ಧಾರವಾಡ

ಬೋಧಗಯಾದಲ್ಲಿ ಬಾಂಬ್ ಸ್ಫೋಟ: ಖಂಡನೆ

Published On :

 ಧಾರವಾಡ: ಬಿಹಾರದ ಬೋಧಗಯಾದಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಕಾರಣರಾದ ಆರೋಪಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆ ವಿಧಿಸಬೇಕು. ಗುಪ್ತಚರ ಇಲಾಖೆಯನ್ನು ನಿರ್ಲಕ್ಷಿಸಿದ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ. ಅಂಬೇಡ್ಕರವಾದ) ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಪ್ರತ್ಯೇಕವಾಗಿ ಸೋಮವಾರ ಪ್ರತಿಭಟನೆಗಳನ್ನು ನಡೆಸಿವೆ. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಎರಡು ಸಂಘಟನೆ ಕಾರ್ಯಕರ್ತರು, ನಂತರ ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು. ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ, ಭ್ರಾತೃತ್ವ, ಕರುಣೆ ಬೋಧಿಸಿದ ಮಹಾನ್ ಜ್ಞಾನಿ ಗೌತಮ ಬುದ್ಧನಿಗೆ ಜ್ಞಾನೋದಯವಾದ ನಾಡು ಬಿಹಾರದ ಬೋಧಗಯಾ. ಈ ನಾಡಿನಲ್ಲಿ ಈಗ ವಿಚ್ಛಿದ್ರಕಾರಿ ಶಕ್ತಿಗಳು ಸರಣಿ ಬಾಂಬ್ ಸ್ಫೋಟಿಸಿದ ಘಟನೆ ಅತ್ಯಂತ ಹೇಯಕೃತ್ಯ ಎಂದು ದಸಂಸದ ಲಕ್ಷ್ಮಣ ದೊಡಮನಿ, ಯಲ್ಲಪ್ಪ ಮಂಟೂರ, ರವಿ ಸಾಂಬ್ರಾಣಿ, ವಿಜಯ ಕುಂದಗೋಳ, ರವಿ ಹರಿಜನ ಬೇಸರ ವ್ಯಕ್ತಪಡಿಸಿದರು. ಉಗ್ರರ ದಾಳಿ ನಡೆಯಬಹುದು ಎಂದು ಮುಂಚೆಯೇ ಎಚ್ಚರಿಕೆ ನೀಡಿದ್ದರೂ ಸೂಕ್ತ ರಕ್ಷಣೆ ಒದಗಿಸದ ಆಡಳಿತದ ರಕ್ಷಣಾ ಕ್ರಮ ಸರಿಯಲ್ಲ. ಇದು ಬರೀ ಬೌದ್ಧ ದೇವಾಲಯದ ಮೇಲೆ ನಡೆದ ದಾಳಿಯಲ್ಲ. ವಿಶ್ವ ಮಾನವ ಸಮೂಹದ ಮೇಲೆ ನಡೆದ ಅಮಾನವೀಯ ಕೃತ್ಯ. ಈ ಹಿನ್ನೆಲೆಯಲ್ಲಿ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ರಕ್ಷಣಾ ಸೇನೆಯ ದೀವಾನ ಬಳ್ಳಾರಿ, ಕೃಷ್ಣ ಗುಮ್ಮಗೋಳ, ಪ್ರಕಾಶ ಗುಮ್ಮಗೋಳ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.