6ರಂದು ಮಗು ನೀ ನಗು ಸಮಾರೋಪ: ಡಾ. ರಾಜನ್ ದೇಶಪಾಂಡೆ
ಧಾರವಾಡ: ಮಕ್ಕಳ ಅಕಾಡೆಮಿ, ಆರ್.ಕೆ. ಫೌಂಡೇಶನ್, ಜಿಲ್ಲಾಡಳಿತ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ ಜಂಟಿಯಾಗಿ ಅಪೌಷ್ಟಿಕ ಮಕ್ಕಳಿಗಾಗಿ ಆಯೋಜಿಸಿದ್ದ ಮಗು ನೀ ನಗು ಕಾರ್ಯಕ್ರಮದ ಸಮಾರೋಪ ಅ. 6ರಂದು ಬೆಳಗ್ಗೆ 10ಕ್ಕೆ ವಿದ್ಯಾವರ್ಧಕ ಸಂಘದಲ್ಲಿ ನಡೆಯಲಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಮಕ್ಕಳ ಅಕಾಡೆಮಿ ಮುಖ್ಯಸ್ಥ ಡಾ. ರಾಜನ್ ದೇಶಪಾಂಡೆ, ಮಗು ನೀ ನಗು ಕಾರ್ಯಕ್ರಮದಡಿ ಜನವರಿ ಕೊನೆಯಲ್ಲಿ ಕೆಲ ಕೊಳಚೆ ಪ್ರದೇಶದ ಅಪೌಷ್ಟಿಕ ಮಕ್ಕಳನ್ನು ಸಮೀಕ್ಷೆ ಹಾಗೂ ಪೌಷ್ಟಿಕತೆ ಪೂರೈಸುವ ಸಲುವಾಗಿ ದತ್ತು ಪಡೆಯಲಾಗಿತ್ತು. ಪ್ರಸ್ತುತ ಸ್ಲಂ ನಿವಾಸಿಗಳಿಗೆ ಸರ್ಕಾರ ಎಲ್ಲ ಸೌಲಭ್ಯ ನೀಡುತ್ತಿದೆ. ಆದರೆ, ಸ್ಲಂ ನಿವಾಸಿಗಳು ಯೋಜನೆಗಳ ಸರಿಯಾದ ಸದುಪಯೋಗ ಪಡಿಸಿಕೊಳ್ಳುತ್ತಿಲ್ಲ. ಅಲ್ಲದೇ, ಆಹಾರ ಸೇವನೆಯ ತಿಳಿವಳಿಕೆ ಕೊರತೆ, ಶುದ್ಧ ಕುಡಿಯುವ ನೀರು, ಶುಚಿತ್ವ ಕೊರತೆ ಹಾಗೂ ಜಂಕ್ ಪುಡ್ ಸೇವನೆಯಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿರುವುದು ತಿಳಿದು ಬಂದಿದೆ ಎಂದರು. ದತ್ತು ಪಡೆದ ಅಪೌಷ್ಟಿಕ ಮಕ್ಕಳಿಗೆ ಈ ಕಾರ್ಯಕ್ರಮದ ಮೂಲಕ ಅಪೌಷ್ಟಿಕತೆ ನೀಗಿಸುವ ಎಲ್ಲ ಸಲಹೆ ನೀಡಲಾಗಿದೆ. ಸದ್ಯ ಅಪೌಷ್ಟಿಕತೆ ಹೊಂದಿದ ಮಕ್ಕಳ ತೂಕ ಎರಡು ಕೆಜಿಯಷ್ಟು ಹೆಚ್ಚಾಗಿದೆ. ಪೌಷ್ಟಿಕತೆ ಇರುವ ಮಕ್ಕಳಿಗೆ ಇದೀಗ ಸೋಂಕು ರೋಗಗಳು ತಗಲುತ್ತಿದ್ದು, ಮಕ್ಕಳ ಹಸಿವು ಕಡಿಮೆಯಾಗುತ್ತಿದೆ. ಅಲ್ಲದೇ, ಸೇವನೆ ಮಾಡಿದ ಆಹಾರ ಜೀರ್ಣವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಹಾಗೂ ಪೌಷ್ಟಿಕಾಂಶವುಳ್ಳ ಶುದ್ಧ ಆಹಾರ ನೀಡುವ ಮೂಲಕ ಮಕ್ಕಳಲ್ಲಿ ಗಣನೀಯ ಪೌಷ್ಟಿಕತೆ ಹೆಚ್ಚಿಸಲಾಯಿತು ಎಂದು ತಿಳಿಸಿದರು. ಅ. 6ರಂದು ನಡೆಯುವ ಸಮಾರೋಪವನ್ನು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಕೆ. ನಟರಾಜನ್ ಉದ್ಘಾಟಿಸುವರು. ಜಿಲ್ಲಾಧಿಕಾರಿ ಸಮೀರ್ ಶುಕ್ಲ, ವಿಶ್ವ ಆರೋಗ್ಯ ಸಂಸ್ಥೆ ಡಾ. ವಿ.ಆರ್. ಪಾಂಡುರಂಗಿ, ಡಾ. ಪೃಥ್ವಿಷ ಎಸ್., ನವೀನ ಝಾ, ಎಂ.ಎಸ್.ಆರ್.ಕೆ. ಪ್ರಸಾದ, ತ್ರಿಷಲಾ ಅಪ್ಪಣ್ಣವರ ಭಾಗವಹಿಸುವರು ಎಂದು ಡಾ. ರಾಜನ್ ದೇಶಪಾಂಡೆ ತಿಳಿಸಿದರು. ಡಾ. ರಮಾ ನಾಯ್ಕ, ಡಾ. ಎಂ.ಬಿ. ನಲವತ್ತವಾಡ, ಎಂ.ವೈ. ಸಾವಂತ, ಡಾ. ವೆಂಕಮ್ಮ ಗಾಂವಕರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

