ನಾಗರಿಕ ಅಣು ಹೊಣೆಗಾರಿಕೆ ಮಸೂದೆ ಸಹಾಯಕಾರಿ
ಹುಬ್ಬಳ್ಳಿ: 2010ರಲ್ಲಿ ಭಾರತದಲ್ಲಿ ಜಾರಿಗೊಂಡಿರುವ ನಾಗರಿಕ ಅಣು ಹೊಣೆಗಾರಿಕೆ ಮಸೂದೆ ಜಗತ್ತಿನಲ್ಲಿ ಅತ್ಯಂತ ಕಠಿಣ ಕಾನೂನಾತ್ಮಕ ಅಂಶಗಳನ್ನು ಹೊಂದಿದ್ದು, ಈ ಮಸೂದೆ ಅಣುಶಕ್ತಿ ಉದ್ಯಮ ಮತ್ತು ಅಣುಶಕ್ತಿ ಅವಘಡದಿಂದ ಹಾನಿ ಅನುಭವಿಸುವ ಸಂತ್ರಸ್ತರನ್ನು ರಕ್ಷಿಸುವ ಸಾಮರ್ಥ್ಯ ಹೊಂದಿದೆ ಎಂದು ಸುಪ್ರಿಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ.ಎಸ್. ರಾಜೇಂದ್ರ ಬಾಬು ಹೇಳಿದರು. ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಅಣು ವಿದ್ಯುತ್ ಶಕ್ತಿ ಉತ್ಪಾದನೆ ಪರಿಸರ ಸ್ನೇಹಿ ಆಗಿದ್ದರೂ ಕೂಡ ಅವಘಡ ಸಂಭವಿಸಿದಲ್ಲಿ ಉಂಟಾಗುವ ಪರಿಣಾಮಗಳು ಊಹಿಸಲು ಆಸಾಧ್ಯ ಎನ್ನುವ ಸಂಗತಿ ಕುರಿತು ನಮಗೆ ಅರಿವಿರಬೇಕು. ಅಮೇರಿಕ-ಭಾರತದ ಮಧ್ಯೆ 2008ರಲ್ಲಿ ಮಾಡಿಕೊಳ್ಳಲಾದ ನಾಗರಿಕ ಅಣು ಒಪ್ಪಂದ, ರಿಯಾಕ್ಟರ್ಗಳನ್ನು ಉತ್ಪಾದಿಸುವ ಅಮೆರಿಕದ ಕಂಪನಿಗಳು ತಾಯ್ನಾಡಿನಲ್ಲಿ ಅಣು ರಿಯಾಕ್ಟರ್ಗಳನ್ನು ವಿಮೆಗೆ ಒಳಪಡಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು. ಕೇಂದ್ರ ಅಣುಶಕ್ತಿ ಇಲಾಖೆಯ ಕಾನೂನು ಸಲಹೆಗಾರ ಜಿತೇಂದ್ರಕುಮಾರ್ ಅವರು ಮಾತನಾಡಿ, ಭಾರತ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕದಿದ್ದರೂ ತನ್ನ ಬದ್ಧತೆಯಿಂದಾಗಿ ಅಣ್ವಸ್ತ್ರ ಹೊಂದಿರುವ ಅಣುಶಕ್ತಿ ಉತ್ಪಾದಿಸುವ ರಾಷ್ಟ್ರಗಳ ಪೈಕಿ ವಿಶಿಷ್ಟ ಸ್ಥಾನದಲ್ಲಿ ನಿಂತಿದೆ. ಭಾರತದಲ್ಲಿ ಹೇರಳವಾಗಿರುವ ಥೋರಿಯಂನಿಂದ ಅಣು ವಿದ್ಯುತ್ ಶಕ್ತಿ ಉತ್ಪಾದಿಸಲು ಆರಂಭಿಸಿದಲ್ಲಿ ಶಕ್ತಿ ಸಂಪನ್ಮೂಲ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಲಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

