ಮಾಧ್ಯಮಗಳಲ್ಲಿ ಹಿಂಸೆಯ ವೈಭವೀಕರಣ: ದಾಬಡೆ
ಕನ್ನಡಪ್ರಭ ವಾರ್ತೆ, ಧಾರವಾಡ, ನ. 21
ನಿರಂತರವಾಗಿ ಮಾಧ್ಯಮಗಳಲ್ಲಿ ಹರಿದುಬರುತ್ತಿರುವ ಅಶ್ಲೀಲತೆ ಮತ್ತು ಕ್ರೌರ್ಯ ಮಕ್ಕಳಲ್ಲಿ ವಿಕೃತ ಮನೋಭಾವನೆ ಬೆಳೆಯಲು ಕಾರಣವಾಗುತ್ತಿದೆ ಎಂದು ಚಿಂತಕಿ ಶಾರದಾ ದಾಬಡೆ ವಿಷಾದಿಸಿದರು.
ಹುರಕಡ್ಲಿ ಅಜ್ಜ ಕಾನೂನು ಕಾಲೇಜು ಅಖಿಲ ಭಾರತೀಯ ಮಹಿಳಾ ಸಾಂಸ್ಕೃತಿಕ ಸಂಘಟನೆ, ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಸೇಷನ್ ಆಯೋಜಿಸಿದ್ದ ಮಾಧ್ಯಮಗಳಲ್ಲಿ ಅಶ್ಲೀಲತೆ ಮತ್ತು ವಿದ್ಯಾರ್ಥಿ ಸಂವಾದದಲ್ಲಿ ಅವರು ಮಾತನಾಡಿದರು.
ಮಾದ್ಯಮಗಳಲ್ಲಿ ಹೆಚ್ಚುತ್ತಿರುವ ಅಶ್ಲೀಲತೆ- ವಿದ್ಯಾರ್ಥಿ,ಯುವಕರು ಸಂವಾದದಲ್ಲಿ ಮಾತನಾಡಿದ ಅವರು, ಜಾಗತೀಕರಣದಲ್ಲಿ ಮಹಿಳೆಯನ್ನು ಒಂದು ವಸ್ತುವಿನಂತೆ ಕಾಣಲಾಗುತ್ತಿದೆ. ಭುವನಸುಂದರಿ, ವಿಶ್ವ ಸುಂದರಿ ಅಂತಹ ಸ್ಪರ್ಧೆಗಳನ್ನು ನಡೆಸಿ ಆಯಾ ದೇಶಗಳ ಮಾರುಕಟ್ಟೆಗಳ ಮೇಲೆ ಬಂಡವಾಳ ಶಾಹಿಗಳು ಹಿಡಿತ ಸಾಧಿಸುತ್ತಿದ್ದಾರೆ. ಭಾರತದ ವನಿತೆಯರು ವಿಶ್ವ ಸುಂದರಿಯರಾಗಿ ಆಯ್ಕೆಯಾದ ಸಂದರ್ಭದಲ್ಲಿ ಸೌಂದರ್ಯ ಉಪಕರಣಗಳು ಅತಿ ಹೆಚ್ಚು ಮಾರಾಟವಾಗಿವೆ ಎಂದು ಹೇಳಿದರು.
ಎಐಡಿವೈಓ ಜಿಲ್ಲಾಧ್ಯಕ್ಷ ಲಕ್ಷ್ಮಣ ಜಡಗಣ್ಣವರ, ಹೆಚ್ಚುತ್ತಿರುವ ನಿರುದ್ಯೋಗ, ಕೈಗೆಟುಕದ ಶಿಕ್ಷಣ, ಬೆಲೆ ಏರಿಕೆ ಮುಂತಾದ ಜ್ವಲಂತ ಸಮಸ್ಯೆಗಳಿಂದ ಯುವಜನರನ್ನು ವಿಮುಖರನ್ನಾಗಿಸಲು ಅಶ್ಲೀಲತೆ, ಹಿಂಸೆಯನ್ನು ಮಾಧ್ಯಮಗಳಲ್ಲಿ ವೈಭವಿಕರಿಸಲಾಗುತ್ತಿದೆ. ಇವುಗಳ ವಿರುದ್ಧ ಯುವಜನರು ಪ್ರಜ್ಞಾಪೂರ್ವಕ ಹೋರಾಟ ಮಾಡಬೇಕಿದೆ ಎಂದರು. ಎಸ್.ಸಿ ಕೊಟಗಿ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಗಳ ಶರಣು ಗೋನವಾರ, ಪ್ರಭಾವತಿ ಗೂಗಲ್, ಪ್ರಾಚಾರ್ಯ ಡಾ.ಎಸ್.ವಿ. ಸೋಗಿ ಇದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

