ್ನ್ನೊಂದು ಗುಂಪು ಮರುಚುನಾವಣೆಗೆ ಒತ್ತಾಯಿಸಿ, ನಡೆದ ಚುನಾವಣೆ ಬಹಿಷ್ಕರಿಸಿದ ಘಟನೆ ಗುರುವಾರ ನಡೆಯಿತು. 34 ಸದಸ್ಯರ ಬಲವುಳ್ಳ ಸಂಶಿ ಗ್ರಾಪಂಗೆ 2ನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳಾ ಮೀಸಲಾತಿ ಇದ್ದು, ಐವರು ನಾಮ ಪತ್ರ ಸಲ್ಲಿಸಿದರು. ಮಧ್ಯಾಹ್ನ್ನ 1.5ಕ್ಕೆ ಮೂವರು ನಾಮಪತ್ರ ಹಿಂಪಡೆದರು. ಅಕ್ಕಮ್ಮ ಶೇಖಪ್ಪ ಮೂರುಪತ್ತಣ್ಣವರ, ಕಮಲವ್ವ ಹರಕುಣಿ ಕಣದಲ್ಲುಳಿದರು. 20 ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. 14 ಸದಸ್ಯರ ಗುಂಪು ಚುನಾವಣಾ ಸ್ಥಳಕ್ಕೆ ಬಂದು ಇವರಿಗೆ ಮತದಾನ ಮಾಡುವ ಹಕ್ಕಿಲ್ಲ ಎಂದು ಚುನಾವಣಾಧಿಕಾರಿ ಹೇಳಿದ ಬಳಿಕ ರಾಜಕೀಯ ಒತ್ತಡಕ್ಕೆ ಮಣಿದು, ಮತದಾನ ಮಾಡುವ ಅವಕಾಶ ನೀಡಿದ್ದರಿಂದ 14 ಸದಸ್ಯರು ಮತದಾನ ಬಹಿಷ್ಕರಿಸಿ, ಮರುಚುನಾವಣೆ ಮಾಡಬೇಕೆಂದರು. ಆದರೂ ಚುನಾವಣಾಧಿಕಾರಿ ಮತದಾನ ನಡೆಸಿದರೆಂದು 14 ಸದಸ್ಯರು ಲಿಖಿತವಾಗಿ ಆರೋಪಿಸಿದ್ದಾರೆ. ಅಕ್ಕಮ್ಮ ಶೇಖಪ್ಪ ಮೂರುಪತ್ತಣ್ಣವರ 18 ಮತ ಗಳಿಸಿದರೆ, ಕಮಲವ್ವ ಹರಕುಣಿ ಒಂದೇ ಮತ ಪಡೆದು ಪರಾಭವಗೊಂಡರು. ಇದರಿಂದ ಅಕ್ಕಮ್ಮ ಮೂರುಪತ್ತಣ್ಣವರ ಗ್ರಾಪಂ ಅಧ್ಯಕ್ಷರಾದರೆಂದು ಚುನಾವಣಾ ಅಧಿಕಾರಿ ಚಿದಂಬರ ಜೋಶಿ ಘೋಷಿಸಿದದರು. ಕಮಲವ್ವ ಹರಕುಣಿ ಚುನಾವಣೆ ಬಹಿಷ್ಕರಿಸಿ ಹೊರನಡೆದಿದ್ದರು. ಆದರೂ ಅವರಿಗೊಂದು ಓಟು ಸಿಕ್ಕಿರುವುದು ವಿಶೇಷ! ಒಂದು ಗುಂಪು ಗ್ರಾಪಂ ಮುಂದೆ ಪ್ರತಿಭಟಿಸಿದರೆ, ಮತ್ತೊಂದು ಗುಂಪು ವಿಜಯೋತ್ಸವ್ನ ಆಚರಿಸಿತು. ಕೋರಂ ಭರ್ತಿ ಇದ್ದರಿಂದ ಚುನಾವಣೆಯ ಪ್ರಕ್ರಿಯೆ ನಡೆಸಲಾಯಿತೆಂದು ಚುನಾವಣಾಧಿಕಾರಿ ಚಿದಂಬರ ಜೋಶಿ ಕನ್ನಡಪ್ರಭಕ್ಕೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

