ತಾತ್ಕಾಲಿಕ ನಿಲುಗಡೆ
ಹುಬ್ಬಳ್ಳಿ: ಫೆ. 21ರಿಂದ 25ರ ವರೆಗೆ ಶಿವಮೊಗ್ಗ-ಬೆಂಗಳೂರು ಎಕ್ಸಪ್ರೆಸ್ ಮತ್ತು ಧಾರವಾಡ-ಬೆಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲುಗಳಿಗೆ ಬಾಣಾವರದಲ್ಲಿ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆ ಸೌಲಭ್ಯ ಒದಗಿಸಲಾಗಿದೆ. ಶಿವಮೊಗ್ಗ-ಬೆಂಗಳೂರು ಎಕ್ಸ್‌ಪ್ರೆಸ್ ಬೆಳಗ್ಗೆ 8.16ಕ್ಕೆ, ಧಾರವಾಡ-ಬೆಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಬೆಳಗ್ಗೆ 10:15ಕ್ಕೆ ಬಾಣಾವರಕ್ಕೆ ಆಗಮಿಸಲಿದೆ. ಮರು ಪ್ರಯಾಣದಲ್ಲಿ ಬೆಂಗಳೂರು-ಧಾರವಾಡ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಸಂಜೆ 3.55ಕ್ಕೆ, ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ 18.41ಕ್ಕೆ ಬಾಣಾವರ ರೇಲ್ವೆ ನಿಲ್ದಾಣಕ್ಕೆ ಆಗಮಿಸಲಿದೆ ಎಂದು ನೈಋತ್ಯ ರೇಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ನಾಳೆ ನೇರ ವೃತ್ತಿ ಸಂದರ್ಶನ
ಹುಬ್ಬಳ್ಳಿ: ಕೆನರಾ ಹೋಟೆಲ್ ಹಿಂಭಾಗದಲ್ಲಿರುವ ಕೇಂದ್ರ ಜವಳಿ ಸಚಿವಾಲಯದ ಅಪಾರೆಲ್ ಡಿಸೈನ್ ಸಂಸ್ಥೆ ಕಚೇರಿಯಲ್ಲಿ ಫೆ. 13ರಂದು ಸಿದ್ಧ ಉಡುಪು ಕ್ಷೇತ್ರದ ಉದ್ಯೋಗಾವಕಾಶಗಳಿಗಾಗಿ ನೇರ ವೃತ್ತಿ ಸಂದರ್ಶನ ಆಯೋಜಿಸಲಾಗಿದೆ. ಅಪಾರೆಲ್ ಟ್ರೇನಿಂಗ್ ಅಂಡ್ ಡಿಸೈನಿಂಗ್ ಸಂಸ್ಥೆಯಲ್ಲಿ ತರಬೇತಿ ಪಡೆದ ಫಲಾನುಭವಿಗಳು ಹಾಗೂ ಆಸಕ್ತ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಫೆ. 13ರಂದು ಬೆಳಗ್ಗೆ 9.30ರಿಂದ ನೋಂದಣಿ ಮತ್ತು ಸಂದರ್ಶನ ಅಪಾರೆಲ್ ಟ್ರೇನಿಂಗ್ ಅಂಡ್ ಡಿಸೈನಿಂಗ್, ಜಿಪಂ ಎಂಜಿನಿಯರಿಂಗ್ ವಿಭಾಗದ ಹತ್ತಿರ, ಎಟಿಐ ಕಾಂಪ್ಲೆಕ್ಸ್, ಕೆನರಾ ಬ್ಯಾಂಕ್ ಹಿಂದೆ, ಹುಬ್ಬಳ್ಳಿ-37 ಇಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಎನ್ನೆಸ್ಸೆಸ್ ಶಿಬಿರಕ್ಕೆ ಚಾಲನೆ
ಧಾರವಾಡ: ತಾಲೂಕಿನ ಜೋಗೆಲ್ಲಾಪುರ ಗ್ರಾಮದಲ್ಲಿ ನಗರದ ಸುವರ್ಣ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಕ್ಕೆ ಕವಿವಿ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಧನವಂತ ಹಾಜವಗೋಳ ಚಾಲನೆ ನೀಡಿದರು. ಟ್ರಸ್ಟ್ ಅಧ್ಯಕ್ಷ ವಿಶ್ವನಾಥ ಅಮರಶೆಟ್ಟಿ, ಪ್ರಾಚಾರ್ಯ ಪ್ರಕಾಶ ಜೋಗಿನ, ಶಿಕ್ಷಕ ಬಸವರಾಜ ತಳವಾರ, ಸವಿತಾ ಅಮರಶೆಟ್ಟಿ, ಫಕ್ಕಿರಪ್ಪ ವಾಲಿಕಾರ. ವೀರಾಪುರ, ಮಹಾದೇವ ಬಿದ್ನಾಳ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

