ಸುಕ್ಷೇತ್ರ ಬೆಲವಂತರ: ಇಂದು ಜಾತ್ರಾ ಮಹೋತ್ಸವ
ಕನ್ನಡಪ್ರಭ ವಾರ್ತೆ, ಕಲಘಟಗಿ, ಜು. 4
ತಾಲೂಕಿನ ಸುಕ್ಷೇತ್ರ ಬೆಲವಂತರ ಗ್ರಾಮದ ಹಿರೇಮಠದ ಶ್ರೀ ಲಿಂ. ಶ್ರೀಗುರು ಚನ್ನಬಸವೇಶ್ವರ ಸಂಸಾರ ಶಿವಯೋಗಿಗಳ 78ನೇ ಹಾಗೂ ಲಿಂ. ಸಿದ್ದರಾಮೇಶ್ವರ ಸಂಸಾರ ಶಿವಯೋಗಿಗಳ 21ನೇ ಪುಣ್ಯ ದಿನಾಚರಣೆ ಹಾಗೂ ಜಾತ್ರಾ ಮಹೋತ್ಸವ ಜುಲೈ 5ರಂದು ಗ್ರಾಮದಲ್ಲಿ ಜರುಗಲಿದೆ.
ಅಂದು ಬೆಳಗ್ಗೆ 9 ಗಂಟೆಗೆ ಹಿರೇಮಠದ ವೇ.ಮೂ. ರೇವಣಸಿದ್ದೇಶ್ವರ ಶ್ರೀ, ಶೈಲೇಶ್ವರ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಶ್ರೀ, ಹನ್ನೆರಡುಮಠದ ಶ್ರೀ ರೇವಣಸಿದ್ದ ಶಿವಾಚಾರ್ಯ ಶ್ರೀ, ಸೋಮನಕೊಪ್ಪದ ಶ್ರೀ ಬಸವಾನಂದಸ್ವಾಮೀಜಿ, ದಾಸ್ತಿಕೊಪ್ಪದ ವೇ.ಮೂ. ಚನ್ನಯ್ಯಸ್ವಾಮೀಜಿ, ಕಲ್ಲೂರಿನ ವೇ.ಮೂ. ಗದಗಯ್ಯಸ್ವಾಮಿ, ಮುಂಡಗೋಡದ ವೇ.ಮೂ. ರುದ್ರಮುನಿಸ್ವಾಮೀಜಿ ಸಮ್ಮುಖದಲ್ಲಿ ಉಭಯಶ್ರೀಗಳ ಭಾವಚಿತ್ರ ಹಾಗೂ ಪಲ್ಲಕ್ಕಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಧ್ಯಾಹ್ನ 1ಕ್ಕೆ ಶ್ರೀಮಠವನ್ನು ತಲುಪುತ್ತದೆ.
ನಂತರ ಜರುಗುವ ಧರ್ಮ ಸಭೆಯ ಉದ್ಘಾಟನೆಯನ್ನು ವಾರ್ತಾ ಸಚಿವ ಸಂತೋಷ ಲಾಡ್ ಅವರು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಉದ್ಯೋಗ ರತ್ನ ಶ್ರೀ ಜಗದೀಶ ಗುಡಗಂಟಿಮಠ ವಹಿಸುವರು. ಸಂಡೂರಿನ ಎಂ. ಅಜಯ ಘೋರ್ಪಡೆ, ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಕ್ರೆಡಲ್ ಅಧ್ಯಕ್ಷ ಸಿ.ಎಂ. ನಿಂಬಣ್ಣವರ, ಮಾಜಿ ಸಚಿವ ಪಿ.ಸಿ. ಸಿದ್ದನಗೌಡ್ರ, ಜಿಪಂ, ತಾಪಂ, ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಳ್ಳುವರು. ಅನಂತರ ಸಂಜೆ 8 ಗಂಟೆಗೆ ಮಹಾ ರಥೋತ್ಸವ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

