ಧಾರವಾಡ

ಖಾತ್ರಿ ಅವ್ಯವಹಾರ: ರು. 2.50 ಲಕ್ಷ ವಸೂಲಿಗೆ ಆದೇಶ

Published On :

ಧಾರವಾಡ: ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಅವ್ಯವಹಾರ ನಡೆಸಿದ ಗ್ರಾಪಂ ಹಾಲಿ ಉಪಾಧ್ಯಕ್ಷೆ, 5 ಅಧಿಕಾರಿಗಳಿಗೆ ರು. 2.50 ಲಕ್ಷ ಅಕ್ರಮದ ಹಣ ವಸೂಲಿಗೆ ಧಾರವಾಡ ಜಿಲ್ಲಾ ಒಂಬಡ್ಸ ಮನ್ ಆದೇಶಿಸಿದ್ದಾರೆ. ಖಾತ್ರಿ ಯೋಜನೆಯಡಿ ತಾಲೂಕಿನ ದೇವರಹುಬ್ಬಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 2010-11, 2011-12ನೇ ಸಾಲಿನಲ್ಲಿ ಈ ಅವ್ಯವಹಾರ ನಡೆದಿತ್ತು. ಆ ಅವಧಿಯಲ್ಲಿ ಗ್ರಾಪಂ ಅಧ್ಯಕ್ಷರಾಗಿದ್ದ ಹಾಲಿ ಉಪಾಧ್ಯಕ್ಷರಾದ ಆರತಿ ಹಿರೇಮಠ ಅವರಿಂದ ರು. 69,268, ಅಂದು ಗ್ರಾಪಂ ಪಿಡಿಒ ಆಗಿದ್ದ ಶ್ವೇತಾ ಬೆದರೆ ಅವರಿಂದ ರು. 69,268, ಆಗಿನ ತಾಪಂ ಕಾರ್ಯನಿರ್ವಹಣಾಧಿಕಾರಿ ಪ್ರಸ್ತುತ ಜಲನಿರ್ಮಲ ಯೋಜನೆಯ ಜಿಲ್ಲಾ ನೆರವು ಘಟಕ ಸಹಾಯಕ ನಿರ್ದೇಶಕ ಎಸ್.ಎಂ. ರುದ್ರಸ್ವಾಮಿ ಅವರಿಂದ ರು. 52,190, ಅಳ್ನಾವರದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಪ್ರವೀಣ ಕಾಮಾಟಿ ಅವರಿಂದ ರು. 35,939, ಆಗಿನ ಸಾಮಾಜಿಕ ಅರಣ್ಯ ಇಲಾಖೆಯ ವನಪಾಲಕರಾಗಿದ್ದ ಸದ್ಯ ಶಿವಮೊಗ್ಗದ ತೀರ್ಥಹಳ್ಳಿಯ ವಲಯ ಅರಣ್ಯ ಅಧಿಕಾರಿ ಆಗಿರುವ ಎನ್.ಬಿ. ತೊಗಲಂಗಿ ಅವರಿಂದ ರು. 16,251 ಹಾಗೂ ಆಗಿನ ಸಾಮಾಜಿಕ ಅರಣ್ಯ ಇಲಾಖೆ ವಲಯ ಅರಣ್ಯ ಅಧಿಕಾರಿ ಸೌದಾಗರ ರು. 9,812 ವಸೂಲಿ ಮಾಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ನಿಧಿಗೆ ಜಮೆ ಮಾಡುವಂತೆ ತಿಳಿಸಿದ್ದಾರೆ. ದೇವರ ಹುಬ್ಬಳ್ಳಿಯ ಈರಪ್ಪ ಕುಂದಗೋಳ ಸಲ್ಲಿಸಿದ್ದ ದೂರಿನನ್ವಯ ಸತತ 3 ವರ್ಷ ಸಮಗ್ರ ತನಿಖೆ, ಪರಿಶೀಲನೆ ನಡೆಸಿದ ಒಂಬಡ್ಸ್‌ಮನ್ ಜಿಪಂ ಸಿಇಒಗೆ ಈ ಸೂಚನೆ ನೀಡಿದ್ದಾರೆ. 2 ತಿಂಗಳಲ್ಲಿ ಹಣ ನೀಡದಿದ್ದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಆದೇಶಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.