ಹುಬ್ಬಳ್ಳಿ: ಉಡಿ ತುಂಬುವ ಕಾರ್ಯಕ್ರಮ ನಾಳೆ
ಹುಬ್ಬಳ್ಳಿ: ಇಲ್ಲಿನ ಬಮ್ಮಾಪುರ ಓಣಿಯ ದ್ಯಾಮಮ್ಮದೇವಿ ಮತ್ತು ದುರ್ಗಮ್ಮದೇವಿ ಉಡಿ ತುಂಬುವ ಕಾರ್ಯಕ್ರಮ ಜು. 30ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ. ಅಂದು ಮಧ್ಯಾಹ್ನ 12ಕ್ಕೆ ಬಮ್ಮಾಪುರ ಓಣಿಯ ಮರಿಯಮ್ಮದೇವಿ ದೇವಸ್ಥಾನದಿಂದ ಹಿರೇಪೇಟ್, ಶಿಂಪಿಗಲ್ಲಿ, ಅಳಗುಂಡಗಿ ಓಣಿ, ಪಗಡಿ ಓಣಿ, ಘಂಟಿಕೇರಿ ಓಣಿ, ಮಂಗಳವಾರ ಪೇಟ್, ಹುಕ್ಕೇರಿ ಮಠ, ಇಟಗಿ ಮಾರುತಿಗಲ್ಲಿ, ಬಾರದಾನ ಸಾಲ, ಸರಾಫಗಟ್ಟಿ, ಕಂಚಗಾರ ಗಲ್ಲಿ ಮುಖಾಂತರ ದ್ಯಾಮವ್ವ ಮತ್ತು ದುರ್ಗವ್ವ ದೇವಿ ಗುಡಿಗೆ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಪಲ್ಲಕ್ಕಿ ಉತ್ಸವದಲ್ಲಿ ಐರಾವತ, ಡೊಳ್ಳು, ಕರಡಿ ಮಜಲು ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ನಡೆಯಲಿದೆ. ಸಂಜೆ 8ಕ್ಕೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ನಾಳೆ ಎಸ್ಡಿಎಂ ಡಾಕ್ಟರ್
ಧಾರವಾಡ: ಆಕಾಶವಾಣಿ ನೇರ ಪ್ರಾಯೋಜಿತ ಎಸ್ಡಿಎಂ ಡಾಕ್ಟರ್ ಕಾರ್ಯಕ್ರಮದಲ್ಲಿ ಎಸ್ಡಿಎಂ ಮಹಾವಿದ್ಯಾಲಯದ ಔಷಧ ಚಿಕಿತ್ಸಾ ವಿಭಾಗದ ಡಾ. ಅಮೃತ ಮಹಾಬಳಶೆಟ್ಟಿ ಜು. 30ರಂದು ಸಂಜೆ 6.50ಕ್ಕೆ ಯಕೃತ್ತಿನ ಸೋಂಕು ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಕೇಳುಗರು ತಮ್ಮ ಪ್ರಶ್ನೆಗಳನ್ನು ದೂರವಾಣಿ ಸಂಖ್ಯೆ 0836 - 2443414, 2443415 ಹಾಗೂ 2443416ಗೆ ಸಂಪರ್ಕಿಸಿ ಪ್ರಶ್ನೆ ಕೇಳಬಹುದೆಂದು ಪ್ರಕಟಣೆ ತಿಳಿಸಿದೆ.
ಸುರೇಶ್ವರಾನಂದ ಶ್ರೀ ನಿಧನಕ್ಕೆ ಗಣ್ಯರ ಸಂತಾಪ
ಧಾರವಾಡ: ಗೋಸಾಯಿ ಮಠದ ಸುರೇಶ್ವರಾನಂದ ಸ್ವಾಮೀಜಿ ಅವರ ನಿಧನಕ್ಕೆ ಇಲ್ಲಿನ ಮರಾಠಾ ವಿದ್ಯಾ ಪ್ರಸಾರಕ ಮಂಡಳಿ ಸಂತಾಪ ಸೂಚಿಸಿದೆ. ಈ ಸಂದರ್ಭದಲ್ಲಿ ಮಂಡಳಿ ಅಧ್ಯಕ್ಷ ಎಂ.ಎನ್. ಮೋರೆ, ಉಪಾಧ್ಯಕ್ಷ ಶಂಕರ ಶೇಳಕೆ, ಕಾರ್ಯಾಧ್ಯಕ್ಷ ಪುರುಷೋತ್ತಮ ಜಾಧವ, ಅರ್ಜುನರಾವ್ ಸಂಕೋಜಿ, ಬಸವಂತರಾವ್ ಗಾಯಕವಾಡ, ಸಿ.ಎನ್. ಪವಾರ, ಸಿ.ಬಿ. ಜಾಧರ ಇದ್ದರು.
