ಯುವ ಜನಾಂಗಕ್ಕೆ ಸೃಜನಶೀಲತೆ ಅರಿವು ಬೇಕು
ಕನ್ನಡಪ್ರಭ ವಾರ್ತೆ, ಧಾರವಾಡ, ಜು. 17
ಯುವ ಜನಾಂಗ ಇಂದು ಮೊಬೈಲ್, ಎಸ್ಎಂಎಸ್, ಕಂಪ್ಯೂಟರ್ ಹಾಗೂ ಗೇಮ್ಸ್ ಅಂಥ ಮೋಹದಲ್ಲಿ ಸಿಲುಕಿ ಭಾರತೀಯ ಸಂಸ್ಕೃತಿ ಅರಿವನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಅಥಣಿ ಮೋಟಗಿಮಠದ ಚನ್ನಬಸವ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ಇಲ್ಲಿನ ವಿದ್ಯಾವರ್ಧಕ ಸಂಘದ ಪಾಟೀಲ ಸಭಾಭವನದಲ್ಲಿ ರತಿಕಾ ನೃತ್ಯ ನಿಕೇತನಾ ಭರತನಾಟ್ಯ ಶಾಲೆ ಹಮ್ಮಿಕೊಂಡಿದ್ದ ಹಿರಿಯ ಚೇತನಗಳಿಗೆ ಗೌರವ ಸಮರ್ಪಣೆ ಹಾಗೂ ಅಭಿನಂಧನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ಯುವ ಜನತೆಗೆ ಸೃಜನಶೀಲತೆಯ ಕಲೆ ಮತ್ತು ಸಂಸ್ಕೃತಿಗಳ ಅರಿವನ್ನು ಮೂಡಿಸುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ನಾಗರತ್ನ ಹಡಗಲಿ ಅವರ ನೇತೃತ್ವದಲ್ಲಿ ರತಿಕಾ ಭರತನಾಟ್ಯ ಶಾಲೆ ರಾಜ್ಯದ ವಿವಿಧೆಡೆ ನಾಟ್ಯ ಪ್ರದರ್ಶನ ನೀಡುತ್ತಿದೆ. ಭಾರತೀಯ ಸಂಸ್ಕೃತಿ ಕುರಿತಂತೆ ಅರಿವನ್ನು ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಉತ್ತಮ ನಾಗರಿಕರನ್ನಾಗಿ ಮಾಡಿ: ನಾಗನೂರ ರುದ್ರಾಕ್ಷಿಮಠದ ಡಾ. ಸಿದ್ದರಾಮೇಶ ಸ್ವಾಮೀಜಿ ಮಾತನಾಡಿ, ಪಾಲಕರು ಮಕ್ಕಳಿಗೆ ಸೃಜನಾತ್ಮಕ ಕಲೆ ಹಾಗೂ ಸಂಸ್ಕೃತಿ ಅರಿವನ್ನು ಮೂಡಿಸಿದಾಗ ಮಕ್ಕಳೇ ಒಂದು ಆಸ್ತಿಯಾಗಿ ಬೆಳೆಯುತ್ತಾರೆ. ಮಕ್ಕಳಿಗಾಗಿ ಆಸ್ತಿಯನ್ನು ಮಾಡದೇ ಉತ್ತಮ ನಾಗರಿಕರನ್ನಾಗಿ ಮಾಡಿ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಬೇಕು ಎಂದರು. ಇದೇ ಸಂದರ್ಭದಲ್ಲಿ ರತಿಕಾ ನೃತ್ಯ ನಿಕೇತನದ ವತಿಯಿಂದ ರಾಜಶೇಖರ ಕರಡಿಗುಡ್ಡಿ ದಂಪತಿ ಹಾಗೂ ಮಡಿವಾಳಪ್ಪ ಹಡಗಲಿ ದಂಪತಿ ವಿವಾಹ ಸುವರ್ಣ ಮಹೋತ್ಸವ ಅಂಗವಾಗಿ ಶಾಸಕ ಅರವಿಂದ ಬೆಲ್ಲದ, ಚಂದ್ರಕಾಂತ ಬೆಲ್ಲದ, ಎಸ್.ಆರ್. ಗುಂಜಾಳ, ಚನ್ನಬಸಪ್ಪ ಕಗ್ಗಣ್ಣವರ, ಸಿದ್ರಾಮಪ್ಪ ಕವಳಿ, ನಾರಾಯಣ ಶೆಟ್ಟಿ, ವೀರಯ್ಯ ಹಿರೇಮಠ, ಬಸವರಾಜ ಹಾಲಭಾವಿ, ಮಹಾನಂದ ಕೊಳಕಿ ಹಾಗೂ ಎಂ.ಎಂ. ದಾಮೋದರ ಅವರನ್ನು ಸತ್ಕರಿಸಲಾಯಿತು. ಮಹಾ ಶಿವರಾತ್ರಿಯೆಂದು ಒಂದೇ ದಿನದಲ್ಲಿ 108 ನೃತ್ಯಗಳ, ನೃತ್ಯ ಬಿಲ್ವಾರ್ಚನೆ ಕಾರ್ಯಕ್ರಮ ಮಾಡಿದ ರತಿಕಾ ನೃತ್ಯ ನಿಕೇತನದ ವಿದ್ಯಾರ್ಥಿನಿಯರಾದ ಸಮಥಾ ಆರ್.ಎಂ. ಹಾಗೂ ಸೃಷ್ಟಿ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಬಿ.ಡಿ. ಹಿರೇಗೌಡರ, ಡಾ. ಶ್ರೀಶೈಲ ಹುದ್ದಾರ, ಶಂಕರ ಹಲಗತ್ತಿ, ನಾಗರಾಜ ಹಡಗಲಿ, ಡಾ. ಶುಭದಾ, ಶ್ಯಾಮ ದತ್ತವಾಡ, ಅಶೋಕ ಕೋಳಕೂರ, ಅನಿಲ ದೇಸಾಯಿ, ಸುನೀಲ ಕುಲಕರ್ಣಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

