ಧಾರವಾಡ

ದೈಹಿಕ, ಹಣ ಬಲಕ್ಕಿಂತ ಶಿಕ್ಷಣದ ಬಲ ಪ್ರಮುಖ

Published On :

ಧಾರವಾಡ:  ಒಂದು ಕಾಲದಲ್ಲಿ ದೈಹಿಕ ಮತ್ತು ಹಣದ ಮೂಲಕ ಎಲ್ಲವನ್ನೂ ಸಾಧಿಸಬಹುದಿತ್ತು. ಆದರೆ, ಪ್ರಸ್ತುತ ಹಣ ಹಾಗೂ ದೈಹಿಕ ಶಕ್ತಿಗಿಂತ ಶಿಕ್ಷಣ ಶಕ್ತಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಸಹ ನಿರ್ದೇಶಕ ಎಸ್.ಆರ್. ಮನಹಳ್ಳಿ ಹೇಳಿದರು.
ಇಲ್ಲಿನ ಆರ್‌ಎಲ್‌ಎಸ್ ಪ್ರೌಢ ಶಾಲೆಯ ಶಾಲಾ ಸಂಸತ್ತು ಮತ್ತು ಸಾಂಸ್ಕೃತಿಕ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಉತ್ತಮ ಶಿಕ್ಷಣದಿಂದ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು. ವಿದ್ಯಾರ್ಥಿಗಳು ತರಗತಿಯಲ್ಲಿ ಪಡೆದದ್ದು ಜ್ಞಾನವಷ್ಟೇ ಅಲ್ಲ, ಅದು ಭವಿಷ್ಯದ ಮುನ್ನುಡಿ. ಆದ್ದರಿಂದ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಜ್ಞಾನ ನೀಡುವ ಮೂಲಕ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ತಿಳಿಸಿದರು.
ಶಾಲಾ ಆಡಳಿತ ಮಂಡಳಿ ಸದಸ್ಯ ಕರಣ್ ದೊಡವಾಡ ಮಾತನಾಡಿ, ವಿದ್ಯಾರ್ಥಿಗಳಿಗಾಗಿ ಆಯೋಜಿಸುವ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಸಂಸ್ಥೆ ಎಲ್ಲ ಸೌಲಭ್ಯ ಒದಗಿಸಲು ಸಿದ್ಧವಿದೆ. ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸೌಭಾಗ್ಯ ಚೆನ್ನಶೆಟ್ಟಿ, ಮಹಾಂತೇಶ ಗಾಣಿಗೇರ, ಸ್ವಾತಿ ಲೋಹಾರ ಅವರನ್ನು ಸನ್ಮಾನಿಸಲಾಯಿತು.  ಪ್ರಾಚಾರ್ಯ ಅಶೋಕ ಶಿಂಗೆ, ಉಪಪ್ರಾಚಾರ್ಯ ಬಿ.ಎಂ. ಸುರೇಬಾನ, ಕೆ.ಸಿ. ಗಿಡಮಲ್ಲನವರ, ದೀಪಾ ಬಿಲ್ಲೆ, ವಿರೂಪಾಕ್ಷ ಹೊಸೂರು, ಡಾ. ವಿ.ವಿ. ಹೆಬ್ಬಳ್ಳಿ, ಎಂ.ಜಿ. ದೇವಜಿ, ವಿನಾಯಕ ಮಾಳಾಪುರ, ತೇಜಸ್ವಿನಿ ಗಾಣಿಗೇರ, ಆರ್.ಬಿ. ಬಾನಪ್ಪನವರ, ಎಸ್.ಎಸ್. ಜಂಬಗಿ, ಎಂ.ಆರ್. ಹಿರೇಮಠ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.