ಧಾರವಾಡ

ಜಾತಿ-ಲಿಂಗ ದ್ವಂದ್ವ ಮೀರಿದ್ದು ಸಾಂಸ್ಕೃತಿಕ ಅನನ್ಯತೆ

Published On :

ಧಾರವಾಡ: ಧಾರವಾಡದ ನೆಲದಲ್ಲಿ ಸಾಂಸ್ಕೃತಿಕ ಅನನ್ಯತೆಗೆ ಪೂರಕ ಕ್ಷೇತ್ರಗಳಾದ ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ಜಾನಪದ ಸಂಗೀತ, ರಂಗ ಪ್ರಯೋಗಗಳು, ನೃತ್ಯ ಎಲ್ಲವುಗಳ ಜೊತೆಗೆ ನಿರಂತರ ಅಭಿವ್ಯಕ್ತಿ ಕೊಂಡಿ ಕಳಚದೇ ಶಾಶ್ವತವಾಗಿದೆ ಎಂದು ರಂಗ ಕಲಾವಿದ ಅನಿಲ ದೇಸಾಯಿ ಹೇಳಿದರು. ಶನಿವಾರ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ತಾಲೂಕು ಕಸಾಪ ಹಮ್ಮಿಕೊಂಡಿದ್ದ ಧಾರವಾಡ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಧಾರವಾಡದ ಸಾಹಿತ್ಯ ಮತ್ತು ಸಾಂಸ್ಕೃತಿಕ ಅನನ್ಯತೆ ಕುರಿತ ಗೋಷ್ಠಿಯಲ್ಲಿ ಸಾಂಸ್ಕೃತಿಕ ಅನನ್ಯತೆ ಕುರಿತು ಮಾತನಾಡಿದ ಅವರು, ರಂಗಕಲೆ, ಸಂಗೀತ, ಜಾನಪದ, ಅಭಿನಯ, ನೃತ್ಯ, ಸೇರಿದಂತೆ ವಿಭಿನ್ನ ಪ್ರಕಾರಗಳಲ್ಲಿ ತುಂಬಿಕೊಂಡಿರುವ ಸಾಂಸ್ಕೃತಿಕ ಅನನ್ಯತೆ ಇಲ್ಲಿ ಜಾತಿ-ಲಿಂಗಗಳ ದ್ವಂದ್ವಗಳನ್ನು ಮೀರಿ ಬೆಳೆದಿದೆ ಎಂದರು. ಸಾಹಿತ್ಯಿಕ ಅನನ್ಯತೆ ಕುರಿತು ಪ್ರಾಧ್ಯಾಪಕ ಡಾ. ವೈ.ಎಂ. ಭಜಂತ್ರಿ ಮಾತನಾಡಿದರು. ಡಾ. ಶ್ರೀಶೈಲ ಹುದ್ದಾರ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕಾಧ್ಯಕ್ಷ ಗುರು ತಿಗಡಿ ಇತರರಿದ್ದರು. ಬಳಿಕ 3ನೇ ಗೋಷ್ಠಿ ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಸವಾಲುಗಳು ಬಗ್ಗೆ ಚರ್ಚೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.