ಪರಿಸರ ಅತಿಕ್ರಮಣ: ಜೀವಸಂಕುಲ ನಾಶ
ಧಾರವಾಡ: ಮನುಷ್ಯನ ಅತಿಯಾದ ಪರಿಸರ ಮೇಲಿನ ಅತಿಕ್ರಮಣದಿಂದ ಈಗಾಗಲೇ ನೂರಾರು ಪ್ರಬೇಧದ ಸಸ್ಯಗಳು ಹಾಗೂ ಪ್ರಾಣಿ ಸಂಕುಲ ಕಳೆದುಕೊಂಡಿದ್ದೇವೆ. ಹೀಗೆಯೇ ಮುಂದುವರಿದರೆ ಕಾಗೆ ನೋಡಲು ಮೈಸೂರು ಪ್ರಾಣಿ ಸಂಗ್ರಹಾಲಯಕ್ಕೆ ಹೋಗುವ ಸ್ಥಿತಿ ಬಂದರೂ ಆಶ್ಚರ್ಯಪಡಬೇಕಿಲ್ಲ ಎಂದು ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ವಿಜ್ಞಾನ ಸಮಿತಿ ಕೋಶಾಧ್ಯಕ್ಷ ಲಿಂಗರಾಜ ರಾಮಾಪೂರ ಹೇಳಿದರು.
ಪರಿಸರ ಮತ್ತು ಅರಣ್ಯ ಸಚಿವಾಲಯ, ರಾಜ್ಯ ವಿಜ್ಞಾನ ಪರಿಷತ್ ಜಂಟಿಯಾಗಿ ಸಮೀಪದ ಗಾಮನಗಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಆಂದೋಲನ ಅಂಗವಾಗಿ ಏರ್ಪಡಿಸಿದ್ದ ಮಕ್ಕಳಿಗಾಗಿ ನಡೆದ ಪರಿಸರ ಶಿಕ್ಷಣ ತರಬೇತಿಯಲ್ಲಿ ಮಾತನಾಡಿದ ಅವರು, ಹಾವು, ಓತಿಕಾಟ, ಗುಬ್ಬಚ್ಚಿಯಂತಹ ಜೀವಿಗಳು ಈಗ ಅಳಿವಿನ ಅಂಚಿನಲ್ಲಿವೆ. ನಮ್ಮ ಹಳ್ಳಿಗಳಿಂದ ಮಂಗಗಳೂ ಕಾಣೆಯಾಗಿವೆ. ಇದು ಅಪಾಯದ ಸಂಕೇತವಲ್ಲದೇ ಬೇರೇನೂ ಅಲ್ಲ. ಒಂದು ಪ್ರಬೇಧದ ಜೀವಿ ನಾಶದಿಂದ ಅದನ್ನು ಅವಲಂಬಿಸಿದ ಮೂವತ್ತು ಪ್ರಬೇಧದ ಜೀವಿಗಳ ನಾಶಕ್ಕೆ ಕಾರಣವಾಗುತ್ತದೆ ಎಂದರು.
ಶಾಲೆ ಮುಖ್ಯೋಪಾಧ್ಯಾಯ ವೈ.ವಿ. ಕಲ್ಲನಗೌಡರ ಮಾತನಾಡಿ, ಆರೋಗ್ಯಕ್ಕೆ ಉತ್ತಮ ಪರಿಸರ ಅವಶ್ಯ. ನಮ್ಮ ಸುತ್ತಲಿನ ಪರಿಸರ ಶುಭ್ರವಾಗಿ ಇಟ್ಟುಕೊಳ್ಳಬೇಕು. ಎಲ್ಲರೂ ಕಡ್ಡಾಯವಾಗಿ ಶೌಚಾಲಯ ಬಳಸಬೇಕು. ಇದರಿಂದ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಸಾಧ್ಯ ಎಂದರು. ಎಸ್.ಪಿ. ಪಾಟೀಲ ಇದ್ದರು. ಟಿ.ಜೆ. ರೂಪಾ ಪ್ರಾರ್ಥಿಸಿದರು. ಐ.ಬಿ. ಗುಡಸಲಮನಿ ಸ್ವಾಗತಿಸಿದರು. ಎಸ್.ಎಂ. ನಾಯ್ಕರ ನಿರೂಪಿಸಿದರು. ಎಸ್.ಕೆ. ಮಾಳದಕರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

