ಮೇವು ಕೊರತೆ: ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ
ಕುಂದಗೋಳ: ತಾಲೂಕಿನ ಗೋಶಾಲೆಗಳಲ್ಲಿ ಜಾನುವಾರಗಳಿಗೆ ಮೇವು ಕೊರೆಯಾಗಿರುವುದನ್ನು ಖಂಡಿಸಿ, ಕುಂದಗೋಳ ಹಾಗೂ ಸಂಶಿ ಗ್ರಾಮಗಳ ರೈತರು ಸುಮಾರು 300 ಜಾನುವಾರುಗಳೊಂದಿಗೆ ತಹಸೀಲ್ದಾರ್ ಕಚೇರಿ ಮುಂದೆ ಗುರುವಾರ ಪ್ರತಿಭಟಿಸಿದರು.
ಕುಂದಗೋಳ ಹಾಗೂ ಸಂಶಿಯ ಗೋಶಾಲೆಗಳ 1300ಕ್ಕೂ ಹೆಚ್ಚು ಜಾನುವಾರುಗಳ ಮೇವು ಕೊರತೆಯಿಂದ ನರಳುತ್ತಿದ್ದವು. ಇದರಿಂದ ರೊಚ್ಚಿಗೆದ್ದ ರೈತರು ಗುರುವಾರ ಕುಂದಗೋಳ ತಹಸೀಲ್ದಾರ್ ಕಚೇರಿಗೆ ಜಾನುವಾರುಗಳನ್ನು ಕರೆತಂದಿದ್ದರು.
ಪ್ರತಿಭಟನಾ ರೈತರನ್ನು ಸಮಾಧಾನಪಡಿಸಿದ ತಹಸೀಲ್ದಾರ್ ಎಚ್. ಎಂ ಓಲೇಕಾರ್ ಅವರು, 'ಮೇವು ಪೂರೈಕೆಯಲ್ಲಿ ತುಸು ವಿಳಂಬವಾಗಿದ್ದು ಶೀಘ್ರವೇ ಮೇವು ಪೂರೈಸಲಾಗುವುದು' ಎಂದು ಹೇಳಿದರು.
ತಹಸೀಲ್ದಾರ್ ಅವರ ಭರವಸೆಯಿಂದ ಪ್ರತಿಭಟನೆ ಕೈಬಿಟ್ಟ ರೈತರು, ತಾಲೂಕು ಆಡಳಿತಕ್ಕೆ ನಾಲ್ಕು ದಿನಗಳವರೆಗೆ ಗಡುವು ನೀಡಿದ್ದಾರೆ. ಒಂದು ವೇಳೆ ಮೇವು ಪೂರೈಸದಿದ್ದರೆ ತಹಸೀಲ್ದಾರ್ ಕಚೇರಿಗೆ ಬೀಗ ಜಡಿಯುವುದಾಗಿ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

