ಧಾರವಾಡ

ಶ್ರೀರಾಮ ವಿಜಯ ಮಂತ್ರ ಜಪಿಸಲು ಸೂಚನೆ

Published On :

ಧಾರವಾಡ: ಇಲ್ಲಿನ ವಿಶ್ವ ಹಿಂದು ಪರಿಷದ್ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಿಸಲು ಶ್ರೀರಾಮ ವಿಜಯ ಮಂತ್ರ ಜಪಿಸುವಂತೆ ಸೂಚಿಸಿತ್ತು. ಅದರಂತೆ ವಿಜಯ ಮಹಾಮಂತ್ರ ಜಪದ ಅನುಷ್ಠಾನ ಮಾಡಲು ನಿರ್ಧರಿಸಲಾಗಿದ್ದು, ಅನುಷ್ಠಾನದಲ್ಲಿ ಭಾಗವಹಿಸದ ಎಲ್ಲ ರಾಮ ಭಕ್ತರು ಜಪದ ಸಂಖ್ಯೆಯ ಕಾರ್ಡ್ಗಳನ್ನು ತಲುಪಿಸಲು ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಮೊ ಸಂಖ್ಯೆ 81052-32398, 99863-39646 ಸಂಪರ್ಕಿಸಬಹುದು.

ನಾಳೆ ಭಾವಗೀತೆ ಗಾಯನ ಸಂಜೆ ಕಾರ್ಯಕ್ರಮ
ಧಾರವಾಡ: ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಇಲ್ಲಿನ ಸಾಧನಕೇರಿ ಬೇಂದ್ರೆ ಭವನದಲ್ಲಿ ಮೇ 15ರಂದು ಸಂಜೆ 6ಕ್ಕೆ ಭಾವಗೀತೆ ಗಾಯನ ಸಂಜೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಯುವ ಕಲಾವಿದರಿಂದ ಕನ್ನಡ ಕವಿಗಳ ಭಾವಗೀತೆ ಗಾಯನ ನಡೆಯಲಿದೆ. ಯುವ ಗಾಯಕರಾದ ಸುಪನ್ ಎಸ್. ಹಾಗೂ ಸೃಷ್ಟಿ ಸುಗತೆ ಭಾವಗೀತೆ ಹಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಇಂದು ಬಸವೇಶ್ವರ ನಾಟಕ ಪ್ರದರ್ಶನ
ಧಾರವಾಡ: ಕಲಾಸಂಗಮ ಸಂಸ್ಥೆ ವತಿಯಿಂದ ಬಸವ ಜಯಂತಿ ಶತಮಾನೋತ್ಸವ ಅಂಗವಾಗಿ ಇಲ್ಲಿನ ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ಮೇ 14ರ ಸಂಜೆ 6ಕ್ಕೆ ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನಗೊಳ್ಳಲಿದೆ. ರಂಗಭೂಮಿ ನಟ ಪ್ರಭು ಹಂಚಿನಾಳ ನಾಟಕ ನಿದೇಶಿಸಿದ್ದಾರೆ. ಈ ನಾಟಕದಲ್ಲಿ ಅವರು ಬಸವಣ್ಣನವರ ಪಾತ್ರ ನಿರ್ವಹಿಸುತ್ತಿದ್ದಾರೆ. ಸಾಹಿತಿ ಮೋಹನ ನಾಗಮ್ಮನವರ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಟಕದಲ್ಲಿ ಅನಸೂಯಾ ಹಂಚಿನಾಳ, ಪ್ರಶಾಂತ ಹಂಚಿನಾಳ, ಮಕಬೂಲ ಹುಣಸಿಕಟ್ಟಿ, ವಿಜಯಿಂದ್ರ ಅರ್ಚಕ, ಬಸವರಾಜ ಹೆಸರೂರ, ರವಿ ಗುಣಪಾಲ, ಎಲ್.ಆರ್. ಬೂದಿಹಾಳ, ಪವನ ಹಂಚಿನಾಳ, ಎಂ.ಆರ್. ಭಾವಖಾನರವರ ಪಾತ್ರವಹಿಸಿದ್ದಾರೆ. ಅಲ್ಲದೇ, ಸುರೇಶ ನಿಡಗುಂದಿ ಸಂಗೀತ, ಹನುಮಂತ್ರಪ್ಪ ಭಜಂತ್ರಿ ತಬಲಾ, ಕ್ಯಾಸಿಯೋ ಹಾಗೂ ನಾಗರಾಜ ಘಾಟಗೆ ತಾಂತ್ರಿಕ ನಿರ್ವಹಣೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಇಂದು ನೇತ್ರ ಉಚಿತ ತಪಾಸಣೆ ಕಾರ್ಯಕ್ರಮ
ಹುಬ್ಬಳ್ಳಿ: ನಗರದ ಉಣಕಲ್ ಕ್ರಾಸ್ನಲ್ಲಿರುವ ದಿವ್ಯಜ್ಯೋತಿ ಆಸ್ಪತ್ರೆಯಲ್ಲಿ ಮೇ 15ರಂದು ಗ್ಲುಕೋಮಾ (ಕಾಚಬಿಂದು) ಕಾಯಿಲೆ ಕುರಿತು ನೇತ್ರ ಉಚಿತ ತಪಾಸಣೆ, ಆಪ್ತ ಸಮಾಲೋಚನೆ ಹಾಗೂ ತಿಳಿವಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೊದಲ 20 ಅರ್ಹ ಗ್ಲುಕೋಮಾ ರೋಗಿಗಳಿಗೆ ಸ್ಕ್ಯಾನಿಂಗ್ನ್ನು ಉಚಿತವಾಗಿ ಮಾಡಲಾಗುವುದು. ಮಾಹಿತಿಗೆ ದೂ ಸಂ-0836 2272345 ಅಥವಾ 2272828 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.