ವಿಶ್ವಕ್ಕೆ ಎದುರಾಗಲಿದೆ ಆಹಾರ ಕೊರತೆ
ಕ.ಪ್ರ.ವಾರ್ತೆ ಧಾರವಾಡ ಮಾ.22
70ರ ದಶಕದಲ್ಲಿ ಜಾಗತಿಕ ಜನಸಂಖ್ಯೆ 3.7 ಬಿಲಿಯನ್ ಇದ್ದಾಗ ಪ್ರತಿಯೊಬ್ಬರೂ ಹೆಚ್ಚು ಭೂ ಪ್ರದೇಶ ಬಳಸಲು ಅವಕಾಶವಿತ್ತು. ಆದರೆ, ಸದ್ಯ ಜನಸಂಖ್ಯೆ ಏಳು ಬಿಲಿಯನ್ ತಲುಪಿದ್ದು, ಕೃಷಿ ಭೂಮಿ ಕೊರತೆ ಉಂಟಾಗುತ್ತಿದೆ. 2015ರ ಹೊತ್ತಿಗೆ ಜನಸಂಖ್ಯೆ ಒಂಬತ್ತು ಬಿಲಿಯನ್ ತಲುಪುವುದರಲ್ಲಿ ಸಂದೇಹವಿಲ್ಲ ಎಂದು ಅಂತಾರಾಷ್ಟ್ರೀಯ ಅರೆ-ಶುಷ್ಕ ವಲಯ ಬೆಳೆಗಳ ಸಂಶೋಧನಾ ಸಂಸ್ಥೆಯ ಮಹಾ ನಿರ್ದೇಶಕ ಡಾ. ವಿಲಿಯಂ ಡಿ. ದರ್ ಹೇಳಿದರು.
ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ವಿವಿಯ 26ನೇ ಢಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಸದ್ಯ ಆಹಾರದ ಕೊರತೆಯಿಂದ ಜಗತ್ತಿನ 10 ಮಿಲಿಯನ್ ಜನತೆ ಉಪವಾಸ ಮಲಗುತ್ತಿದ್ದಾರೆ. ಭಾರತದ 12 ಮಿಲಿಯನ್ ಜನಸಂಖ್ಯೆಯಲ್ಲಿ ಶೇ.50ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದು, ಇದರಲ್ಲಿ ಬಿಹಾರ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.
ಕೃಷಿಯಲ್ಲೇ ಭವಿಷ್ಯ: ದೇಶದ ಆಹಾರ ಭದ್ರತೆ ಸಾಧಿಸಲು ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ಸಂಶೋಧನೆ ಹಾಗೂ ಅನ್ವೇಷಣೆ ಅತ್ಯವಶ್ಯಕ. ಕೃಷಿಯಲ್ಲಿ ಹೆಚ್ಚಿನ ಸಾಧನೆಗೈಯಲು ಗ್ರಾಮೀಣ ಯುವಕರಿಗೆ ಕೃಷಿಯಲ್ಲಿಯೇ ಭವಿಷ್ಯ ದೊರೆಯುವಂತಾಗಬೇಕು. ಸದ್ಯ ಗ್ರಾಮೀಣ ಪ್ರದೇಶದ ಸಾಕಷ್ಟು ಜನ ಕೃಷಿ ತ್ಯಜಿಸಿ ಜೀವನೋಪಾಯಕ್ಕೆ ಬೇರೆ ಉದ್ಯೋಗ ಅರಸುತ್ತಿದಾರೆ. ವಿದ್ಯಾರ್ಥಿಗಳೂ ಕೃಷಿ ವಿವಿ ಹಾಗೂ ಮಹಾವಿದ್ಯಾಲಯಗಳಿಂದ ದೂರ ಸರಿಯುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.
ಕೃಷಿಯನ್ನು ಲಾಭದಾಯಕ ಉದ್ದಿಮೆಯನ್ನಾಗಿ ಪರಿವರ್ತಿಸಬೇಕಿದೆ. ರೈತರಿಗೆ ವಿಜ್ಞಾನ, ಅನ್ವೇಷಣೆ ಹಾಗೂ ಸರ್ಕಾರದ ಸಹಕಾರ ಕುರಿತ ರೈತಪರ ನೀತಿ ಮತ್ತು ನಿಯಮಗಳನ್ನು ಮನದಟ್ಟು ಮಾಡಬೇಕು. ಹೆಚ್ಚು ಫಸಲು ತೆಗೆಯುವ ಬಗ್ಗೆ ಮಾಹಿತಿ ನೀಡಬೇಕಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

