ಎಲ್ಲ ವೈದ್ಯರು ಸ್ಪಷ್ಟವಾಗಿ ಔಷಧಿ ಹೆಸರು ಬರೆಯಲಿ
ಹುಬ್ಬಳ್ಳಿ: ವೈದ್ಯರು ರೋಗಿಗಳಿಗೆ ಬರೆದುಕೊಡುವ ಔಷಧಿ ಚೀಟಿಯಲ್ಲಿ ಔಷಧಿಯ ಹೆಸರನ್ನು ಇಂಗ್ಲಿಷ್ನ ಕ್ಯಾಪಿಟಲ್ ಅಕ್ಷರಗಳಲ್ಲಿ ಸ್ಪಷ್ಟವಾಗಿ ಅರ್ಥವಾಗುವ ರೀತಿಯಲ್ಲಿ ಬರೆದುಕೊಡುವಂತೆ ರಾಜ್ಯದ ಎಲ್ಲ ವೈದ್ಯರುಗಳಿಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕೆಂದು ಕರ್ನಾಟಕ ರಾಜ್ಯ ವೈದ್ಯರ ಕೈಬರಹ ಸುಧಾರಕರ ಸಂಘ ಒತ್ತಾಯಿಸಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಡಾ. ಶಾಂತಗಿರಿ ಮಲ್ಲಪ್ಪ, ಈಗಾಗಲೇ ಈ ನಿಯಮವನ್ನು ರಾಜ್ಯ ಸರ್ಕಾರ ಕರ್ನಾಟಕ ವೈದ್ಯಕೀಯ ಪರಿಷತ್ನಡಿ 2012 ಆಗಸ್ಟ್ 24ರಂದು ಜಾರಿಗ ತಂದಿದೆ. ಆದರೂ ಬಹಳಷ್ಟು ವೈದ್ಯರುಗಳು ಇದನ್ನು ಪಾಲಿಸದ ಕಾರಣ ಕಟ್ಟು ನಿಟ್ಟಾಗಿ ಈ ನಿಯಮ ಜಾರಿಗೊಳಿಸಲು ಸರ್ಕಾರ ಮುಂದಾಗಬೇಕೆಂದರು. ವೈದ್ಯರು ಇಂಗ್ಲಿಷ್ನ ಕ್ಯಾಪಿಟಲ್ ಅಕ್ಷರಗಳಲ್ಲಿ ಔಷಧಿಗಳ ಹೆಸರನ್ನು ಬರೆಯುವುದರಿಂದ ರೋಗಿ ಹಾಗೂ ಔಷಧಿ ಅಂಗಡಿಕಾರರಿಗೂ ಔಷಧಿ ಬಗ್ಗೆ ನಿಖರವಾಗಿ ತಿಳಿದು ಬರಲಿದೆ. ಇದರಿಂದ ರೋಗಿಗಳು ಯಾವುದೋ ಅನಗತ್ಯ ಔಷಧಿ ಸೇವಿಸುವುದು ತಪ್ಪಲಿದೆ. ವೈದ್ಯರು ಬರೆದುಕೊಟ್ಟ ಚೀಟಿಗೆ ಅಂಗಡಿಕಾರರು ನೀಡಿದ ಔಷಧಿಗೂ ವ್ಯತ್ಯಾಸವುಂಟಾಗಿ ರೋಗಿಗಳು ತಪ್ಪು ಔಷಧಿ ಸೇವಿಸಿ ತೊಂದರೆಗೆ ಸಿಲುಕಿದ ಸಾಕಷ್ಟು ಉದಾಹರಣೆಗಳಿವೆ. ಸ್ಪಷ್ಟ ಅಕ್ಷರಗಳಲ್ಲಿ ಔಷಧಿ ಹೆಸರು ಬರೆದಿದ್ದೇ ಆದಲ್ಲಿ ಇಂಥ ಅವಾಂತರಗಳನ್ನು ತಪ್ಪಿಸಬಹುದು ಎಂದರು.
ಪದಾಧಿಕಾರಿ ನೇಮಕ
ಹುಬ್ಬಳ್ಳಿ: ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಡಾ. ಮೋತಿಲಾಲ್ ಮೆಹರವಾಡೆ ಹಾಗೂ ಕಾರ್ಯದರ್ಶಿಯಾಗಿ ಡಾ. ಜುಗಲ್ ಪಟೇಲ್ ಆಯ್ಕೆಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

