ಧಾರವಾಡ

ಹುಬ್ಬಳ್ಳಿಯಲ್ಲಿ ಮೊದಲ ಬಾರಿಗೆ ಐಡಿಯಾ ಜಲ್ಸಾ

Published On :

ಹುಬ್ಬಳ್ಳಿ: ಪ್ರಥಮ ಬಾರಿಗೆ ಪುರುಷ ಮತ್ತು ಸ್ತ್ರೀ ಸಂಗೀತ ಕಲಾವಿದರ ಮಧ್ಯೆ ಅಪರೂಪದ ಜಸ್‌ರಂಗಿ ಜುಗಲ್ಬಂದಿ ಕಾರ್ಯಕ್ರಮ 'ಐಡಿಯಾ ಜಲ್ಸಾ' ಡಿ. 28ರಂದು  ಧಾರವಾಡದ ಡಾ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ಆರ್ಟ್ ಆ್ಯಂಡ್ ಆರ್ಟಿಸ್ಟ್ ನಿರ್ದೇಶಕಿ ದುರ್ಗಾ ಜಸರಾಜ್ ಹೇಳಿದರು. ಶುಕ್ರವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರು. ನಾದ ವಾದ್ಯ ಮತ್ತು ಸಂಗೀತ ವಾದ್ಯಗಳ ಮಧ್ಯೆ ಜುಗಲ್ಬಂದಿ ಸಹಜವಾಗಿದ್ದು, ಪುರುಷ ಮತ್ತು ಸ್ತ್ರೀ ಸಂಗೀತ ಕಲಾವಿದರ ಮಧ್ಯೆ ಪಂಡಿತ್ ಜಸರಾಜ್ ಅವರು ಹುಟ್ಟುಹಾಕಿರುವ ಜಸ್‌ರಂಗಿ ಜುಗಲ್ಬಂದಿಯಲ್ಲಿ ಹಿಂದುಸ್ತಾನಿ ಗಾಯಕರಾದ ಕೃಷ್ಣಾ ಬೋಂಗಾನೆ ಮತ್ತು ಅಂಕಿತಾ ಜೋಶಿ ಮಧ್ಯೆ ನಡೆಯಲಿದೆ ಎಂದು ತಿಳಿಸಿದರು.  ಜಲ್ಸಾ ಐಡಿಯಾ ಕುರಿತು ಮಾತನಾಡಿದ ಅವರು, ಡಿ. 28ರಂದು ಸಂಜೆ 6ಕ್ಕೆ ಸತ್ತೂರ ರಸ್ತೆಯಲ್ಲಿರುವ ಎಸ್‌ಡಿಎಂ ಆಸ್ಪತ್ರೆ ಆವರಣದ ಡಾ. ವೀರೇಂದ್ರ ಹೆಗ್ಗಡೆ ಕಲಾ ಕ್ಷೇತ್ರದಲ್ಲಿ ಐಡಿಯಾ ಜಲ್ಸಾ ನಡೆಯಲಿದ್ದು, ಖ್ಯಾತ ಹಿಂದುಸ್ತಾನಿ ಸಂಗೀತ ಕಲಾವಿದರಾದ ಪಂಡಿತ್ ಶಿವಕುಮಾರ್ ಶರ್ಮಾ, ಅಂಕಿತಾ ಜೋಷಿ, ಮತ್ತು ಕೃಷ್ಣಾ ಬೊಂಗಾನೆ, ಅವರಂತಹ ಶಾಸ್ತ್ರೀಯ ಸಂಗೀತ ಕಲಾವಿದರು ಸಂಗೀತ ಪ್ರಸ್ತುತ ಪಡಿಸಲಿದ್ದಾರೆ ಎಂದರು. ಗೋಷ್ಠಿಯಲ್ಲಿ ಆರ್ಟ್ ಆ್ಯಂಡ್ ಆರ್ಟಿಸ್ಟ್‌ನ ನೀರಜ್ ಜೇಟ್ಲಿ, ಖ್ಯಾತ ತಬಲಾ ವಾದಕ ಪಂಡಿತ್ ರಾಮಕುಮಾರ್ ಮಿಶ್ರಾ, ಹಿಂದುಸ್ತಾನಿ ಗಾಯಕ ಕೃಷ್ಣಾ ಬೊಂಗಾನೆ, ಹಿಂದುಸ್ತಾನಿ ಗಾಯಕಿ ಅಂಕಿತಾ ಜೋಶಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.