ಧಾರವಾಡ

ಪುನರ್ವಸತಿ ಕಾರ್ಯಕರ್ತರ ಹುದ್ದೆಗಾಗಿ ಅರ್ಜಿ ಆಹ್ವಾನ

Published On :

ಧಾರವಾಡ: ಅಂಗವಿಕಲರಿಗಾಗಿ ಇರುವ ರಾಷ್ಟ್ರೀಯ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಗೌರವಧನ ಆಧಾರದ ಮೇಲೆ ಕಾರ್ಯಕರ್ತರ ಹುದ್ದೆಗಳಿಗೆ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ. ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ, ಅದರಗುಂಚಿ, ನೂಲ್ವಿ, ಅಂಚಟಗೇರಿ, ಕರಡಿಕೊಪ್ಪ, ಕಲಘಟಗಿಯ ದುಮ್ಮವಾಡ, ಸೂರಶೆಟ್ಟಿಕೊಪ್ಪ, ಗಂಜಿಗಟ್ಟಿ, ದೇವಲಿಂಗಿಕೊಪ್ಪ, ಕುಂದಗೋಳದ ಯಲಿವಾಳ, ಹಿರೇಹರಕುಣಿ, ಹರ್ಲಾಪೂರ, ಗುರುವಿನಹಳ್ಳಿ ಹಾಗೂ ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮಗಳಲ್ಲಿ ಆಯಾ ಅರ್ಹ ರಹವಾಸಿಗಳಿಂದ ನೇಮಕ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಹತೆ, ದಾಖಲೆ ಮುಂತಾದ ಹೆಚ್ಚಿನ ವಿವರಗಳಿಗೆ 0836-2435749 ಅಥವಾ ಆಯಾ ತಾಲೂಕಿನ ಎಂಆರ್‌ಡಬ್ಲು ಕಾರ್ಯಕರ್ತರನ್ನು ಸಂಪರ್ಕಿಸಬೇಕು. ಅರ್ಜಿಗಳನ್ನು ಜೂ. 3ರ ಒಳಗಾಗಿ ತಮ್ಮ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಲು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದೆ.
28ರಂದು ಧಾರವಾಡ ತಾಪಂ ಸಾಮಾನ್ಯ ಸಭೆ
ಧಾರವಾಡ: ಧಾರವಾಡ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆಯು ಮೇ 28ರಂದು ಮುಂಜಾನೆ 11ಕ್ಕೆ ಕಚೇರಿಯ ಸಭಾಭವನದಲ್ಲಿ ಜರುಗಲಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
ಜೂ. 10ರಿಂದ ವಾಯುಸೇನಾ ಭರ್ತಿ ರ್ಯಾಲಿ
ಧಾರವಾಡ: ಗುಲ್ಬರ್ಗಾದಲ್ಲಿ ಜೂ. 10ರಂದು ಭಾರತೀಯ ವಾಯುಸೇನೆಗಾಗಿ ಪಿಯುಸಿ ವಿಜ್ಞಾನದಲ್ಲಿ ಕನಿಷ್ಠ ಶೇ. 50 ಗುಣ ಪಡೆದವರಿಗೆ ಸೋಲ್ಜರ್ ಟೆಕ್, ಸರ್ವಿಂಗ್ ಹಾಗೂ ಸೋಲ್ಚರ್ ಕ್ಲರ್ಕ್ ಮುಂತಾದ ಹುದ್ದೆಗಳಿಗೆ ದೈಹಿಕ ಅರ್ಹತೆ, ವೈದ್ಯಕೀಯ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆಗಳ ಆಧಾರದ ಮೇಲೆ ಭರ್ತಿ ರ್ಯಾಲಿ ನಡೆಯಲಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ದೂ.ಸಂ-0836-2440176ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.