ಸಾಂಸ್ಕೃತಿಕ ಕಾರ್ಯಕ್ರಮದಿಂದ ಕಲೆ ಬೆಳಕಿಗೆ
ಕುಂದಗೋಳ: ತಾಲೂಕಿನ ಗುಡಗೇರಿ ಗ್ರಾಮದ ದ್ಯಾಮವ್ವದೇವಿಯ ನವರಾತ್ರೋತ್ಸವ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದರಿಂದ ಕಲಾವಿದರ ಕಲೆ ಬೆಳಕಿಗೆ ಬರಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ ಹೇಳಿದರು.
ಗುಡಗೇರಿ ಗ್ರಾಮದ ದ್ಯಾಮವ್ವದೇವಿ ನವರಾತ್ರೋತ್ಸವ ಅಂಗವಾಗಿ ಗ್ರಾಮದೇವಿ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮ ಸಾನ್ನಿಧ್ಯ ವಹಿಸಿದ್ದ ಗಂಜಿಗಟ್ಟಿ ಶ್ರೀಗಳಾದ ಶ್ರೀಶಿವಲಿಂಗೇಶ್ವರ ಸ್ವಾಮಿಗಳು ಮಾತನಾಡಿ, ಒಂಭತ್ತು ದಿನಗಳ ರಾತ್ರಿಯಂದು ಸದಭಿರುಚಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಗುಡಗೇರಿ ಗ್ರಾಮದ ಸದ್ಭಕ್ತ ಮಂಡಳಿ ಕಾರ್ಯ ನಿಜಕ್ಕೂ ಶ್ಲಾಘನೀಯ. ನಮ್ಮ ಸಂಸ್ಕೃತಿ ಬಿಂಬಿಸುವ ಹತ್ತಾರು ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ನಮ್ಮ ಪರಂಪರೆಗೆ ಸಾಕ್ಷಿಯಾಗಲಿ ಎಂದರು.
ಹೊಳೆಇಟಗಿ, ಗುಡಗೇರಿ ಮಠಗಳ ಮಡಿವಾಳೇಶ್ವರ ಶ್ರೀ ಆಶೀರ್ವಚನ ನೀಡಿದರು. ಜಿಪಂ ಸದಸ್ಯ ವೆಂಕನಗೌಡ ಹಿರೇಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸಿ.ಎಸ್. ಶಿವಳ್ಳಿ, ಪ್ರೊ. ಕೆ.ಎಸ್. ಕೌಜಲಗಿ, ಗ್ರಾಪಂ ಅಧ್ಯಕ್ಷೆ ಗೀತಾ ಸುತಾರ, ಪಿ.ಸಿ. ಮಳ್ಳೊಳ್ಳಿ ನಿರೂಪಿಸಿ, ವಂದಿಸಿದರು.
ರಂಜಿಸಿದ ನೃತ್ಯ, ಏಕಪಾತ್ರಾಭಿನಯ
ಕುಂದಗೋಳ: ಗುಡಗೇರಿ ಗ್ರಾಮದಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರೋಣ ತಾಲೂಕು ಕೊತಬಾಳ ಗ್ರಾಮದ ಅರುಣೋದಯ ಜಾನಪದ ಕಲಾ ತಂಡದವರು ಜಾನಪದ ಶೈಲಿಯ ಜೋಗತಿ ನೃತ್ಯಕ್ಕೆ ಪ್ರೇಕ್ಷಕರು ತಲೆದೂಗಿದರು.
ಬಸವರಾಜ ಅವರ ಹಾಸ್ಯ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ರಾಮಕೃಷ್ಣ ಪೂಜಾರ ಬಬ್ರುವಾಹನ, ಸಂಗೊಳ್ಳಿ ರಾಯಣ್ಣ, ಸಿಂಧೂರ ಲಕ್ಷ್ಮಣ ನಾಟಕಗಳ ಏಕಾಭಿನಯಪಾತ್ರವು ಜನರು ಹುಬ್ಬೇರಿಸುವಂತೆ ಮಾಡಿದವು. ಒಟ್ಟು 20 ಕಲಾವಿದರು 3 ಗಂಟೆಗಳ ಕಾಲ ವಿವಿಧ ಪಾತ್ರಾಭಿನಯಗಳಿಂದ ಜನರನ್ನು ರಂಜಿಸಿದರು. ಜಾನಪದ ಸಾಹಿತ್ಯ ಕುರಿತು ಶಂಭು ಬಳಿಗಾರ ಉಪನ್ಯಾಸ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

