ಧಾರವಾಡ

ಲಾಭಕ್ಕಿಂತ ತತ್ವ ಮುಖ್ಯ: ಟಾಟಾ

ಸ್ವ-ಹಿತಾಸಕ್ತಿ ಇದೆ ಎಂದ ಮಾತ್ರಕ್ಕೆ ನಾನು ನಂಬಿರುವ ತತ್ವ ಸಿದ್ಧಾಂತಗಳನ್ನು ಯಾವುದೇ ಕಾರಣಕ್ಕೆ ಬಿಟ್ಟುಕೊಡುವುದಿಲ್ಲ. ನನ್ನ ಮಟ್ಟಿಗೆ ಲಾಭ ಮತ್ತು ಸ್ವ-ಹಿತಾಸಕ್ತಿ ಮುಖ್ಯವಲ್ಲ

ಲಾಭಕ್ಕಿಂತ ತತ್ವ ಮುಖ್ಯ: ಟಾಟಾ
Published On :

ಹುಬ್ಬಳ್ಳಿ: ಸ್ವ-ಹಿತಾಸಕ್ತಿ ಇದೆ ಎಂದ ಮಾತ್ರಕ್ಕೆ ನಾನು ನಂಬಿರುವ ತತ್ವ ಸಿದ್ಧಾಂತಗಳನ್ನು ಯಾವುದೇ ಕಾರಣಕ್ಕೆ ಬಿಟ್ಟುಕೊಡುವುದಿಲ್ಲ. ನನ್ನ ಮಟ್ಟಿಗೆ ಲಾಭ ಮತ್ತು ಸ್ವ-ಹಿತಾಸಕ್ತಿ ಮುಖ್ಯವಲ್ಲ ಎಂದು ಟಾಟಾ ಸಮೂಹ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ರತನ್ ಟಾಟಾ ಹೇಳಿದರು.
ಬುಧವಾರ, ದೇಶಪಾಂಡೆ ಫೌಂಡೇಷನ್ ಆಯೋಜಿಸಿರುವ ಅಭಿವೃದ್ಧಿ ಸಂವಾದದಲ್ಲಿ ಡಾ. ಎನ್.ಆರ್. ನಾರಾಯಣಮೂರ್ತಿ, ಡಾ. ರಘುನಾಥ ಮಾಶೇಳಕರ್ ಮತ್ತು ಸುಧಾಮೂರ್ತಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಅವರು, ಯಾವುದೇ ಕೆಲಸದಲ್ಲಿ ನನ್ನ ಮತ್ತು ನನ್ನ ಸಂಸ್ಥೆಯ ಲಾಭ ಮಾತ್ರ ನೋಡಿಲ್ಲ. ನಂಬಿರುವ ಸಿದ್ಧಾಂತಗಳಿಗೆ ವಿರುದ್ಧವಾಗಿದ್ದರೆ ಯಾವುದೇ ಕಾರಣಕ್ಕೂ ಅದನ್ನು ಸ್ವೀಕರಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ರತನ್ ಟಾಟಾ ಅವರ ಮಾತಿಗೆ ಅನುಮೋದನೆ ಎನ್ನುವಂತೆ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ, 'ಬಹುಜನ ಹಿತಾಯ ಬಹುಜನ ಸುಖಾಯ' ಇದು ನಮ್ಮ ಜೀವನ ತತ್ವವಾಗಬೇಕು. ಪರಿಸರಕ್ಕೆ ಧಕ್ಕೆ ತರುವಂಥ ಪ್ರಕ್ರಿಯೆಯಲ್ಲಿ ತೊಡಗಿರುವ ಸಂಸ್ಥೆಯೊಂದು ತನ್ನ ಲಾಭದ ಕೊಂಚ ಪ್ರಮಾಣವನ್ನು ಸಾಮಾಜಿಕ ಕಾರ್ಯಕ್ಕೆ ವಿನಿಯೋಗಿಸುತ್ತದೆ ಎಂಬ ಕಾರಣಕ್ಕೆ ಆ ಸಂಸ್ಥೆಗೆ ಸಾಮಾಜಿಕ ಬದ್ಧತೆ ಇದೆ ಎಂದು ಹೇಳಲಿಕ್ಕಾಗುವುದಿಲ್ಲ. ಸಾಮಾಜಿಕ ಉದ್ಯಮಿ (ಸೋಷಿಯಲ್ ಎಂಟರ್‌ಪ್ರೈನರ್) ಮತ್ತು ಕಾರ್ಪೋರೇಟ್ ಜಗತ್ತು ನಿರ್ವಹಿಸುವ ಸಾಮಾಜಿಕ ಜವಾಬ್ದಾರಿಯಲ್ಲಿ ಸಾಕಷ್ಟು ವ್ಯತ್ಯಾಸವಿದೆ ಎಂದರು.
ಸಾಮಾಜಿಕ ಜವಾಬ್ದಾರಿ ನಿರ್ವಹಣೆಗೆ ಕಾರ್ಪೋರೇಟ್ ಜಗತ್ತು ಹಣ ನೀಡಿದರೆ ಸಾಲದು. ಸಮುದಾಯ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ ಮುಖ್ಯ ಎಂದು ರತನ್ ಟಾಟಾ ಹೇಳಿದರು.
ಯಶಸ್ಸಿನ ಸೂತ್ರ: ಯಶಸ್ವಿ ಉದ್ಯಮಿಯಾಗಲು ಅಥವಾ ವ್ಯಕ್ತಿಯಾಗಲು ಯಾವುದೇ ಸಿದ್ಧ ಸೂತ್ರವಿಲ್ಲ. ಕಾಲಕ್ಕೆ, ಪರಿಸ್ಥಿತಿಗೆ ತಕ್ಕಂತೆ, ಎದುರಾಗುವ ವ್ಯಕ್ತಿಯ ಸ್ವಭಾವಕ್ಕೆ ವ್ಯವಹರಿಸುವ ಶೈಲಿ ಬದಲಾಗಬೇಕು. ಕೆಲವು ವ್ಯಕ್ತಿಗಳು ಸಂವೇದನಾಶೀಲರಿರುತ್ತಾರೆ. ಇನ್ನು ಕೆಲವರಲ್ಲಿ ಸಂವೇದನೆ ಇರುವುದೇ ಇಲ್ಲ. ಇಂಥ ಸಂದರ್ಭದಲ್ಲಿ ನಮ್ಮ ವರ್ತನೆ ಬದಲಾಗಬೇಕು ಸುಧಾಮೂರ್ತಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.