ಕಾರ್ಗಿಲ್ ವಿಜಯೋತ್ಸವ
ಕಲಘಟಗಿ: ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ತಾಲೂಕು ಕರವೇ (ಪ್ರವೀಣಶೆಟ್ಟಿ ಬಣ), ಡಾ. ರಾಜ್ಕುಮಾರ ಕನ್ನಡ ಸಾಂಸ್ಕೃತಿಕ ವೇದಿಕೆ ಸಂಯುಕ್ತಾಶ್ರಯದಲ್ಲಿ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸೈನಿಕ ಈರಪ್ಪ ಧನಿಗೊಂಡ, ರವಿರಾಜ್ ಬಡಿಗೇರ, ಫಕ್ಕೀರೇಶ ಕೆಲಗೇರಿ, ಗುರುಲಿಂಗ ಉಣಕಲ್, ನೀಲಪ್ಪ ಮುತ್ತಗಿ, ಬಸವರಾಜ ದೇಸೂರ, ಬಸವಂತಪ್ಪ ಗಬ್ಬೂರ, ಬಸವರಾಜ ಯಲಿವಾಳ, ಪ್ರಭು ರಂಗಾಪುರ, ನಿಂಗಪ್ಪ ಪಟ್ಟಣಶೆಟ್ಟಿ, ಸುನೀಲ ಮನಗುಂಡಿ ಮುಂತಾದವರು ಉಪಸ್ಥಿತರಿದ್ದರು.
ಅಣ್ಣಿಗೇರಿ: ಸಾಂಸ್ಕೃತಿಕ ಕ್ರೀಡಾ ಚಟುವಟಿಕೆ
ಅಣ್ಣಿಗೇರಿ: ಪಟ್ಟಣದ ನಿಂಗಮ್ಮ ಎಸ್. ಹೂಗಾರ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ 2013-14ನೇ ಸಾಲಿನ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆ ಹಾಗೂ ವಿದ್ಯಾರ್ಥಿ ಸಂಸತ್ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಸುವರ್ಣ ವಾಹಿನಿಯ ಕನ್ನಡ ಕೋಟ್ಯಾಧಿಪತಿ ಕಾರ್ಯಕ್ರಮದ ಕೋಟಿ ವಿಜೇತ ಹುಸೇನ ಬಾಷಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಂ.ಬಿ. ಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಸುಧಾ ಎಸ್. ಕೌಜಗೇರಿ, ಪ್ರಾಚಾರ್ಯ ಎಸ್.ಎಸ್. ಹರ್ಲಾಪುರ ಮಾತನಾಡಿದರು.
ಈ ಸಂದರ್ಭದಲ್ಲಿ ಹುಸೇನ್ ಭಾಷಾ ಅವರಿಗೆ ಸಂಸ್ಥೆಯ ಆಡಳಿತ ಮಂಡಳಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿತು.
ಸಂಸತ್ ಪ್ರತಿನಿಧಿಗಳಾದ ದೀಪಾ ದೇಸಾಯಿ, ರಿಜ್ವಾನ್ ಬೇಗಂ ಉಪಸ್ಥಿತರಿದ್ದರು.
ಸೌಮ್ಯ ಹಾಗೂ ಶ್ವೇತಾ ಸಂಗಡಿಗರು ಪ್ರಾರ್ಥಿಸಿದರು. ಗಾಯತ್ರಿ ರಂಗರೆಡ್ಡಿ ಸ್ವಾಗತಿಸಿದರು. ರಾಜಶೇಖರ ಅದರಗುಂಚಿ ವಂದಿಸಿದರು. ಉಪನ್ಯಾಸಕ ಬಿ.ಡಿ. ನಲವಡಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

