ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ
ಧಾರವಾಡ: ವಿಜ್ಞಾನ ಮತ್ತು ತಂತ್ರಜ್ಞಾನದ ವಿನೂತನ ಆಯಾಮದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳು ಆಗುತ್ತಿವೆ. ಅಂತೆಯೇ, ದಂತ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ವಿಧದ ಸಲಕರಣೆಗಳು ಬರುತ್ತಿದ್ದು, ಚಿಕಿತ್ಸೆಗಳು ಸರಳ ರೀತಿಯಲ್ಲಿ ನಡೆಯುತ್ತಿವೆ ಎಂದು ವೈಜ್ಞಾನಿಕ ಹಾಗೂ ಕೈಗಾರಿಕೆ ಸಂಶೋಧನಾ ಮಂಡಳಿಯ ಮಾಜಿ ನಿರ್ದೇಶಕ ಪ್ರೊ. ಕೆ.ವಿ. ರಾಘವ ಹೇಳಿದರು.
ಇಲ್ಲಿನ ಸತ್ತೂರಿನ ಡಾ. ವೀರೇಂದ್ರ ಹೆಗಡೆ ಕಲಾಕ್ಷೇತ್ರದಲ್ಲಿ ಎಸ್ಡಿಎಂ ದಂತ ವಿಜ್ಞಾನ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ದಂತ ವೈದ್ಯರ 14ನೇ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನದ ಬೆಳವಣಿಗೆ ಮತ್ತು ಹೊಸ ತಾಂತ್ರಿಕತೆಯ ಪರಿಣಾಮದಿಂದ ದಂತ ವೈದ್ಯಕೀಯ ಕ್ಷೇತ್ರ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ. ಪ್ರಸ್ತುತ ಯುವ ವಿದ್ಯಾರ್ಥಿಗಳು ದಂತ ಶಿಕ್ಷಣದತ್ತ ಹೆಚ್ಚು ಒಲವು ತೋರಿಸುತ್ತಿರುವುದು ತಂತ್ರಜ್ಞಾನದ ಪೂರಕ ಬೆಳವಣಿಗೆ ಕಾರಣವಾಗಿದೆ ಎಂದರು.
ಸಾಕಷ್ಟು ಬದಲಾವಣೆ: ಭಾರತಿ ದಂತ ವೈದ್ಯಕೀಯ ಮಂಡಳಿ ಅಧ್ಯಕ್ಷ ಡಾ. ಮಜಂದಾರ, ವಿಜ್ಞಾನ ಕ್ಷೇತ್ರದ ವಿಸ್ತಾರದಿಂದ ದಂತ ವೈದ್ಯಕೀಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇದರ ಪ್ರಭಾವದಿಂದ ದೇಶದಲ್ಲಿ ದಂತ ವೈದ್ಯಕೀಯ ಮಹಾವಿದ್ಯಾಲಯಗಳು ಅಸ್ತಿತ್ವಕ್ಕೆ ಬರುತ್ತಿವೆ. ಇದಕ್ಕೆ ಪೂರಕ ನಿರ್ದೇಶನ ಎಂಬಂತೆ ಧಾರವಾಡ ದಂತ ವಿಜ್ಞಾನ ಮಹಾವಿದ್ಯಾಲಯ ಒಂದಾಗಿದ್ದು, ದೇಶದಲ್ಲಿ ಅದರ ಖ್ಯಾತಿ ಹೆಚ್ಚುತ್ತಿದೆ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಮಾತನಾಡಿ, ವಿಜ್ಞಾನ ಇಂದು ಸಾಮಾನ್ಯರಿಗೆ ಮುಟ್ಟುತ್ತಿದೆ. ಆದರೆ, ಬಹುತೇಕ ದಂತ ವಿದ್ಯಾರ್ಥಿಗಳ ತಾಂತ್ರಿಕತೆಯ ಜ್ಞಾನ ಸೀಮಿತವಾಗುತ್ತಿದೆ. ಉತ್ತರ ಕರ್ನಾಟಕದ ಬಡ ಜನರು ಗುಟಕಾ ಸೇವನೆಯಿಂದ ಕ್ಯಾನ್ಸರ್ನಂತಹ ರೋಗವನ್ನು ಎದುರಿಸುತ್ತಿದ್ದಾರೆ. ದಂತ ವಿದ್ಯಾರ್ಥಿಗಳು ಗುಟಕಾದ ಮಾರಕ ಮತ್ತು ಆರೋಗ್ಯ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು. ಡಾ. ಪ್ರಿಯಾ ಹೊರಟ್ಟಿ, ಜಯದೇವ ಸಿಂಗ್, ಡಾ. ಸಿ. ರಾಜು, ಡಾ. ಎಲ್. ಲಕ್ಷ್ಮೀನಾರಾಯಣ, ಡಾ. ಪಿ. ಕರುಣಾಕರ ಇದ್ದರು. ಬಲರಾಮ ನಾಯಕ ಸ್ವಾಗತಿಸಿದರು. ದಂತ ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀನಾಥ ಠಾಕೂರ ಪರಿಚಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

