ಧಾರವಾಡ

ರಾಜಕಾರಣಿಗಳು ಜನರನ್ನು ಮೈಗಳ್ಳರನ್ನಾಗಿಸುತ್ತಿದ್ದಾರೆ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಫೆ. 10
ಕೆಲ ರಾಜಕಾರಣಿಗಳು ಚುನಾವಣೆಯಲ್ಲಿ ಮತ ಗಿಟ್ಟಿಸಿಕೊಳ್ಳಲು ಹಣ ಹಾಗೂ ವಿವಿಧ ಆಮಿಷಗಳನ್ನು ಒಡ್ಡಿ ಜನರನ್ನು ಮೈಗಳ್ಳರನ್ನಾಗಿಸುತ್ತಿದ್ದಾರೆ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಹೇಳಿದರು.
ಅವರು ಭಾನುವಾರ ಲಿಂಗಾಯತ ಟೌನ್‌ಹಾಲ್‌ನಲ್ಲಿ ಹೃದಯವಂತರ ಬಳಗದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಈ ರೀತಿಯ ಪ್ರಯೋಗದ ಮೂಲಕ ಜನರನ್ನು ವಂಚಿಸಿ ಅಧಿಕಾರಕ್ಕೆ ಬರುತ್ತಾರೆ. ಅಧಿಕಾರಕ್ಕೆ ಬಂದ ನಂತರ ಜನತೆಗೆ ಸ್ಪಂದಿಸದೆ 30- 40 ತಲೆಮಾರುಗಳಿಗೆ ಆಗುವಷ್ಟು ಆಸ್ತಿ ಸಂಪಾದಿಸಿಕೊಳ್ಳುತ್ತಿದ್ದಾರೆ.
ಇಂತಹ ರಾಜಕಾರಣಿಗಳಿಂದ ಸಮಾಜದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುವುದಿಲ್ಲ. ಇದು ವಾಸ್ತವಾಗಿ ಸಮಾಜದ ಸ್ವಾಸ್ಥ್ಯ ಹಾಳುಗೆಡುತ್ತದೆ ಎಂದು ತಿಳಿಸಿದರು. ದೇಶದ ಅಭಿವೃದ್ಧಿಯಲ್ಲಿ ಅಸಮತೋಲನ ತಾಂಡವಾಡುತ್ತಿದ್ದು, ಶೇ. 75ರಷ್ಟು ಅಸಮತೋಲನದಿಂದ ಬಳಲುತ್ತಿದ್ದಾರೆ. ಇದರಿಂದಾಗಿ ದ್ವೇಷ, ಅಸಹನೆ ಹಾಗೂ ದೇಶದ ಶಾಂತಿ ಕದಡುತ್ತಿದೆ.
 ದೇಶದ ಸಮತೋಲನ ಕಾಯ್ದುಕೊಂಡರೆ, ಎಲ್ಲ ಧರ್ಮದವರಿಗೂ ಒಂದೇ ತೆರನಾದ ಸಮಾನ ಅವಕಾಶಗಳು ದೊರೆತು ದೇಶ ಸಮೃದ್ಧಗೊಳ್ಳುತ್ತದೆ ಎಂದರು. ಕೆಲವರು ತಮಗೆ ರಾಜಕೀಯ ರಂಗ ಪ್ರವೇಶಿಸುತ್ತಿದ್ದೀರಾ ಎಂದು ಕೇಳುತ್ತಿದ್ದಾರೆ. ಅದರಂತೆ ಕೆಲ ಪಕ್ಷಗಳಿಂದ ತಮಗೆ ಆಹ್ವಾನಗಳು ಸಹ ಬಂದಿವೆ.  ನನ್ನ ಸಿದ್ಧಾಂತಕ್ಕೆ ಒಪ್ಪಿದರೆ ತಾವು ರಾಜಕೀಯ ರಂಗ ಪ್ರವೇಶಿಸುವ ಕುರಿತು ಚಿಂತನೆ ಮಾಡುತ್ತೇನೆ ಎಂದು ಬಿದರಿ ಹೇಳಿದರು.
ಸನ್ಮಾನ: ತಾವು ಅಧಿಕಾರಕ್ಕೆ ಬಂದಾಗಿನಿಂದ ನನ್ನ ದಕ್ಷತೆಯ ಆಡಳಿತಕ್ಕೆ ಸರ್ಕಾರ ನಿಗದಿಪಡಿಸಿದ ಎಲ್ಲ ಪ್ರಶಸ್ತಿಗಳು ದೊರೆತಿವೆ. ಜನತೆ ಹಾಗೂ ಹಿರಿಯರು ನೀಡುವ ಪ್ರೀತಿ ವಿಶ್ವಾಸದ ಸನ್ಮಾನಗಳು ಸಂತಸ ನೀಡುವ ಜೊತೆಗೆ ಜವಾಬ್ದಾರಿಯನ್ನು ಹೆಚ್ಚಿಸಿವೆ. ಜನರು ನನ್ನ ಮೇಲೆ ಇಟ್ಟ ವಿಶ್ವಾಸಕ್ಕೆ ಕಳಂಕ ಬರದಂತೆ ನಡೆದುಕೊಳ್ಳುತ್ತೇನೆ ಎಂದು ತಿಳಿಸಿದರು. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಸಂಸ್ಥಾನಮಠದ ಮಹಾಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
   ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ, ಕೃಷಿ ವಿಶ್ವವಿದ್ಯಾಯದ ವಿಶ್ರಾಂತ ಕುಲಸಚಿವ ಡಾ. ಜೆ.ವಿ. ಗೌಡ, ಗುರುರಾಜ ಹುಣಸಿಮರದ, ಅಶೋಕ ಕಾಟವೆ, ಶಿವಾನಂದ ಅಂಬಡಗಟ್ಟಿ, ಸಿದ್ದಣ್ಣ ಕಂಬಾರ, ಎಚ್.ವಿ. ಶಿವಪ್ಪ, ಎಚ್.ಸಿ. ಮೊರಬ, ದೇವೇಂದ್ರಪ್ಪ ಮರಳಪ್ಪನವರ, ನಿಜನಗೌಡ ಪಾಟೀಲ, ಸಂಗನಗೌಡ ರಾಮನಗೌಡರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.