ಧಾರವಾಡ

ಗ್ರಾಮಸಭೆಗೆ ಅಧಿಕಾರಿಗಳ ಗೈರು: ಗ್ರಾಮಸ್ಥರ ಆಕ್ರೋಶ

Published On :

ಕುಂದಗೋಳ: ಸರ್ಕಾರ ಕಡ್ಡಾಯವಾಗಿ ಗ್ರಾಮ ಸಭೆಗಳನ್ನು ನಡೆಸಬೇಕು. ಇಲ್ಲವಾದಲ್ಲಿ ಗ್ರಾಪಂ ಸದಸ್ಯರ ಸ್ಥಾನದಿಂದ ಅನರ್ಹಗೊಳಿಸಲಾಗುತ್ತದೆ. ಆದರೆ, ಗ್ರಾಮ ಸಭೆಗಳಿಗೆ ಅಧಿಕಾರಿಗಳು ಬಾರದಿದ್ದರೆ ಅವರ ಕುರಿತು ಯಾವ ಕ್ರಮಕೈಗೊಳ್ಳುತ್ತಾರೆ? ಈ ಸಭೆಗೆ ಮುಖ್ಯವಾಗಿ ತಾಪಂ ಅಧಿಕಾರಿಗಳು, ತೋಟಗಾರಿಕಾ, ಅರಣ್ಯ ಕೃಷಿ ಮತ್ತು ಇತರೆ ಕೆಲ ಅಧಿಕಾರಿಗಳು ಗೈರಾಗಿದ್ದು, ಕೇವಲ ಜಲಾನಯನ ಮತ್ತು ಜಿಪಂ ಅಧಿಕಾರಿಗಳು ಮಾತ್ರ ಪಾಲ್ಗೊಂಡಿದ್ದಾರೆ. ಈ ಕುರಿತಂತೆ ಕ್ರಮಕೈಗೊಳ್ಳುವವರು ಯಾರು ಎಂದು ಗ್ರಾಪಂ ಸದಸ್ಯ ಅಶೋಕ ತಿರ್ಲಾಪುರ ಆಕ್ರೋಶ ವ್ಯಕ್ತಪಡಿಸಿದರು. ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದ ಬೀರೇಶ್ವರ ದೇವಸ್ಥಾನದಲ್ಲಿ ಗುರುವಾರ ಗ್ರಾಪಂ ಪ್ರಸಕ್ತ ಸಾಲಿನ 2ನೇ ಸುತ್ತಿನ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ಮಾತನಾಡಿದರು. ಕೇವಲ ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ ಸಭೆಗೆ ಬಂದಿದ್ದು, ಇದರಿಂದ ಗ್ರಾಮಸ್ಥರು ಅಸಮಾಧಾನದಿಂದ ಕಾಟಾಚಾರಕ್ಕೆ ಯಾಕೆ ಸಭೆ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಭೆಗೆ ಅಧಿಕಾರಿಗಳು ಬಾರದಿದ್ದರೆ ಇಂತಹ ಸಭೆ ನಿರುಪಯುಕ್ತವಾಗಿದ್ದು, ಮುಂದಿನಸಭೆಗೆ ಎಲ್ಲ ಅಧಿಕಾರಿಗಳು ಹಾಜರಾಗುವಂತೆ ಒಕ್ಕೂರಲಿನಿಂದ ಆಗ್ರಹಿಸಿದರು. ನೋಡೆಲ್ ಅಧಿಕಾರಿ ಎನ್.ಎಫ್. ಮೇವುಂಡಿ ಮಾತನಾಡಿ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ಜಾರಿಯಾಗಬೇಕಾದರೆ ಗ್ರಾಮಸ್ಥರು ಮತ್ತು ಅಧಿಕಾರಿಗಳು ಒಕ್ಕಟ್ಟಾಗಿ ಕೆಲಸ ಮಾಡಬೇಕು. ಅಂದಾಗ ಅಭಿವೃದ್ಧಿ ಸಾಧ್ಯ ಎಂದರು. ಪಿಡಿಒ ಎನ್.ಕೆ. ದೊಡ್ಡಮನಿ ಮಾತನಾಡಿ, ಈ ವರ್ಷ ಇಲ್ಲಿ ವರೆಗೂ ಶೇ. 20 ಕೆಲಸಗಳಾಗಿವೆ. ಇನ್ನೂ ಶೇ. 80ರಷ್ಟು ಕೆಲಸಗಳಾಗಬೇಕಿದ್ದು, ಇದರಲ್ಲಿ ಕೇವಲ 19 ಶೌಚಾಲಯಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ನೂ 118 ಕುಟುಂಬಗಳು ಶೌಚಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಈ ಹಣವನ್ನೂ ಕೆಲ ದಿನಗಳಲ್ಲಿಯೇ ಮಂಜೂರು ಮಾಡಲಾಗುವುದೆಂದು ಹೇಳಿದರು. ಗ್ರಾಮದ ವಿಜಯಕುಮಾರ ಹಾಲಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಗೀತಾ ಸುತಾರ ಅಧ್ಯಕ್ಷತೆ ವಹಿಸಿದ್ದರು. ಬಸನಗೌಡ ಹರಕೂಣಿ, ಹುತ್ತಪ್ಪ ಗಿರಿಮಲ್ಲನವರ, ಗೋವಿಂದಪ್ಪ ಭಜಂತ್ರಿ, ಗ್ರಾಪಂ ಸದಸ್ಯ ರಾಜು ಪಾಟೀಲ, ಈಶ್ವರಗೌಡ ದ್ಯಾವನಗೌಡ್ರ, ಜೀವನಗೌಡ ಯತ್ನ್ನಳ್ಳ್ನಿ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.