ಕಾಪಿಕನ್-2014: ವೆಬ್ಸೈಟ್ ಬಿಡುಗಡೆ
ಹುಬ್ಬಳ್ಳಿ: ಕಿಮ್ಸ್ನಲ್ಲಿ 2014 ಮೇ 16, 17 ಹಾಗೂ 18ರಂದು ನಡೆಯಲಿರುವ ಕರ್ನಾಟಕ ರಾಜ್ಯ ಫಿಜಿಶಿಯನ್ಗಳ 32ನೇ ವಾರ್ಷಿಕ ಸಮ್ಮೇಳನ 'ಕಾಪಿಕನ್-2014'ರ ಹಿನ್ನೆಲೆಯಲ್ಲಿ ವಿಶೇಷವಾಗಿ ರಚಿಸಲಾದ ವೆಬ್ಸೈಟ್ನ್ನು ಶುಕ್ರವಾರ ಪ್ರೆಸ್ಕ್ಲಬ್ನಲ್ಲಿ ಬಿಡುಗಡೆಗೊಳಿಸಲಾಯಿತು.
ವೆಬ್ಸೈಟ್ ಬಿಡುಗಡೆ ಮಾಡಿದ ಕಾಪಿಕಾನ್ ವ್ಯವಸ್ಥಾಪಕ ನಿರ್ದೇಶಕ ಡಾ. ಜಿ.ಬಿ. ಸತ್ತೂರ ಮಾತನಾಡಿ, ಕಾಪಿಕಾನ್ಗಾಗಿ ವಿಶೇಷ ವೆಬ್ಸೈಟ್ ರಚಿಸಲಾಗಿದೆ. ಇದರಲ್ಲಿ ವೈದ್ಯರಿಗೆ ಬೇಕಾದ ಮಾಹಿತಿಯನ್ನು, ರೋಗ ನಿರ್ವಹಣೆಯ ಮಾರ್ಗದರ್ಶನಗಳನ್ನು ಪ್ರತಿ ತಿಂಗಳು ಅಪ್ಡೇಟ್ ಮಾಡಲಾಗುತ್ತದೆ. ಅಲ್ಲದೆ, ವೈದ್ಯರು ಸಮ್ಮೇಳನದಲ್ಲಿ ಭಾಗವಹಿಸಲು ಈ ವೆಬ್ಸೈಟ್ ಮುಖಾಂತರವೇ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.
ಸಮ್ಮೇಳನಕ್ಕೆ ಅಗತ್ಯ ತಯಾರಿ ಭರದಿಂದ ಸಾಗಿದೆ. ವೈದ್ಯಕೀಯ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ಕಾರ್ಯಕ್ರಮವಾಗಲಿದೆ. ಸಮ್ಮೇಳನಕ್ಕೆ ಅಗತ್ಯ ಸಮಿತಿಗಳನ್ನು ರಚಿಸಲಾಗಿದ್ದು, ಅವರಿಗೆ ಜವಾಬ್ದಾರಿ ವಹಿಸಿಕೊಡಲಾಗಿದೆ ಎಂದು ಡಾ. ಸತ್ತೂರ ತಿಳಿಸಿದರು.
ಡಾ. ರಮೇಶ ಬಬ್ರುವಾಡ, ಡಾ. ಕೆ.ಎಚ್. ಜಿತೂರಿ, ಡಾ. ಡಿ.ಎಂ. ಕಬಾಡೆ, ಹುಬ್ಬಳ್ಳಿ-ಧಾರವಾಡ ಎಪಿಐ ಘಟಕದ ಡಾ. ಪ್ರಶಾಂತ ಹುಲಕಂಡೆ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

