ಧಾರವಾಡ

ಆಧುನಿಕ ಜೀವನ ಶೈಲಿ ರೋಗಕ್ಕೆ ದಾರಿ

Published On :

ಧಾರವಾಡ: ಹೊಸ ಪೀಳಿಗೆಯಲ್ಲಿನ ದೈಹಿಕ ನ್ಯೂನತೆಗೆ ಒಸ್ಟಿಯೋ ಪೋರೋಸಿಸ್ ಪ್ರಮುಖ ಕಾರಣವಾಗುತ್ತಿದೆ ಎಂದು ಡಾ. ವರುಣ ಸವಡಿ ಹೇಳಿದರು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವತಿಯಿಂದ ಆಯೋಜಿಸಲಾಗಿದ್ದ ಎಲುವು ಕೀಲು ತಪಾಸಣೆ ಮತ್ತು ಬೊಜ್ಜು ಸಂಬಂಧಿ ರೋಗಕ್ಕೆ ಸಂಬಂಧಿಸಿದ ಉಚಿತ ಶಿಬಿರದಲ್ಲಿ ಮಾತನಾಡಿದ ಅವರು, ವ್ಯಾಯಾಮದ ಕೊರತೆ, ಸಿದ್ಧ ಆಹಾರಗಳ ಸೇವನೆ, ಕ್ಯಾಲ್ಸಿಯಂ ಕೊರತೆ, ಅತಿಯಾದ ಮದ್ಯಪಾನ, ಕುಳಿತು ಮಾಡುವ ಕೆಲಸದಿಂದ ಎಲುವು ಕೀಲುಗಳಿಗೆ ಗಂಭೀರ ಪರಿಣಾಮ ಬೀರುತ್ತದೆ. ನಂತರದಲ್ಲಿ ಒಸ್ಟಿಯೋ (ಟೊಳ್ಳು ಮೂಳೆ)ಗೆ ಕಾರಣವಾಗಿ ಮಧ್ಯಮ ವಯಸ್ಸಿನಲ್ಲೇ ಅಂಗವಿಕಲತೆಗೆ ತಳ್ಳುತ್ತಿದೆ. ಒಸ್ಟಿಯೋ ಪೊರೋಸಿಸ್‌ನ್ನು ಬೇಗನೆ ಗುರುತಿಸುವುದರಿಂದ ಸರಿಯಾದ ಔಷಧವನ್ನು ಸೂಚಿಸಬಹುದಾಗಿದ್ದು, ತಕ್ಷಣ ಅದರ ತೀವ್ರತೆಯನ್ನು ಕಡಿಮೆ ಮಾಡಬಹುದಾಗಿದೆ ಎಂದರು.
ಖ್ಯಾತ ಸ್ತ್ರೀ ರೋಗ ತಜ್ಞೆ ಡಾ. ಸೌಭಾಗ್ಯ ಕುಲಕರ್ಣಿ ಮಾತನಾಡಿ, ಬೊಜ್ಜು ಆಧುನಿಕತೆಯ ಬಳುವಳಿಯಾಗಿದ್ದು, ಹಲವು ರೋಗಗಳಿಗೆ ಕಾರಣವಾಗಿದೆ. ಬೊಜ್ಜಿನ ಶೇ. 10ರಷ್ಟು ಕಡಿತಗೊಳಿಸಿಕೊಂಡರೂ ಮಧುಮೇಹ, ಸಂಧಿವಾತ, ಅತಿ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತಂದುಕೊಳ್ಳಬಹುದು ಎಂದರು.
ಬ್ಯಾಂಕ್ ಮಹಾಪ್ರಬಂಧಕ ಸುಧೀರ ಚಂದ್ರ ಶಿಬಿರಕ್ಕೆ ಚಾಲನೆ ನೀಡಿದರು. ಸೂರ್ಯಕಾಂತ ಗಂಗಾ, ಪ್ರಾದೇಶಿಕ ವ್ಯವಸ್ಥಾಪಕ ಬಿ ವಾಸುದೇವ, ಸುನಿತಾ ಹಂಗರಗಿ ಇದ್ದರು. ಉಲ್ಲಾಸ ಗುನಗಾ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.