ನಾಳೆ ಆಯ್ಕೆ
ಹುಬ್ಬಳ್ಳಿ: ನ.30 ಮತ್ತು ಡಿಸೆಂಬರ್ 1ರಂದು ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಶ್ರೀ ಸಂಗೊಳ್ಳಿ ರಾಯಣ್ಣ 2013 ದೇಹದಾರ್ಢ್ಯ ಸ್ಪರ್ಧೆಗೆ ಧಾರವಾಡ ಜಿಲ್ಲೆಯ ದೇಹದಾರ್ಢ್ಯ ಪಟುಗಳ ಆಯ್ಕೆ ನ. 23ರಂದು ಸಂಜೆ 5ಕ್ಕೆ ವೀರಾಪುರ ಓಣಿಯ ಮಹಾಬಳೇಶ್ವರ ಕಲ್ಯಾಣಮಂಟಪದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ, ಮಹೇಶ ಉಪ್ಪಿನಕಾಯಿ, ನಾಗಪ್ಪ ನಾಲವಾಡ, ರಾಮಣ್ಣ ಪಾಯನ್ನವರ ಆಗಮಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ಷರೀಫ್ ಮುಲ್ಲಾ 94811-26683, ಶಂಕರ ಪಿಳ್ಳೆ 9449343919 ಸಂಪರ್ಕಿಸಿ.
25ರಂದು ನಾಟಕ
ಹುಬ್ಬಳ್ಳಿ: ಇಲ್ಲಿನ ಬಸವೇಶ್ವರ ನಗರದ ಶಿವಭಕ್ತ ಶಿವಶರಣ ಹರಳಯ್ಯ ನಾಟ್ಯ ಸಂಘದಿಂದ ನ. 25ರ ಸಂಜೆ 6.30ಕ್ಕೆ ಡಾ. ಕೆ.ಎಸ್. ಶರ್ಮಾ ಸಭಾಭವನದಲ್ಲಿ ಶಿವಶರಣ ಹರಳಯ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಕಾರ್ಮಿಕ ಮುಖಂಡ ಡಾ. ಕೆ. ಎಸ್. ಶರ್ಮಾ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಗದೀಶ ಮಂಗಳೂರಮಠ, ವೈ.ಡಿ. ಮಧುರಕರ್, ಎನ್.ಎಚ್. ಕುಲಕರ್ಣಿ, ಸದಾನಂದ ಡಂಗನವರ್ ಆಗಮಿಸಲಿದ್ದಾರೆ.
ಭದ್ರತಾ ಸಿಬ್ಬಂದಿನೇಮಿಸಲು ಸೂಚನೆ
ಹುಬ್ಬಳ್ಳಿ: ಬೆಂಗಳೂರಿನ ಎಟಿಎಂನಲ್ಲಿ ಹಲ್ಲೆ ಪ್ರಕರಣ ಸಂಭವಿಸಿರುವ ಹಿನ್ನೆಲೆಯಲ್ಲಿ ನಗರದ ವ್ಯಾಪ್ತಿಯಲ್ಲಿನ ಎಟಿಎಂಗಳ ಸುರಕ್ಷತೆಗೆ ಸಂಬಂಧಿಸಿದಂತೆ ಪೊಲೀಸ್ ಕಮಿಷನರ್ ಬಿ. ಎ. ಪದ್ಮನಯನ ಅಧ್ಯಕ್ಷತೆಯಲ್ಲಿ ಗುರುವಾರ ಬ್ಯಾಂಕ್ ಅಧಿಕಾರಿಗಳ ಮತ್ತು ಪೊಲೀಸ್ ಸಿಬ್ಬಂದಿ ಸಭೆ ಜರುಗಿತು. ಮೂರು ದಿನಗಳೊಳಗೆ ಎಲ್ಲ ಎಟಿಎಂ ಕೇಂದ್ರಗಳಿಗೆ ಸಶಸ್ತ್ರ ಸಹಿತ ಭದ್ರತಾ ಸಿಬ್ಬಂದಿ ನೇಮಕ ಮಾಡಬೇಕು. ಎಲ್ಲ ಎಟಿಎಂಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ನಿರ್ಜನ ಪ್ರದೇಶಗಳಲ್ಲಿ, ಹೊಸ ಬಡಾವಣೆಗಳಲ್ಲಿರುವ ಎಟಿಎಂ ವಿಶೇಷವಾಗಿ ರಾತ್ರಿ ವೇಳೆ ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸುರಕ್ಷತೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೂ ಕೂಡ ಕೆಲವು ಸೂಚನೆಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ನಿರ್ಜನ ಪ್ರದೇಶಗಳಲ್ಲಿನ ಎಟಿಎಂಗಳಲ್ಲಿ ಹಣ ತೆಗೆಯದೇ ಜನ ನಿಭೀಡ ಸ್ಥಳಗಳಲ್ಲಿರುವ ಎಟಿಎಂಗಳನ್ನು ಉಪಯೋಗಿಸಬೇಕು. ರಾತ್ರಿ ಅಥವಾ ನಿರ್ಜನ ಪ್ರದೇಶದಲ್ಲಿ ಮಹಿಳೆಯರು ಎಟಿಎಂ ಉಪಯೋಗಿಸುವುದಕ್ಕೆ ಕಡಿವಾಣ ಹಾಕಬೇಕು. ಒಂದು ವೇಳೆ ಉಪಯೋಗಿಸುವುದು ಅನಿವಾರ್ಯವಾಗಿದ್ದರೆ ತಮ್ಮೊಂದಿಗೆ ಇನ್ನೊಬ್ಬರನ್ನು ಕರೆದುಕೊಂಡು ಹೋಗಬೇಕು ಎಂದು ಸಭೆಯಲ್ಲಿ ಸೂಚಿಸಲಾಗಿದೆ.
ಅಭಿಮನ್ಯು ಹಡಗಲಿ
ಹುಬ್ಬಳ್ಳಿ: ನವನಗರ ಶಿವಾನಂದ ನಗರದ ನಿವಾಸಿ ಅಭಿಮನ್ಯು ಅರ್ಜುನಪ್ಪ ಹಡಗಲಿ (64) ಮಂಗಳವಾರ ರಾತ್ರಿ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಬಂಧುಗಳು ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

