ಈ ಹೆದ್ದಾರಿಯಲ್ಲಿ ತಗ್ಗುಗಳದ್ದೇ ಸಾಮ್ರಾಜ್ಯ
ಕನ್ನಡಪ್ರಭ ವಾರ್ತೆ, ಉಪ್ಪಿನ ಬೆಟಗೇರಿ ನ. 21
ಧಾರವಾಡದಿಂದ ತಾಲೂಕಿನ ಯಾದವಾಡ, ಉಪ್ಪಿನ ಬೆಟಗೇರಿ ಮಾರ್ಗವಾಗಿ ಬೈಲಹೊಂಗಲ ನಗರಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 40 ಕಿ.ಮೀ. ರಾಜ್ಯ ಹೆದ್ದಾರಿ ರಸ್ತೆ ಪೂರ್ತಿ ಹಾಳಾಗಿದ್ದು, ಪ್ರಯಾಣಿಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಲೋಕೋಪಯೋಗಿ ಇಲಾಖೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅಲ್ಲಲ್ಲಿ ನಿರ್ಮಾಣಗೊಂಡ ರಸ್ತೆ ಕಾಮಗಾರಿ ಸಹ ಕಳಪೆಯಾಗಿದ್ದು, ಪ್ರಯಾಣಿಕರು, ರೈತರಿಗೆ ಸಂಕಟಮಯವಾಗಿ ಪರಿಣಮಿಸಿದೆ.
ಈ ರಸ್ತೆಗುಂಟ ಹತ್ತಾರು ಗ್ರಾಮಗಳು ಬರುತ್ತಿದ್ದು, ಗ್ರಾಮಸ್ಥರಿಗೆ ಹದಗೆಟ್ಟ ರಸ್ತೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೆಸರಿಗೆ ಮಾತ್ರ ರಾಜ್ಯ ಹೆದ್ದಾರಿಯಾಗಿದ್ದು ಡಾಂಬರೀಕರಣ ಕಂಡು ದಶಕಗಳು ಸಂದಿವೆ.
ಯಾದವಾಡ ಹಾಗೂ ಉಪ್ಪಿನ ಬೆಟಗೇರಿವರೆಗೆ ಕಳೆದ ವರ್ಷವಷ್ಟೇ ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ನಿರ್ಮಿಸಿದ ರಸ್ತೆ ಪೂರ್ತಿ ಹದಗೆಟ್ಟಿದ್ದು, ಬರೀ ಧೂಳಿನಿಂದ ಕೂಡಿದೆ. ಕಾಮಗಾರಿ ಪೂರ್ತಿ ಕಳಪೆಯಾಗಿದ್ದು, ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಈ ಮಾರ್ಗವಾಗಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯುದ್ದಕ್ಕೂ ಧೂಳು ಆವರಿಸುತ್ತಿರುವುದರಿಂದ ರಸ್ತೆಯ ಬದಿ ವಾಸಿಸುತ್ತಿರುವ ಗ್ರಾಮಸ್ಥರು ಮತ್ತು ಪ್ರಯಾಣಿಕರು ಅಸ್ತಮಾ, ಅಲರ್ಜಿಯಂತಹ ಧೂಳು ಸಂಬಂಧಿ ಕಾಯಿಲೆಗಳಿಂದ ಬಳಲುವಂತಾಗಿದೆ.
ಬಹುತೇಕ ಈ ರಸ್ತೆ ಡಾಂಬರೀಕರಣಗೊಂಡು ಹತ್ತಾರು ವರ್ಷಗಳಾಗಿವೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಅನಾದರಕ್ಕೆ ಒಳಗಾಗಿದೆ. ದಾಖಲೆಗಳಲ್ಲಿ ಮಾತ್ರ ಪ್ರಗತಿ ಕಂಡ ಈ ರಸ್ತೆ ಕಾಮಗಾರಿ ಯಾವಾಗ ಆಗುವುದೋ ಕಾದು ನೋಡಬೇಕಿದೆ ಎನ್ನುತ್ತಾರೆ ಉಪ್ಪಿನ ಬೆಟಗೇರಿಯ ಮಡಿವಾಳಪ್ಪ ತಳವಾರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

