ಶಾಸ್ತ್ರ, ವಿಜ್ಞಾನ ಬೇರೆ ಬೇರೆ: ನಾಗೇಂದ್ರ ಭಟ್
ಧಾರವಾಡ: ಜ್ಯೋತಿಷ್ಯ ಶಾಸ್ತ್ರಕ್ಕೂ ವಿಜ್ಞಾನಕ್ಕೂ ಹೋಲಿಕೆ ಮಾಡದಿರಿ. ಜೋತಿಷ್ಯ ಶಾಸ್ತ್ರವು ಪವಿತ್ರವಾಗಿದ್ದು, ಅದನ್ನು ವಿಜ್ಞಾನವೆಂದು ಹೇಳುವುದನ್ನು ನಾನು ಒಪ್ಪಲಾರೆ ಎಂದು ಬ್ರಹ್ಮಶ್ರೀ ನಾಗೇಂದ್ರ ಭಟ್ ಹೇಳಿದರು.
ಪ್ರಸಿದ್ಧ ಜ್ಯೋತಿಷಿ ಎನ್.ಕೆ. ಜೋಗಳೇಕರರ ಸ್ಮರಣಾರ್ಥ ಅಖಿಲ ಕರ್ನಾಟಕ ಜ್ಯೋತಿರ್ವಿಜ್ಞಾನ ಸದಸ್ಯರು, ವಿವಿಧ ಜ್ಯೋತಿಷಿಗಳು ಧಾರವಾಡ ಪಂಚಾಂಗ ಸಮಿತಿ ಜ.ಶಂ. ಸಂಸ್ಕೃತ ಪಾಠಶಾಲೆ, ಅಖಿಲ ಕರ್ನಾಟಕ ಜ್ಯೋತಿರ್ವಿಜ್ಞಾನ ಸಂಸ್ಥೆ ಹಾಗೂ ಜೋಗಳೇಕರ ಕುಟುಂಬದವರ ಸಹಯೋಗದಲ್ಲಿ ಭಾನುವಾರ ನಗರದ ಭಾರತೀಯ ವೈದ್ಯಕೀಯ ಭವನದಲ್ಲಿ ನಡೆದ ಜ್ಯೋತಿಷ್ಯ ಶಾಸ್ತ್ರ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ವಿಜ್ಞಾನ ವಿಷಯ ಜ್ಞಾನ. ಅದು ಪೂರ್ಣ ಜ್ಞಾನವಲ್ಲ. ಅದಕ್ಕೆ ಒಂದು ವ್ಯಾಪ್ತಿ ಇದ್ದು, ಅದರ ಅಡಿಯಲ್ಲಿ ಆಗಿರುವ ಇಂದಿನ ಜ್ಞಾನ-ತಂತ್ರಜ್ಞಾನದ ಬಳಕೆ ಬಗ್ಗೆ ಮೆಚ್ಚುಗೆ ಇದೆ. ಆದರೆ, ಶಾಸ್ತ್ರವೇ ವಿಜ್ಞಾನವೆಂದು ಹೇಳುತ್ತಿರುವುದನ್ನು ವಿರೋಧಿಸುತ್ತೇನೆ. ಶಾಸ್ತ್ರ ಹಾಗೂ ವಿಜ್ಞಾನ ಬೇರೆಯಾಗಿದ್ದು, ಶಾಸ್ತ್ರವು ಪರಿಪೂರ್ಣ ಜ್ಞಾನ ಹೊಂದಿದೆ ಎಂದರು.
ಪಂಚಾಂಗದಲ್ಲಿ ಕೂಡ ಬಹಳ ವಿಚಾರ ಮಾಡಬೇಕು. ಕಾರಣ ಅದರಲ್ಲೂ ಕೂಡ ಕೆಲವೊಂದು ದೋಷಗಳು, ಸಮಸ್ಯೆಗಳು ಉದ್ಭವಿಸಲು ಕಾರಣವಾಗಿವೆ. ಗಣಿತ ಶಾಸ್ತ್ರ ಸರಿಯಾಗಿ ಮಾಡದೇ ಹೋದರೆ ಫಲ ಜ್ಯೋತಿಷ್ಯ ತಪ್ಪಾಗುತ್ತದೆ. ಹೀಗಾಗಿ ಗಣಿತ ಜ್ಯೋತಿಷ್ಯವನ್ನು ಸರಿಯಾಗಿ ಅಧ್ಯಯಿಸಬೇಕು. ಅಲ್ಲದೇ ಚಿಕಿತ್ಸಕ ಬುದ್ಧಿಯಿಂದ ಕಾರ್ಯ ನಿರ್ವಹಿಸಿದಾಗ ಎಲ್ಲ ಸಮಸ್ಯೆಗಳಿಗೂ ಪರಿಹಾರ ಹುಡುಕಬಹುದು ಎಂದರು.
ಸಮ್ಮೇಳನ ಉದ್ಘಾಟಿಸಿದ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಶ್ರೀ, ಪ್ರಾಚೀನ ಕಾಲದಿಂದಲೂ ಜ್ಯೋತಿಷ್ಯ ಶಾಸ್ತ್ರವು ತನ್ನದೇ ವಿಶಿಷ್ಟ ಛಾಪು ಮೂಡಿಸಿದ್ದು, ಇಂದಿಗೂ ಕೂಡ ಪ್ರಸ್ತುತ. ಅದನ್ನು ಉಳಿಸಿ, ಬೆಳೆಸಲು ಮಠಾಧೀಶರು ಸಹಕಾರ ನೀಡಬೇಕಿದೆ ಎಂದರು.
ಸಿ.ಆರ್. ಜೋಶಿ ಮಾತನಾಡಿ, ಜೋಗಳೇಕರ ಅವರು ಜ್ಯೋತಿಷಿಶಾಸ್ತ್ರ ಶ್ರೀಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡಿದ್ದರೆ. ಅವರನ್ನು ಸ್ಮರಣೆಗಾಗಿ ಹಮ್ಮಿಕೊಂಡಿರುವ ಸಮ್ಮೇಳನ ನಿಜಕ್ಕೂ ಅರ್ಛಪೂರ್ಣ. ಅವರ ಜೀವನದ ತತ್ವ-ಸಿದ್ಧಾಂತಗಳನ್ನು ರೂಢಿಸಿಕೊಳ್ಳುವ ಅವಶ್ಯಕತೆಯಿದ್ದು, ಹಣಕ್ಕಾಗಿ ಜ್ಯೋತಿಷ್ಯ ಮಾಡದೇ ಜನರ ಸೇವೆ, ಒಳಿತಿಗಾಗಿ ಮಾಡಬೇಕು ಎಂದರು.
ಪ್ರೊ. ಶ್ರೀಕಾಂತ ಮಂಗಸುಳಿ ಅಧ್ಯಕ್ಷತೆ ವಹಿಸಿದ್ದರು. ಎಂ.ಐ. ಹೆಗಡೆ, ಜ್ಯೋತಿಷಿಗಳಾದ ಡಾ. ಬಿ.ಎನ್. ವಾಸನ್, ಡಾ. ಆನಂದ ಹಂದಿಗೋಳ ಇದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

