ಧಾರವಾಡ: ನಾಳೆಯಿಂದ ಇನ್‌ಸಿಗ್ನಿಯಾ-2013
ಧಾರವಾಡ: ಇಲ್ಲಿನ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜು ಮಾ. 21ರಿಂದ 23ರ ವರೆಗೆ ಕಾಲೇಜು ಆವರಣದಲ್ಲಿ 80 ವಿವಿಧ ತಾಂತ್ರಿಕ, ಸಾಂಸ್ಕೃತಿಕ ಹಾಗೂ ಔದ್ಯೋಗಿಕ ಸ್ಪರ್ಧೆಗಳ ರಾಷ್ಟ್ರ ಮಟ್ಟದ ಇನ್‌ಸಿಗ್ನಿಯಾ-2013 ಸಮಾರಂಭ ಹಮ್ಮಿಕೊಂಡಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಾಲೇಜು ಪ್ರಾಚಾರ್ಯ ಡಾ ಎಸ್. ಮೋಹನ ಕುಮಾರ, ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತಮಿಳುನಾಡಿನ 100ಕ್ಕೂ ಹೆಚ್ಚು ತಾಂತ್ರಿಕ ಕಾಲೇಜುಗಳಿಂದ 400 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಮೂರು ದಿನಗಳಲ್ಲಿ ರೋಬೋಟಿಕ್ಸ್, 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ವಿಷಯ ಮಂಡನೆ, ನೃತ್ಯ ಹಾಗೂ ಸಂಗೀತ ಸ್ಪರ್ಧೆಗಳು, ಚರ್ಚಾ ಸ್ಪರ್ಧೆ, ಸಂಸತ್ತಿನ ಸಂಗ್ರಾಮ, ಗೇಮಿಂಗ್, ತಾಂತ್ರಿಕ ಕ್ವಿಜ್ ನಡೆಯಲಿದೆ ಎಂದರು.
ಮಾ. 22ರಂದು ಸಂಜೆ 7.30ಕ್ಕೆ ರತ್ನಮ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಹಿಂದಿ ಚಿತ್ರಗಳ ಖ್ಯಾತ ಹಿನ್ನಲೆ ಗಾಯಕ ನೀರ್ಜ ಶ್ರೀಧರ್ ಹಾಗೂ ಮುಂಬೈನ ವೀಕಿಂಗ್ಸ್ ಬ್ಯಾಂಡ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. 23ರಂದು ಸಂಜೆ 4ಕ್ಕೆ ಖ್ಯಾತ ಸಂಗೀತಗಾರ್ತಿ ಅರ್ಚನಾ ಉಡುಪ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. 21ರ ಬೆಳಿಗ್ಗೆ 10ಕ್ಕೆ ನಡೆಯುವ ಉದ್ಘಾಟನೆಯಲ್ಲಿ ನಿವೃತ್ತ ಡಿಜಿಪಿ ಶಂಕರ ಬಿದರಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅತಿಥಿಗಳಾಗಿ ಎಸ್‌ಡಿಎಂಇ ಸೊಸೈಟಿ ಯೋಜನಾ ನಿರ್ದೇಶಕ ಶ್ರೇಯಸ್ ಕುಮಾರ್, ಕಾರ್ಯದರ್ಶಿ ಜಿನೇಂದ್ರ ಪ್ರಸಾದ, ಸಹ ಕಾರ್ಯದರ್ಶಿ ಜೀವನಂದರ ಕುಮಾರ ಭಾಗವಹಿಸುತ್ತಾರೆ ಎಂದರು.
ಎಸ್‌ಡಿಎಂ ಕಾಲೇಜು ವಿದ್ಯಾರ್ಥಿಗಳು ತಾಂತ್ರಿಕ ಅನ್ವೇಷಣೆಯಲ್ಲಿ ಮುಂದಿದ್ದು, ಕಾಲೇಜಿನ ಮೂರು ವಿದ್ಯಾರ್ಥಿಗಳು ಏಪ್ರಿಲ್ ತಿಂಗಳಲ್ಲಿ ಕೊಲಂಬಿಯಾದಲ್ಲಿ ನಡೆಯಲಿರುವ ಇಂಡೋ-ಯುಎಎಸ್ ರೋಬೋ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿರುವುದು ಹೆಮ್ಮೆಯೇ ಸರಿ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಡಾ ಕೆ. ಗೋಪಿನಾಥ, ಪ್ರೊ ವಿನಾಯಕ ಮಿಸ್ಕಿನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

