ಜಿಲ್ಲೆಯಲ್ಲಿ ತ್ಯಾಗ ಬಲಿದಾನದ ಮೊಹರಂ ಆಚರಣೆ
ಉಪ್ಪಿನ ಬೆಟಗೇರಿ (ಧಾರವಾಡ): ತ್ಯಾಗ ಬಲಿದಾನದ ಸಂಕೇತ ಮೊಹರಂ ಹಬ್ಬವನ್ನು ಧಾರವಾಡ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶುಕ್ರವಾರ ಆಚರಿಸಲಾಯಿತು.
ಮೊಹರಂ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಬೆಸುಗೆಯಾಗಬೇಕೆಂದು ಉಪ್ಪಿನಬೆಟಗೇರಿಯ ಮೂರು ಸಾವಿರ ವಿರಕ್ತಮಠದ ವಿರೂಪಾಕ್ಷ ಸ್ವಾಮೀಜಿ ಹೇಳಿದರು. ಇಲ್ಲಿನ ಹನುಮನಕೊಪ್ಪದಲ್ಲಿ ಮೊಹರಂ ನಿಮಿತ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮೋ ರಕ್ಷತಿ ರಕ್ಷಿತಃ ಎಂದರೆ, ಧರ್ಮ ರಕ್ಷಕರನ್ನು, ಧರ್ಮವೇ ರಕ್ಷಣೆ ಮಾಡುತ್ತದೆ. ಸ್ವಧರ್ಮ ನಿಷ್ಠೆ ಮತ್ತು ಪರ ಧರ್ಮ ಸಹಿಷ್ಣುತೆಯಿಂದ ಮಾತ್ರ ಎಲ್ಲರೂ ಸಹಕಾರಯುತ ಸಹಬಾಳ್ವೆ ನಡೆಸಲು ಸಾಧ್ಯ ಎಂದರು.
ತಾಪಂ ಸದಸ್ಯ ಮೊಯಿದ್ದೀನ ಚೌಧರಿ ಮಾತನಾಡಿದರು. ಗ್ರಾಮದ ಹಣಗಿಕಟ್ಟಿ ಬಾರಾ ಇಮಾಮ ಮಸಜೀದ್ ಮತ್ತು ಹನಮನಕೊಪ್ಪದ ಮಸಜೀದ್ ಜಮಾತ್ ವತಿಯಿಂದ ಕೆಂಡದ ಸೇವೆ ನಡೆಯಿತು. ಸಸಿ ಡೋಲಿ, ಹಸೇನ ಹುಸೇನ, ಹಟೇಲ್ ಬಾದಷಾ, ಬಿಬಿ ಫಾತೀಮಾ, ಲಾಲ್ ಷಾ ವಲಿ, ಬರಾ ಇಮಾಮ, ಸೈಫುದ್ಧೀನ ಷಾ ಸೇರಿದಂತೆ ಅನೇಕ ಡೋಲಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಇಸ್ಲಾಂ ಧರ್ಮ ಗುರು ಆರಿಫುಲ್ಲಾ ಹಕ್ ಷಾ ಖಾದ್ರಿ ಕಲಂದರ, ಪುಷ್ಪಾ ದೊಡವಾಡ, ಸುರೇಶಬಾಬು ತಳವಾರ, ಪರಮೇಶ್ವರ ದೊಡವಾಡ, ರವಿಂದ್ರ ಯಲಿಗಾರ, ಕಲ್ಲಪ್ಪ ಪುಡಕಲಕಟ್ಟಿ, ಗುರುಪಾದಪ್ಪ ಪಟ್ಟಣಶೆಟ್ಟಿ, ಮಂಜು ಸಂಕಣ್ಣವರ, ಮಹಾಂತೇಶ ಅಮರಶೆಟ್ಟಿ, ಕಲ್ಲಪ್ಪಾ ಬೊಬ್ಬಿ ಇದ್ದರು.
