ಧಾರವಾಡ

ತುರಮರಿಗೆ ಶ್ರೇಷ್ಠ ಗ್ರಂಥಪಾಲಕ ಪ್ರಶಸ್ತಿ

Published On :

ಧಾರವಾಡ: ಇಲ್ಲಿನ ಕಿಟೆಲ್ ಕಲಾ ಮಹಾವಿದ್ಯಾಲಯದ ಗ್ರಂಥಪಾಲಕ ರಾಜೇಶ ತುರಮರಿ ಅವರಿಗೆ ರಾಜ್ಯಮಟ್ಟದ ಶ್ರೇಷ್ಠ ಗ್ರಂಥಪಾಲಕ ಪ್ರಶಸ್ತಿ ದೊರೆತಿದೆ.
ಇತ್ತೀಚೆಗೆ ತುಮಕೂರಿನ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಗ್ರಂಥಾಲಯ ಸ್ಪೂರ್ತಿ ಸೇವೆಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಡಾ.ಎಚ್.ಎಂ. ಗಂಗಾಧರಯ್ಯ ಶ್ರೇಷ್ಠ ಗ್ರಂಥಪಾಲಕ ಪ್ರಶಸ್ತಿಯನ್ನು ನೀಡಿದರು. ಇನ್‌ಫಾರ್ಮೆಟಿಕ್ಸ್ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಎನ್.ವಿ. ಸತ್ಯನಾರಾಯಣ, ನಿಮ್ಹಾನ್ಸ್ ಪ್ರಧಾನ ಮಾಹಿತಿ ಅಧಿಕಾರಿ ಡಾ. ಎಚ್.ಎಸ್. ಸಿದ್ಧಮಲ್ಲಯ್ಯ, ಆಡಳಿತಾಧಿಕಾರಿ ಪ್ರೊ. ಸಿ.ಎನ್. ನರಸಿಂಹಮೂರ್ತಿ, ಸಾರ್ವಜನಿಕ ಗ್ರಂಥಾಲಯ ವಿಶ್ರಾಂತ ನಿರ್ದೇಶಕ ಪಿ.ವೈ. ರಾಜೇಂದ್ರಕುಮಾರ, ಪ್ರಾಚಾರ್ಯ ಪಿ. ಕೃಷ್ಣಮೂರ್ತಿ, ರಾಜ್ಯ ಕಾಲೇಜು ಗ್ರಂಥಪಾಲಕರ ಸಂಘದ ಅಧ್ಯಕ್ಷ ಡಾ. ಎಸ್.ಎಲ್. ಕಾಡದೇವರಮಠ, ಬಿ.ಎಸ್. ಮಾಳವಾಡ, ಡಾ. ಜಿ.ಆರ್. ಚಿಕ್ಕಮಠ ನೇತೃತ್ವದಲ್ಲಿ ಪ್ರಶಸ್ತಿ ಪಡೆದರು. ಪ್ರಶಸ್ತಿ ಪಡೆದ ರಾಜೇಶ ಅವರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಪ್ರಾಚಾರ್ಯ ಡಾ. ಮಾರ್ಟಿನ ಪುನೀತ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.