ಧಾರವಾಡ

ಕೊಟ್ಟೂರು: ಪಟ್ಟಣಿಗರಲ್ಲಿ ಕುತೂಹಲ

Published On :

ಕೊಟ್ಟೂರು: ಪಟ್ಟಣದಲ್ಲಿ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಗೆಲವಿನ ಅಂದಾಜಿನ ಲೆಕ್ಕಾಚಾರ ಜೋರಾಗಿಯೇ ನಡೆದಿದೆ. ಭಾನುವಾರ ನಡೆದ ಚುನಾವಣೆಯಲ್ಲಿ ನೇರ ಪೈಪೋಟಿ ಬಿಜೆಪಿಯ ಕೆ. ನೇಮಿರಾಜ ನಾಯ್ಕ ಜೆಡಿಎಸ್‌ನ ಭೀಮಾನಾಯ್ಕ ನಡುವೆ ಸ್ಪರ್ಧೆ ಕಂಡುಬಂದಿತ್ತು. ಕಾಂಗ್ರೆಸ್‌ನ ಎಲ್. ಮಾರೆಣ್ಣ, ಕೆಜೆಪಿಯ ಪಿ.ಎಚ್. ದೊಡ್ಡರಾಮಣ್ಣ ಕಣದಲ್ಲಿ ಉಳಿದು ಮತದಾರರ ಮನಗೆಲ್ಲುವ ಪ್ರಯತ್ನ ನಡೆಸಿದ್ದರು. ಮತದಾನದ ಪ್ರಮಾಣವನ್ನು ತಮಗೆ ಅನುಕೂಲಕ್ಕೆ ತಕ್ಕಂತೆ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರುಗಳು ಬಳಸಿಕೊಳ್ಳುತ್ತಾ ತಮ್ಮದೇ ಗೆಲವು ಎಂದು ಅತಿ ವಿಶ್ವಾಸದಿಂದ ಬೀಗತೊಡಗಿದ್ದಾರೆ. ತಾವು ಚುನಾವಣೆಯಲ್ಲಿ ನಡೆಸಿದ ಕಾರ್ಯಚಟುವಟಿಕೆ ಮತ್ತು ಚಮತ್ಕಾರಗಳ ಪ್ರಯೋಗ ಬಹಳಷ್ಟು ಮತಗಳನ್ನು ತಮ್ಮ ಪರವಾಗಿ ಬರುವುದಕ್ಕೆ ಆಸ್ಪದವಾಗಿದೆ ಎಂದು ಹೇಳುತ್ತಿರುವ ಕಾರ್ಯಕರ್ತರುಗಳು ಈರ್ವರ ನಡುವಿನ ಗೆಲವನ್ನೇ ಇದೀಗ ಎದುರು ನೋಡತೊಡಗಿದ್ದಾರೆ.
ಬೆಟ್ಟಿಂಗ್: ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್‌ನ ಎಸ್. ಭೀಮಾನಾಯ್ಕ ಗೆಲವು ಸಾಧಿಸುವುದು ಈಗಾಗಲೆ ಖಾತ್ರಿಯಾಗಿದೆ ಎಂದೆ ನಂಬಿರುವ ಇಲ್ಲಿನ ಜೆಡಿಎಸ್ ಮುಖಂಡರು ರು. 3 ಲಕ್ಷ ಪಣವಾಗಿರಿಸಿದ್ದಾರೆ. ಇದಕ್ಕೆ ಸವಾಲಾಗಿ ಬಿಜೆಪಿಯ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಮತ್ತು ಸ್ನೇಹಿತರು ರು. ಲಕ್ಷವನ್ನು ಇಲ್ಲಿನ ಗಣ್ಯ ವರ್ತಕರೊಬ್ಬರ ಮಧ್ಯಸ್ಥಿತಿಕೆಯಲ್ಲಿ ಇರಿಸಿದ್ದಾರೆ. ಮುಂಗಡವಾಗಿ ಎರಡೂ ಬಳಗದವರು ಈಗಾಗಲೇ ಸಂಪೂರ್ಣ ಹಣವನ್ನು ಮಧ್ಯಸ್ಥಿತಿಕೆ ವಹಿಸಿದವರ ಬಳಿ ತಂದು ಒಪ್ಪಿಸಿದ್ದಾರೆ. ಸಣ್ಣಪುಟ್ಟ ಬೆಟ್ಟಿಂಗ್‌ಗಳು ಪಟ್ಟಣದಲ್ಲಿ ಜೋರಾಗಿ ನಡೆದಿವೆ. ಒಟ್ಟಾರೆಯಾಗಿ ಬುಧವಾರ ಹೊರ ಬೀಳಲಿರುವ ಫಲಿತಾಂಶ ಎಲ್ಲರ ನಂಬಿಕೆಯ ಭರವಸೆಯನ್ನು ಹೊರಗಿಡಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.