ಧಾರವಾಡ

ಪ್ರಸಕ್ತ ಸಾಲಿನಲ್ಲಿ ಕೆಲ ವಿಭಾಗ ರದ್ದು: ವಾಲೀಕಾರ

Published On :

ಧಾರವಾಡ: ಕರ್ನಾಟಕ ವಿವಿಯಲ್ಲಿನ ವಿಷಯಗಳ ವಿಭಾಗಗಳನ್ನು ಮುಚ್ಚಲಾಗುತ್ತಿಲ್ಲ. 10 ವಿದ್ಯಾರ್ಥಿಗಳಿಗಿಂತ ಕಡಿಮೆ ವಿದ್ಯಾರ್ಥಿಗಳನ್ನೊಳಗೊಂಡ ವಿಭಾಗವನ್ನು ಪ್ರಸ್ತಕ ಶೈಕ್ಷಣಿಕ ವರ್ಷದಲ್ಲಿ ರದ್ದುಗೊಳಿಸುವ ಯೋಜನೆ ಕೈಗೊಳ್ಳಲಾಗಿದೆ ಎಂದು ವಾಲೀಕಾರ ಹೇಳಿದರು.
ಕವಿವಿ ಫಿಲಾಸಫಿ, ಫ್ರೆಂಚ್, ಉರ್ದು ಸೇರಿದಂತೆ ಸುಮಾರು 8 ವಿಭಾಗಗಳನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ರದ್ದುಗೊಳಿಸಲಾಗುತ್ತಿದೆ. ಈ ಕುರಿತಾಗಿ ವಿಭಾಗದ ಪ್ರಾಧ್ಯಾಪಕರ ಜತೆಗೆ ಚರ್ಚಿದ ನಂತರವೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೇವಲ 2 ಅಥವಾ 3 ವಿದ್ಯಾರ್ಥಿಗಳಿಗೆ ಇಬ್ಬರು ಕಾಯಂ ಪ್ರಾಧ್ಯಾಪಕರು ಹಾಗೂ ಇಬ್ಬರು ಅಥವಾ ಮೂವರನ್ನು ಅತಿಥಿ ಉಪನ್ಯಾಸಕರನ್ನು ನೀಡಬೇಕಿದ್ದು, ಅವೈಜ್ಞಾನಿಕ ಕ್ರಮವಾಗಿದೆ.
ವಿವಿಗೆ ಆರ್ಥಿಕ ಹೊರೆಯಾಗಲಿದೆ ಎಂಬ ಕಾರಣಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಕೆಲವೊಂದು ವಿಷಯಗಳನ್ನು ರದ್ದುಗೊಳಿಸಲು ವಿವಿ ನಿರ್ಧಾರ ಕೈಗೊಂಡಿದೆ. ರದ್ದುಗೊಳಿಸಲು ನಿರ್ಧರಿಸಿದ ವಿಷಯ ಕುರಿತಾಗಿ ಕನಿಷ್ಠ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸಕ್ತಿ ತೋರಿದಲ್ಲಿ ಮತ್ತೆ ಅವುಗಳನ್ನು ಮರು ಚಾಲನೆ ನೀಡಲಾಗುವುದು ಎಂದರು.
ಹಿಂದಿನ ಸಚಿವರದ್ದು ಬರೀ ಭರವಸೆ: ಕವಿವಿ ವೇತನಾ ಅನುದಾನ ಸರಿಪಡಿಸಲು ಈ ಹಿಂದಿನ ಉನ್ನತ ಶಿಕ್ಷಣ ಸಚಿವರು ಅನೇಕ ಭರವಸೆಗಳ ಮಹಾಪೂರವನ್ನು ಹರಿಸಿದ್ದರು. ಆದರೆ, ಸಚಿವರ ಭರವಸೆಗಳು ಕಾರ್ಯರೂಪಕ್ಕೆ ಬರಲಿಲ್ಲ ಎಂದು ಕವಿವಿ ಕುಲಪತಿ ಡಾ೤ ಎಚ್.ಬಿ. ವಾಲೀಕಾರ ಹೇಳಿದರು.
ಪ್ರಸ್ತುತ ವಿವಿಗೆ ವೇತನಾ ಅನುದಾನ ಸರಿಪಡಿಸಲು ಬೇಕಾಗಿದ್ದು, ಒಟ್ಟು ರು. 168 ಕೋಟಿ. ಹಿಂದಿನ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ವಿವಿ ವೇತಾನಾ ಅನುದಾನಕ್ಕೆ ರು. 83 ಕೋಟಿ. ಉನ್ನತ ಶಿಕ್ಷಣ ಸಚಿವರು ಎಲ್ಲವನ್ನು ಬಗೆಹರಿಸುವ ಹಾಗೆಯೇ ಮಾತನಾಡಿದ್ದರು. ಯಾವುದು ಕಾರ್ಯರೂಪಕ್ಕೆ ಬರಲಿಲ್ಲ. ಪ್ರಸಕ್ತ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಜೆಟ್ ಮಂಡನೆ ಮಾಡಲಿದೆ ಎಂದು ತಿಳಿದು ಬಂದಿದೆ. ಅದಕ್ಕಾಗಿ ತಾವು ಈಗಾಗಲೇ ರಾಜ್ಯ ಸರ್ಕಾರಕ್ಕೆ ರು. 48 ಕೋಟಿ ಹೆಚ್ಚಿಗೆ ವೇತನಾ ಅನುದಾನ ನೀಡುವಂತೆ ಪ್ರಸ್ರಾವನೆ ಕಳಿಸಿದ್ದೇವೆ ಎಂದು ವಾಲೀಕಾರ ತಿಳಿಸಿದರು.
ಪ್ರಸ್ತುತ ವಿವಿಯಲ್ಲಿ 599 ದಿನಗೂಲಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಆ ಪೈಕಿ 213 ನೌಕರರನ್ನು ಗಣಕಯಂತ್ರ ನಿರ್ವಾಹಕರಾಗಿ ನೇಮಕಗೊಂಡಿದ್ದಾರೆ. ಈ ನೌಕರರಲ್ಲಿ 150ಕ್ಕೂ ಹೆಚ್ಚು ನೌಕರರಿಗೆ ಗಣಕಯಂತ್ರ ನಿಯಂತ್ರಿಸಲು ಬರುವುದಿಲ್ಲ. ಇದೇ ತಿಂಗಳಿನಲ್ಲಿ ಅವರಿಗೆ ಪರೀಕ್ಷೆ ನಡೆಸಲಾಗುತ್ತಿದ್ದು, ಪರೀಕ್ಷೆಯಲ್ಲಿ ಉತ್ತೀಣರಾದರನ್ನು ಕೆಲಸದಲ್ಲಿಟ್ಟುಕೊಳ್ಳಲು ನಿರ್ಧರಿಸಲಾಗಿದೆ. ಉಳಿದರನ್ನು ಕೆಲಸದಿಂದ ತೆಗೆಯುವ ನಿರ್ಧಾರ ಕೈಗೊಂಡಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.