ಮಲ್ಲೇಶಪ್ಪ ಅಧ್ಯಕ್ಷ, ಪುಂಡಲೀಕ ಉಪಾಧ್ಯಕ್ಷ
ಕನ್ನಡಪ್ರಭ ವಾರ್ತೆ, ಧಾರವಾಡ ಜ. 24
ತೀವ್ರ ಪೈಪೋಟಿಗೆ ಕಾರಣವಾಗಿದ್ದ ಧಾರವಾಡ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಲ್ಲೇಶಪ್ಪ ಹೊಸೂರ ಹಾಗೂ ಉಪಾಧ್ಯಕ್ಷರಾಗಿ ಪುಂಡಲೀಕ ತಳವಾರ ಆಯ್ಕೆಯಾದರು.
ಇಲ್ಲಿನ ಎಪಿಎಂಸಿ ಸಭಾಭವನದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಎಪಿಎಂಸಿಯ ಒಟ್ಟು 17 ಸದಸ್ಯರ ಪೈಕಿ ಅಧ್ಯಕ್ಷ ಸ್ಥಾನಕ್ಕೆ ಮೂರು ಜನ ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ಬಸಪ್ಪ ರೋಣದ ತಮ್ಮ ನಾಮಪತ್ರ ಹಿಂತೆಗೆದುಕೊಂಡರು. ಇನ್ನುಳಿದ ಇಬ್ಬರ ಪೈಕಿ ಮಲ್ಲೇಶಪ್ಪ ಹೊಸೂರ ಒಂದು ಮತದ ಅಂತರದಲ್ಲಿ ಎದುರಾಳಿ ನಾನಾಸಾಹೇಬ ದೇಸಾಯಿ ಅವರನ್ನು ಪರಾಭವಗೊಳಿಸಿ ಅಧ್ಯಕ್ಷ ಸ್ಥಾನ ಪಡೆದರು.
ಇನ್ನು, ಉಪಾಧ್ಯಕ್ಷ ಸ್ಥಾನದಲ್ಲಿಯೂ ಸಹ ಮೂರು ಜನ ಸದಸ್ಯರ ನಾಮಪತ್ರದಲ್ಲಿ ಒರ್ವ ಸದಸ್ಯರಾದ ಅಪ್ಪಣ್ಣ ಚಂದ್ರಶೇಖರ ಹಿಂತೆಗೆದುಕೊಂಡರು. ಉಪಾಧ್ಯಕ್ಷ ಸ್ಥಾನಕ್ಕಾಗಿ ಕಣದಲ್ಲಿ ಕಾಳಪ್ಪ ಪೀರಗಾರ ಹಾಗೂ ಪುಂಡಲೀಕ ತಳವಾರ ಉಳಿದಿದ್ದರು. ಇದರಲ್ಲಿ ಪುಂಡಲೀಕ ತಳವಾರ ಒಂದು ಮತ ಅಂತರದಲ್ಲಿ ಎದುರಾಳಿ ಕಾಳಪ್ಪರನ್ನು ಸೋಲಿಸುವ ಮೂಲಕ ಉಪಾಧ್ಯಕ್ಷ ಸ್ಥಾನ ತಮ್ಮದಾಗಿಸಿಕೊಂಡರು. ಚುನಾವಣೆ ನೇತೃತ್ವವನ್ನು ತಹಸೀಲ್ದಾರ ಶಿವಾನಂದ ಭಜಂತ್ರಿ ವಹಿಸಿದ್ದರು. ಮಾಜಿ ಶಾಸಕ ವಿನಯ ಕುಲಕರ್ಣಿ, ಶಾಸಕ ಸಂತೋಷ ಲಾಡ್ ಆಪ್ತ ಸಹಾಯಕ ಶ್ರೀಕಾಂತ ಗಾಯಕವಾಡ, ಎಪಿಎಂಸಿ ಸಿಬ್ಬಂದಿ ಸುಧಾತಾಯಿ ಹಿರೇಮಠ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

