ಶೆಟ್ಟರ್ರಿಂದ ಬೋಗಸ್ ಬಜೆಟ್: ಗಡ್ಡಿ
ನವಲಗುಂದ: ಇನ್ನೆರಡು ತಿಂಗಳು ಅಧಿಕಾರದಲ್ಲಿರುವ ಜಗದೀಶ ಶೆಟ್ಟರ್ 43 ಹೊಸ ತಾಲೂಕು ತಾಲೂಕುಗಳನ್ನು ಬಜೆಟ್ನಲ್ಲಿ ಘೋಷಿಸಿದ್ದಾರೆ. ಇದರಿಂದ ದೀನದಲಿತರ, ಬಡವರ, ರೈತರ ಹೊಟ್ಟೆ ತುಂಬುವುದಿಲ್ಲ. ಸರ್ಕಾರ ಬರದಿಂದ ನರಳುತ್ತಿರುವ ರೈತರಿಗೆ ವಿಶೇಷ ಪ್ಯಾಕೇಜ್ ನೀಡಿಲ್ಲ ಎಂದು ಮಾಜಿ ಸಚಿವ ಕೆ.ಎನ್. ಗಡ್ಡಿ ಹೇಳಿದರು.
ಸೋಮವಾರ ಇಲ್ಲಿಯ ಶ್ರೀಕಂಠಶಾಸ್ತ್ರೀ ಕಲಾಭವನದಲ್ಲಿ ವಿಧಾನಸಭಾ ಚುನಾವಣೆಗೆ ಕಾರ್ಯಕರ್ತರನ್ನು ತರಬೇತುಗೊಳಿಸಲು ಏರ್ಪಡಿಸಿದ್ದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮುಂದೆ ಅಧಿಕಾರಕ್ಕೆ ಬರಲ್ಲ ಎಂದು ಗೊತ್ತಿದ್ದರೂ ಮುಖ್ಯಮಂತ್ರಿ ಬೋಗಸ್ ಬಜೆಟ್ ಮಂಡನೆ ಮಾಡಿದ್ದಾರೆ. ಮತದಾರರು ಈಗಾಗಲೇ ಬಿಜೆಪಿ ಸರ್ಕಾರದ ಭ್ರಷ್ಟಚಾರ, ಅನಾಗರಿಕತೆ, ಆಡಳಿತ ಯಂತ್ರದ ದುರುಪಯೋಗದಿಂದ ಬೇಸತ್ತಿದ್ದಾರೆ. ಬೆಳೆ ವಿಮೆ ಮಂಜೂರು ಮಾಡುವುದಾಗಲಿ, ರಸಗೊಬ್ಬರ, ಬಿತ್ತನೆ ಬೀಜ, ಕೃಷಿ ಉಪಕರಣಗಳ ಬೆಲೆ ಕಡಿತಗೊಳಿಸುವುದಾಗಲಿ, ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಚಿಂತನೆ ಇಲ್ಲದೆ ಅಧಿಕಾರದಾಸೆಗೆ ಮೋಸದ ಬಜೆಟ್ ಮಂಡಿಸಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಚ್.ವಿ. ಮಾಡಳ್ಳಿ ಎಸ್.ಸಿ. ರೇಣುಕಮಠ, ಸುಭಾಸ ದ್ಯಾಮಕ್ಕನವರ, ಡಾ. ಎ.ಎಂ. ಕುಲಕರ್ಣಿ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರದಲ್ಲಿ ತೊಡಗಿದೆ. 16 ಸಚಿವರು ಕ್ರೀಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಫಲವತ್ತಾದ ಜಮೀನುಗಳನ್ನು ಡಿನೋಟಿಪೈ ಮಾಡಿ ಕೊಟ್ಯಾಂತರ ಕೊಳ್ಳೆ ಹೊಡೆದಿದ್ದಾರೆ ಎಂದು ದೂರಿದರು. ಈ ಭಾಗದ ಜೀವನಾಡಿ ಕಳಸಾ-ಬಂಡೂರಿ ಜೋಡಣೆ ಮಾಡುತ್ತೇವೆಂದು ಅಧಿಕಾರಕ್ಕೆ ಬಂದ ಬಸವರಾಜ ಬೊಮ್ಮಾಯಿ ಜಲಸಂಪನ್ಮೂಲ ಸಚಿವರಾದರೂ ಯೋಜನೆ ಜಾರಿ ಮಾಡದೆ ರೈತರನ್ನು ವಂಚಿಸಿದ್ದಾರೆ ಎಂದರು. ತಾಲೂಕು ಕಾಂಗ್ರೆಸ್ ಅಧ್ಯಕ್ಷ ಆರ್.ಎಚ್. ಕೋನರಡ್ಡಿ, ಅಣ್ಣಿಗೇರಿ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಬೊಮ್ಮಣ್ಣವರ, ಮಾಜಿ ಜಿಪಂಸದಸ್ಯ ಅಶೋಕ ಕುಸುಗಲ್ಲ, ರಜನಿಕಾಂತ ಭರಮಗೌಡರ, ಚಂದ್ರು ಮನಗೂಳಿ, ಎ.ಎ. ಜಹಾಗಿರದಾರ, ಕುಮಾರ ಮಂಕಣಿ, ಕಲ್ಲಪ್ಪ ಹಳಕಟ್ಟಿ, ಮಂಜು ಹಂಡಿ, ಸೈದುಸಾಬ ನರಗುಂದ, ಸುಧಾ ಲಿಂಗರಡ್ಡಿ, ಸದುಗೌಡ ಪಾಟೀಲ ಮೊದಲಾದವರು ಮಾತನಾಡಿದರು. ಪುರಸಭೆ ಅಧ್ಯಕ್ಷ ಜೀವನ ಪವಾರ, ಮಾಜಿ ಪುರಸಭೆ ಅಧ್ಯಕ್ಷ ನಿಂಗಪ್ಪ ಅಸುಂಡಿ, ಮಂಜು ಜಾಧವ, ರಿಂದಾ ಲಿಂಗರಡ್ಡಿ, ಯಲ್ಲವ್ವ ಲಮಾಣಿ, ಯಲ್ಲವ್ವಾ ನಡಗೇರಿ, ಮಂಜುನಾಥ ಅಕ್ಕಿ, ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

