ಆತ್ಮವಿಶ್ವಾಸ ವಿಕಸನದಿಂದ ಉತ್ತಮ ಭವಿಷ್ಯ
ಹುಬ್ಬಳ್ಳಿ: ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಗುರುತಿಸಿಕೊಳ್ಳುವ ಮೂಲಕ ಆತ್ಮವಿಶ್ವಾಸ ವಿಕಸನಗೊಳಿಸಿ ಅತ್ಯುತ್ತಮ ಭವಿಷ್ಯ ನಿರೂಪಿಸಿಕೊಳ್ಳಬೇಕೆಂದು ಕಾದಂಬರಿಕಾರ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಯಂಡಮೂರಿ ವೀರೇಂದ್ರನಾಥ್ ಸಲಹೆ ನೀಡಿದರು.
ನಗರದ ಕೆಎಲ್ಇ ಐಎಂಎಸ್ಆರ್ ಕಾಲೇಜಿನಲ್ಲಿ ಎಂಬಿಎ ವಿದ್ಯಾರ್ಥಿಗಳೊಂದಿಗೆ ಸೋಮವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದ ವಿದ್ಯಾರ್ಥಿಗಳು ಜ್ಞಾನವಂತರು. ಆದರೆ ಹಿಂಜರಿಕೆಯ ಕಾರಣ ಮುನ್ನುಗ್ಗುವಿಕೆಯ ಕೊರತೆ ಲಕ್ಷಣಗಳು ಕಾಣುತ್ತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವ್ಯಕ್ತಿತ್ವವೆನ್ನುವುದು ಎರಡು ಬದಿ ಹೊಂದಿದ ಮುಖವಾಡ. ಒಂದು ಬಾಹ್ಯ, ಮತ್ತೊಂದು ಆಂತರಿಕ. ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಜತೆಗೆ ಜ್ಞಾಪಕ ಶಕ್ತಿ, ಏಕಾಗ್ರತೆ, ಶಬ್ದ ಭಂಡಾರ, ಸಮಯ ಪ್ರಜ್ಞೆಗಳಂಥ ಮೃದು ಕೌಶಲ್ಯಗಳನ್ನೂ ಅಳವಡಿಸಿಕೊಂಡರೆ ಸಂದರ್ಶನಗಳಲ್ಲಿ ಯಶಸ್ವಿಯಾಗಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದು ಎಂದು ತಿಳಿಸಿದರು.
ಐಎಂಎಸ್ಆರ್ ನಿರ್ದೇಶಕ ಡಾ. ಪಿ.ಬಿ. ರೂಡಗಿ ಸ್ವಾಗತಿಸಿದರು. ಡೀನ್ ಅಕ್ಯಾಡಿಮಿಕ್ ಪ್ರೊ. ಎನ್.ಎಸ್. ಧೋಪೇಶ್ವರ ಪರಿಚಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

