ಧಾರವಾಡ

ನಾಳೆಯಿಂದ 3 ನಗೆ ನಾಟಕ ಪ್ರದರ್ಶನ: ಸರದೇಶಪಾಂಡೆ

Published On :

ಧಾರವಾಡ: ಇಲ್ಲಿನ ರಂಗಾಯಣದ ಬಳಿಯ ಡಾ. ಬಸವರಾಜ ರಾಜಗುರು ಬಯಲು ರಂಗ ಮಂದಿರದಲ್ಲಿ ಫೆ.15ರಿಂದ 17ರವರೆಗೆ ಉತ್ತರ ಕರ್ನಾಟಕ ಎಂಬ ಹೆಸರಿನ ಮೂರು ನಗೆ ನಾಟಕ ಪ್ರದರ್ಶನ ಹಾಗೂ ಹಿರಿಯ ರಂಗ ಕರ್ಮಿಗಳಿಗೆ ಸನ್ಮಾನ ಸಮಾರಂಭ ನಡೆಯಲಿದೆ.
ಹುಬ್ಬಳ್ಳಿಯ ಗುರು ಇನ್‌ಸ್ಟಿಟ್ಯೂಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಜಂಟಿಯಾಗಿ ಈ ಸಮಾರಂಭ ಹಮ್ಮಿಕೊಂಡಿದ್ದು ಬುಧವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಗುರು ಸಂಸ್ಥೆ ಮುಖ್ಯಸ್ಥ, ರಂಗ ನಿರ್ದೇಶಕ ಯಶವಂತ ಸರದೇಶಪಾಂಡೆ ಮಾಹಿತಿ ನೀಡಿದರು. ಮೂರು ನಾಟಕಗಳು ಪ್ರತಿ ದಿನ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದ್ದು, ಪ್ರವೇಶ ಉಚಿತವಾಗಿದೆ ಹಾಗೂ 6 ಜನ ರಂಗ ಕರ್ಮಿಗಳಿಗೆ ಸನ್ಮಾನ ಮಾಡಲಾಗುವುದು. ಫೆ.15ರಂದು ಉಮೇಶ ತೇಲಿ ರಚನೆ ಹಾಗೂ ನಿರ್ದೇಶನದ 'ಹುಚ್ಚರ ಸಂತೆ' ನಾಟಕ ಪ್ರದರ್ಶನವಾಗಲಿದ್ದು, ಹಿರಿಯ ರಂಗ ಕರ್ಮಿಗಳಾದ ವಿಜಯಾ ಉರಾಳ ಹಾಗೂ ಬಸವರಾಜ ಬೆಂಗೇರಿ ಅವರನ್ನು ಸನ್ಮಾನಿಸಲಾಗುವುದು.
ಫೆ.16ರಂದು ಮಲ್ಲಿಕಾರ್ಜುನ ಎಂ. ರಚಿಸಿದ, ಚಿದಾನಂದ ಕುಲಕರ್ಣಿ ನಿರ್ದೇಶನದ ಅಸಲಿ ನಕಲಿ ನಾಟಕ ಪ್ರದರ್ಶನಗೊಳ್ಳಲಿದೆ. ಮಹಾನಂದಾ ಹುಲ್ಲೂರು ಹಾಗೂ ಧನಂಜಯ ಕುಲಕರ್ಣಿ ಅವರನ್ನು ಸನ್ಮಾನಿಸಲಾಗುವುದು. ಫೆ. 17ರಂದು ನನ್ನದೇ (ಯಶವಂತ ಸರದೇಶಪಾಂಡೆ) ನಿರ್ದೇಶನದ ಆಲ್ ದಿ ಬೆಸ್ಟ್ ನಾಟಕ ಪ್ರದರ್ಶನಗೊಳ್ಳಲಿದ್ದು, ಅರವಿಂದ ಕುಲಕರ್ಣಿ ಹಾಗೂ ಪ್ರಮೋದ ಶಿಗ್ಗಾಂವಿ ಅವರನ್ನು ಸನ್ಮಾನಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.