ಧಾರವಾಡ

ಉತ್ಸವದಲ್ಲಿಂದು

Published On :

ಕವಿಗೋಷ್ಠಿ
ಧಾರವಾಡ: ಜಿಲ್ಲಾ ಉತ್ಸವದ ಅಂಗವಾಗಿ ಡಿ. 14ರಂದು ಮಧ್ಯಾಹ್ನ 3ಕ್ಕೆ ವಿದ್ಯಾವರ್ಧಕ ಸಂಘದ ಆರ್.ಎಚ್. ದೇಶಪಾಂಡೆ ಸಭಾಭವನದಲ್ಲಿ ಕವಿಗೋಷ್ಠಿ ನಡೆಯಲಿದೆ.  ಹಿರಿಯ ಕವಯತ್ರಿ ರೂಪಾ ಹಾಸನ ಆಶಯ ನುಡಿಗಳನ್ನಾಡಲಿದ್ದಾರೆ. ಸತೀಶ ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ಆರೂರು ಲಕ್ಷ್ಮಣ ಶೇಠ, ಡಿ. ಬಿ. ಢಂಗ, ಮಹಾಂತಪ್ಪ ನಂದೂರ, ವೀರಣ್ಣ ಮಡಿವಾಳರ, ಡಾ. ಬಸು ಬೇವಿನಗಿಡದ, ಡಾ. ಸಂಜೀವ ಕುಲಕರ್ಣಿ, ಪ್ರೊ. ಬಸವರಾಜ ವಕ್ಕುಂದ, ನ.ಮ. ಯಲಬುರ್ಗಿ, ಮಹ್ಮದಲಿ ಗೂಢೂಬಾಯಿ, ಸಿ.ಎಂ. ಮುನಿಸ್ವಾಮಿ, ಲೀಲಾ ಕಲಕೋಟಿ, ಜಿ. ಡಿ. ಘೋರ್ಪಡೆ,  ವಿಜಯಕಾಂತ ಪಾಟೀಲ ಮತ್ತಿತರು ಕವನ ವಾಚಿಸಲಿದ್ದಾರೆಂದು ಸಮಿತಿ ಅಧ್ಯಕ್ಷ ಮೋಹನ ನಾಗಮ್ಮನವರ ತಿಳಿಸಿದ್ದಾರೆ.
ಮ್ಯಾರಾಥಾನ್, ಕುಸ್ತಿ
ಧಾರವಾಡ: ಜಿಲ್ಲಾ ಉತ್ಸವದ ಅಂಗವಾಗಿ ಡಿ. 14ರಂದು ಬೆಳಗ್ಗೆ 7ಕ್ಕೆ ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಪುರುಷ ಹಾಗೂ ಮಹಿಳೆಯರ 10 ಕಿ.ಮೀ. ಮ್ಯಾರಾಥಾನ್, ಬೆಳಗ್ಗೆ 10ಕ್ಕೆ ಕುಸ್ತಿಸ್ಪರ್ಧೆ, ಮಧ್ಯಾಹ್ನ 3ಕ್ಕೆ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆ, ಸಂಜೆ 5ಕ್ಕೆ ದೇಹದಾರ್ಢ್ಯ ಸ್ಪರ್ಧೆಗಳು ಜರುಗಲಿವೆ. ಹುಬ್ಬಳ್ಳಿಯ ಅಮರಗೋಳ ಎಪಿಎಂಸಿ ಆವರಣದಲ್ಲಿ ಬೆಳಗ್ಗೆ 8ಕ್ಕೆ ಚಕ್ಕಡಿ ಸ್ಪರ್ಧೆ ನಡೆಯಲಿದೆ.
ಎಲ್ಲ ಕ್ಷೇತ್ರದಲ್ಲಿ ಭ್ರಷ್ಟಾಚಾರ
ಧಾರವಾಡ: ಮಕ್ಕಳಿಗೆ ಅವರದೇಯಾದ ಕಾಲ್ಪನಿಕ ಪ್ರಪಂಚ ಇರುತ್ತದೆ. ಅದನ್ನು ಕ್ರಿಯಾಶೀಲಗೊಳಿಸುವ ನಿಟ್ಟಿನಲ್ಲಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ನಾಡೋಜ ಚನ್ನವೀರ ಕಣವಿ ಹೇಳಿದರು. ಜಿಲ್ಲಾ ಉತ್ಸವ ಅಂಗವಾಗಿ ಸುವರ್ಣ ಸಮುಚ್ಚಯದಲ್ಲಿ ನಡೆದ ಮಕ್ಕಳ ಸಂವಾದದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಹುದುಗಿದ ಪ್ರತಿಭೆ, ಸಾಹಸ ಪ್ರವೃತ್ತಿ ಹಾಗೂ ವೈಜ್ಞಾನಿಕ ಕಲ್ಪನೆಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕಿದೆ ಎಂದರು. ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಭ್ರಷ್ಟಾಚಾರ ನಿರ್ಮೂಲನೆ, ಮಹಿಳೆಯರ ಸುರಕ್ಷತೆ, ಸಮಾನ ಶಿಕ್ಷಣ, ಕಾನೂನು ಸೇರಿದಂತೆ ಹೀಗೆ ಹತ್ತಾರು ಪ್ರಶ್ನೆಗಳನ್ನು ಕೇಳಿದರು. ಇವುಗಳಿಗೆ ಉತ್ತರಿಸಿದ ಶಾಸಕ ಅರವಿಂದ ಬೆಲ್ಲದ, ಭ್ರಷ್ಟಾಚಾರ ನಿರ್ಮೂಲನೆಗೆ ಸಮಾಜದ ಪ್ರತಿಯೊಬ್ಬರು ಪಣ ತೊಡಬೇಕು. ಕೇವಲ ರಾಜಕೀಯ ಹಾಗೂ ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ಮಾತ್ರ ಭ್ರಷ್ಟಾಚಾರ ನಡೆದಿಲ್ಲ. ಎಲ್ಲ ವ್ಯವಸ್ಥೆಯಲ್ಲಿ ಇದೀಗ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದರು. ಅರವಿಂದ ಚೊಕ್ಕಾಡಿ, ಮೂರ್ತಿ ದೇವರಾಜೆ, ಶ್ರೀಧರ ಮೂರ್ತಿ, ನಿಂಗು ಸೊಲಗಿ, ರಾಜೇಶ್ವರಿ ಜೋಶಿ, ಗಿರಡ್ಡಿ ಗೋವಿಂದರಾಜು, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಕೆ.ಎಚ್. ಚನ್ನೂರ, ಶಂಕರ ಹಲಗತ್ತಿ ಮತ್ತಿತರು ಇದ್ದರು. ರಜನಿ ಗರಡು ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.