ಎಸ್ಸೆಸ್ಸೆಲ್ಸಿ, ಪಿಯುನಲ್ಲಿ ಸಾಧನೆ
ಧಾರವಾಡ: ತಾಲೂಕಿನ ಯಾದವಾಡ ಗ್ರಾಮದ ಲಕ್ಷ್ಮಿ ಕಮ್ಮಾರ ಪಿಯುಸಿ ಕಲಾ ವಿಭಾಗದಲ್ಲಿ ಮತ್ತು ಪೂರ್ಣಿಮಾ ಹಳ್ಳಗೇರಿಮಠ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಗ್ರಾಮಕ್ಕೆ ಗೌರವ ತಂದಿದ್ದಾರೆ. ಆರ್ಎಲ್ಎಸ್ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಲಕ್ಷ್ಮಿ ಕಮ್ಮಾರ ಶೇ. 87ರಷ್ಟು ಅಂಕಗಳಿಸಿ ಸಾಧನೆಗೈದರೆ, ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಪೂರ್ಣಿಮಾ ಹಳ್ಳಿಗೇರಿಮಠ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿಯಲ್ಲಿ ಶೇ. 90.14ರಷ್ಟು ಸಾಧನೆ ಮಾಡಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಆರ್ಎಲ್ಎಸ್ ಕಾಲೇಜಿನ ಪಿಯುಸಿ ಕಲಾ ವಿಭಾಗದ ಲಕ್ಷ್ಮಿ ಕಮ್ಮಾರ ಕನ್ನಡ 88, ಇಂಗ್ಲಿಷ್ 78, ಅರ್ಥಶಾಸ್ತ್ರ 82, ವಾಣಿಜ್ಯ ಅಧ್ಯಯನ 90, ಲೆಕ್ಕಶಾಸ್ತ್ರ 89, ಸಂಖ್ಯಾಶಾಸ್ತ್ರ 97 ಒಟ್ಟು 524, ಶೇ. 87ರಷ್ಟು ಅಂಕ ಗಳಿಸಿದ್ದಾರೆ. ಅದರಂತೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪೂರ್ಣಿಮಾ ಹಳ್ಳಗೇರಿಮಠ ಅವರು 625ಕ್ಕೆ ಒಟ್ಟು 564 ಶೇ. 90.14ರಷ್ಟು ಫಲಿತಾಂಶ ಪಡೆದಿದ್ದಾರೆ.
ಪಿಯುಸಿ: ಹುಕ್ಕೇರಿಕರ್ ಕಾಲೇಜಿನ ಸಾಧನೆ
ಧಾರವಾಡ: ಇಲ್ಲಿನ ಜೆಎಸ್ಸೆಸ್ಸ್ ಸಂಸ್ಥೆಯ ಆರ್.ಎಸ್. ಹುಕ್ಕೇರಿಕರ ಕಾಲೇಜಿನ ಒಟ್ಟು 753 ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಯಲ್ಲಿ ಪಾಸಾಗಿದ್ದು, ಶೇ. 85ರಷ್ಟು ಸಾಧನೆ ಮಾಡಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶೇ. 83.42ರಷ್ಟು ಫಲಿತಾಂಶ ಬಂದಿದ್ದು, 105 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 368 ವಿದ್ಯಾರ್ಥಿಗಳು ಪ್ರಥಮ ವರ್ಗದಲ್ಲಿ ಪಾಸಾಗಿದ್ದಾರೆ. ಅದರಂತೆ ವಾಣಿಜ್ಯ ವಿಭಾಗದಲ್ಲಿ ಶೇ. 90.65 ಫಲಿತಾಂಶ ಬಂದಿದ್ದು, 27 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಹಾಗೂ 51 ವಿದ್ಯಾರ್ಥಿಗಳು ಪ್ರಥಮ ವರ್ಗದಲ್ಲಿ ಪಾಸಾಗಿದ್ದಾರೆ. ಅಲ್ಲದೇ, ಕಲಾ ವಿಭಾಗದಲ್ಲಿ ಶೇ. 84.81 ಫಲಿತಾಂಶ ಬಂದಿದ್ದು ಇಬ್ಬರು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 38 ವಿದ್ಯಾರ್ಥಿಗಳು ಪ್ರಥಮ ವರ್ಗದಲ್ಲಿ ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ವಿದ್ಯಾಸಾಗರ ಬಿ. (ಶೇ. 95.50), ಪವನ ಮಾನಿಬಣಕಾರ (ಶೇ. 94.0) ಮತ್ತು ಅನಿರುದ್ಧ ಪಾಟೀಲ (ಶೇ. 93.83), ವಾಣಿಜ್ಯ ವಿಭಾದಲ್ಲಿ ಚಿನ್ಮಯ ಗದ್ರೆ (ಶೇ. 93.33), ತಲತ್ ಸೌದಾಗರ (ಶೇ.92.50) ಅಂಕಗಳನ್ನು ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯರಾದ ಭಾರತಿ ಶಾನಬಾಗ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

