ಧಾರವಾಡ

ತಡಕೋಡಕ್ಕೆ ಆರೋಗ್ಯ ಕೇಂದ್ರ ಕೊಡಿ: ಆಗ್ರಹ

Published On :

ಧಾರವಾಡ: ತಡಕೋಡದಲ್ಲಿ ಕಲುಷಿತ ನೀರು ಕುಡಿದು ನೂರಾರು ಜನ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ಬುಧವಾರ ತುರ್ತು ಸಭೆ ಕರೆದು ಘಟನೆಗೆ ಕಾರಣ ಚರ್ಚಿಸಿತು. ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದೆ. ಗ್ರಾಪಂ ಅಧ್ಯಕ್ಷೆ ಶಾಂತವ್ವ ಅಕ್ಕಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಘಟನೆ ನಂತರ ತೀವ್ರ ಎಚ್ಚರಿಕೆ ವಹಿಸಿದ್ದು, ವೈದ್ಯರ ತಂಡ ಗ್ರಾಮದಲ್ಲಿಯೇ ಬೀಡು ಬಿಟ್ಟಿದೆ. ಕುಡಿಯಲು ಯೋಗ್ಯವಲ್ಲದ ಕೊಳವೆ ಬಾವಿ ನೀರು ಕುಡಿದು ಜನತೆ ಅಸ್ವಸ್ಥರಾಗಿದ್ದು, ಜಲಮಂಡಳಿಯಿಂದ ಪ್ರಸ್ತುತ ಟ್ಯಾಂಕರ್ ಮೂಲಕ ಶುದ್ಧ ನೀರನ್ನು ಕೊಡಲಾಗುತ್ತಿದೆ. ಇಂಥ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಗ್ರಾಪಂ ವತಿಯಿಂದ ಸೂಚಿಸಲಾಗುವುದು ಎಂದರು. ಜಿಪಂ ಸಿಇಓ ಪಿ.ಎ. ಮೇಘನ್ನವರ, ತಾಪಂ ಇಓ ಅಧಿಕಾರಿಗಳು ಇದ್ದರು. 200ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದು, ಸದ್ಯ ಎಲ್ಲರೂ ಚೇತರಿಸಿಕೊಂಡಿದ್ದಾರೆ. ಕೆಲವರು ಸಿವಿಲ್ ಆಸ್ಪತ್ರೆ ಮತ್ತಿತರ ಕಡೆ ದಾಖಲಾಗಿದ್ದು, ಬುಧವಾರ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪದಾಧಿಕಾರಿ ಎಚ್.ಜಿ. ದೇಸಾಯಿ, ಸಂಘಟನಾಕಾರರಾದ ಮಂಜುನಾಥ ಜೋಡಳ್ಳಿ, ಮಲ್ಲೇಶಪ್ಪ ಕಟಗಿ, ಯಲ್ಲಪ್ಪ ಕೋಣಪ್ಪನವರ, ಮಡಿವಾಳಪ್ಪ ಕುಸೋಜಿ, ಯಲ್ಲಪ್ಪ ಹೊಳೆಪ್ಪನವರ ಗ್ರಾಮಕ್ಕೆ ಭೇಟಿ ನೀಡಿ, 10 ಸಾವಿರ ಜನಸಂಖ್ಯೆ ಹೊಂದಿರುವ ತಡಕೋಡದಲ್ಲಿ ಇಂದಿಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲದಿರುವುದರಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ. ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಧಾರವಾಡ: ಯುವ ವಿಜ್ಞಾನಿ ಪ್ರಶಸ್ತಿಗೆ ಆಹ್ವಾನ
ಧಾರವಾಡ: ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕೊಡಮಾಡುವ ಯುವ ವಿಜ್ಞಾನಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, 14ರಿಂದ 18 ವಯೋವುತಿಯ ಅರ್ಹರ ಪ್ರಸ್ತಾವನೆಯನ್ನು ಸಂಬಂಧಿತ ಶೈಕ್ಷಣಿಕ ಸಂಸ್ಥೆಗಳ ಪ್ರಾಚಾರ್ಯರು, ಮುಖ್ಯೋಪಾಧ್ಯಾಯರು ಜಿಲ್ಲಾ ಹಾಗೂ ರಾಜ್ಯಮಟ್ಟದ ಯುವಪ್ರಶಸ್ತಿಗೆ ಕಳಿಸಬೇಕು. ಮಾಹಿತಿಗೆ ರಾಜ್ಯ ವಿಜ್ಞಾನ ಪರಿಷತ್ತಿನ ವೆಬ್‌ಸೈಟ್ ಢಿಢಿಢಿ.್ಞಢ್ಠಠ.್ಟ್ಠ್ಜ  ಅಥವಾ ದೂ. 08026718939 ಸಂಪರ್ಕಿಸಿ.
ಅಧ್ಯಯನ ಪ್ರವಾಸ ಮಾಡಿ
ಕಲಘಟಗಿ: ವಿದ್ಯಾರ್ಜನೆ ಜೊತೆಗೆಜೀವನದಲ್ಲಿ ಎದುರಿಸುವ ಸವಾಲುಗಳ ಬಗ್ಗೆ ಜ್ಞಾನ ವೃದ್ಧಿಸಲು ಅಧ್ಯಯನ ಪ್ರವಾಸಗಳನ್ನು ಮಾಡಬೇಕೆಂದು ಗುಡ್‌ನ್ಯೂಸ್ ಪದವಿ ಕಾಲೇಜು ಪ್ರಾಚಾರ್ಯ ಎಂ.ಎಸ್. ಮುರಗೋಡಮಠ ಹೇಳಿದರು. ಕಾಲೇಜಿನ ವಾಣಿಜ್ಯ ವಿಭಾಗದ ವಿರ್ದ್ಯ್ಙಾಗಳು ಅಧ್ಯಯನ ಪ್ರವಾಸಕ್ಕೆಂದು ಈಚೆಗೆ ಲಕಮನಹಳ್ಳಿ ಧಾರವಾಡ ಹಾಲು ಒಕ್ಕೂಟದ ಘಟಕಕ್ಕೆ ಭೇಟಿ ನೀಡಿದಾಗ ವಿರ್ದ್ಯ್ಙಾಗಳೊಂದಿಗೆ ಸಂವಾದದಲ್ಲಿ ಮಾತನಾಡಿದರು. ಪ್ರೊ. ಶಿವಯೋಗಪ್ಪ ಯಮ್ಮಿ ನೇತೃತ್ವದಲ್ಲಿ ಪ್ರವಾಸ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.