ಯಾದವಾಡದಲ್ಲಿ ಆಚರಣೆ: ತಾಲೂಕಿನ ಯಾದವಾಡದಲ್ಲಿಯೂ ಎರಡು ಡೋಲಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮದ ಯುವಕರಿಂದ ಹೆಜ್ಜೆ ಮಜಲು ನಡೆಯಿತು. ಹುಲಿ ವೇಷಾಧಾರಿಗಳು ಡೋಲಿ ಎದುರು ತಮಟೆಯ ಸದ್ದಿಗೆ ಕುಣಿದರು. ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಮಡಿವಾಳಪ್ಪ ದಿಂಡಲಕೊಪ್ಪ, ಶೇಖಣ್ಣ ಕುಂಬಾರ, ರಾಜು ಭಾವಿಮನಿ, ಆನಂದ ಕೇಶಗೊಂಡ, ಶಿವಾನಂದ ಬೆಂಡಿಗೇರಿ, ಗಂಗಯ್ಯ ಚಿಕ್ಕಮಠ, ಶಿವಾನಂದ ತಳವಾರ, ಬುರನ್ ತಹಶೀಲ್ದಾರ ಇದ್ದರು.
---
ಕತ್ತಲ್ ರಾತ್ರಿ: ಸೋಡಾ ಬಾಟಲಿಯಿಂದ ಹಲ್ಲೆ
ಹುಬ್ಬಳ್ಳಿ: ಕೊಕಾ ಕೋಲಾ ಕುಡಿಯುವಷ್ಟು ಹಣ ಇಲ್ಲ. ಬೇಕಿದ್ದರೆ ಬೈಟು ಚಹಾ ಕುಡಿಯುವಾ ಎಂದು ಹೇಳಿದ ಸ್ನೇಹಿತನೊಂದಿಗೆ ಜಗಳ ತೆಗೆದ ಯುವಕನೊಬ್ಬ ರಸ್ತೆ ಮಧ್ಯೆ ಸೋಡಾ ಬಾಟಲಿಯಿಂದ ಹಲ್ಲೆ ಮಾಡಿದ ಕುರಿತು ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೊಹರಂ ಹಬ್ಬದ ಕತ್ತಲ್ ರಾತ್ ನಿಮಿತ್ತ ಸ್ನೇಹಿತರಿಬ್ಬರು ಪಂಜಾಗಳಿಗೆ ಸಕ್ಕರೆ ಊದಿಸಿಕೊಂಡು ಬರುತ್ತಿದ್ದರು. ಈ ಸಂದರ್ಭ ಹಳೇ ಹುಬ್ಬಳ್ಳಿಯ ನಿಸ್ಸಾರ್ ಅಹ್ಮದ್ ಖಾಸಿಮ್ಸಾಬ್ ಗೋಶೇಖ್ ತನ್ನ ಸ್ನೇಹಿತ ಅಲ್ಲಾಭಕ್ಷನಿಗೆ ಕೊಕಾ ಕೋಲಾ ಕುಡಿಸು ಎಂದು ಕೇಳಿದ್ದಾನೆ. ಆದರೆ, ಸಯ್ಯದ್ ನನ್ನ ಬಳಿ ಅಷ್ಟು ಹಣ ಇಲ್ಲ ಬೇಕಿದ್ದರೆ ಬೈಟು ಚಹಾ ಕುಡಿಯೋಣ ಎಂದು ಹೇಳಿದ್ದಾನೆ. ಈ ಮಾತಿಗೆ ಅಕ್ರೋಶಗೊಂಡ ನಿಸ್ಸಾರ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಸೋಡಾ ಬಾಟಲಿಯಿಂದ ತಲೆಗೆ ಏಟು ನೀಡಿದ್ದಾನೆ. ಈ ಕುರಿತು ಸಯ್ಯದ್ ಘಂಟಿಕೇರಿ ಠಾಣೆಯಲ್ಲಿ ದೂರು ನೀಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

