ಧಾರವಾಡ

ಹುದ್ದೆ ಅನುಮೋದನೆಗೆ ಮನವಿ

Published On :

ಧಾರವಾಡ:  ಸೇವಾ ಜೇಷ್ಠತೆ ಆಧಾರದ ಮೇಲೆ ಬಡ್ತಿ ಹೊಂದಿ ನೇಮಕಗೊಂಡ ಖಾಸಗಿ ಅನುದಾನಿತ ಪದವಿ ಮಹಾವಿದ್ಯಾಲಯಗಳಲ್ಲಿ ಪ್ರಾಚಾರ್ಯರ ಹುದ್ದೆಯ ಅನುಮೋದನೆ ನೀಡುವಂತೆ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಖಾಸಗಿ ಅನುದಾನಿತ ಪದವಿ ಮಹಾವಿದ್ಯಾಲಯಗಳ ಪ್ರಾಚಾರ್ಯರ ನಿಯೋಗ ಬೆಂಗಳೂರಿಗೆ ತೆರಳಿ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಎಸ್.ಆರ್. ಉಮಾಶಂಕರ್ ಅವರಿಗೆ ಮನವಿ ಸಲ್ಲಿಸಿತು.
ಇತ್ತೀಚಿಗೆ ಕೆಲವು ವರ್ಷಗಳಿಂದ ಸರ್ಕಾರ, ರಾಜ್ಯದ ಬಹಳಷ್ಟು ಖಾಸಗಿ ಅನುದಾನಿತ ಪದವಿ ಮಹಾವಿದ್ಯಾಲಯಗಳಲ್ಲಿ ಆಡಳಿತ ಮಂಡಳಿಯಿಂದ ಸೇವಾ ಜೇಷ್ಠತೆ ಆಧಾರದ ಮೇಲೆ ನೇಮಕಗೊಂಡ ಪ್ರಾಚಾರ್ಯರ ಹುದ್ದೆಗಳನ್ನು ಅನುಮೋದನೆ ಮಾಡುತ್ತಿಲ್ಲ. ಇದರಿಂದಾಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಪೂರ್ಣಾವಧಿ ಪ್ರಾಚಾರ್ಯರು ಇಲ್ಲದಂತಾಗಿದೆ. ಸೇವಾ ಜೇಷ್ಠತೆ ಆಧಾರದ ಮೇಲೆ ಪ್ರಾಧ್ಯಾಪಕರಾಗಿರುವವರು, ಪ್ರಾಧ್ಯಾಪಕ ಹುದ್ದೆಯ ಜೊತೆಗೆ ಪ್ರಭಾರ ಪ್ರಾಚಾರ್ಯರಾಗಿಯೂ ಕಾರ್ಯನಿರ್ವಹಿಸುತಿದ್ದಾರೆ. ಹೀಗೆ ಪ್ರಭಾರಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಯಾವುದೇ ಗಳಿಕೆ, ರಜೆ ಹಾಗೂ ಸಂಭಾವನೆ ಸಹಿತ ದೊರೆಯುತ್ತಿಲ್ಲ. ಗುಣಮಟ್ಟದ, ಸಮಾಜಮುಖಿ, ಉದ್ಯೋಗಮುಖಿ ಶಿಕ್ಷಣ ಇಂದಿನ ಅವಶ್ಯಕತೆ. ಆದರೆ ಪ್ರಾಧ್ಯಾಪಕ, ಪ್ರಾಚಾರ್ಯರಾಗಿ ಎರಡೂ ಹುದ್ದೆಗಳನ್ನು ಒಬ್ಬರೇ ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಒದಗಿಸಲು ಸಾಧ್ಯವಾಗುತ್ತಿಲ್ಲ. ಪದವಿ ಕಾಲೇಜುಗಳ ಮುಖ್ಯಸ್ಥರ ಹುದ್ದೆಗಳ ಅನುಮೋದನೆಗೊಳ್ಳದೇ ಇರುವುದಕ್ಕೆ ಪ್ರಾಚಾರ್ಯರ ಸಂಘ ವಿಷಾದ ವ್ಯಕ್ತಪಡಿಸಿತು. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಪ್ರಾಚಾರ್ಯರ ಹುದ್ದೆಯ ಅನುಮೋದನೆ ಕಡೆಗೆ ಗಮನ ಹರಿಸುವುದರ ಜೊತೆಗೆ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಚಾರ್ಯರಿಗೆ ನೀಡುತ್ತಿರುವ ಅನುಪಾತದ ಗಳಿಕೆ, ರಜೆ ಹಾಗೂ ಭತ್ಯೆಗಳ ಸೌಲಭ್ಯವನ್ನು ಖಾಸಗಿ ಅನುದಾನಿತ ಪದವಿ ಮಹಾವಿದ್ಯಾಲಯಗಳ ಪ್ರಭಾರ ಪ್ರಾಚಾರ್ಯರಿಗೂ ವಿಸ್ತರಿಸಬೇಕು ಎಂದು ಖಾಸಗಿ ಅನುದಾನಿತ ಪದವಿ ಮಹಾವಿದ್ಯಾಲಯಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಪ್ರೋ. ಎನ್.ಆರ್. ಬಾಳಿಕಾಯಿ ನೇತೃತ್ವದಲ್ಲಿ ಆಯುಕ್ತರಿಗೆ ಮನವಿ ಅರ್ಪಿಸಲಾಯಿತು.
ಪ್ರಾಚಾರ್ಯರ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಶ್ರೀಕಂಠ, ಡಾ. ಎಸ್.ಎನ್. ಹೆಗಡೆ, ಡಾ. ಐ.ಎಸ್. ಮೇಳಕರ್, ಪ್ರೋ. ಜಿ.ಎಸ್ ಪಲ್ಲೇದ, ಆರ್.ಟಿ. ಹಿರೇಗೌಡರ, ಎಸ್.ಎಸ್. ಪಟ್ಟಣಶೆಟ್ಟಿ, ಡಾ. ಎ.ಡಿ ಭಟ್, ಡಾ. ಸಿ.ಎಂ. ಕುಂದಗೋಳ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.